ಕೊಳ್ಳೇಗಾಲ ನಗರಸಭೆ ಎಡವಟ್ಟು – ಬದುಕಿರುವ ವ್ಯಕ್ತಿಯನ್ನೇ ಶವಸಂಸ್ಕಾರ ಮಾಡಲಾಗಿದೆ ಅಂತಾ ದೃಢೀಕರಣ ಪತ್ರ

Public TV
1 Min Read

ಚಾಮರಾಜನಗರ: ಬದುಕಿರುವ ವ್ಯಕ್ತಿಯನ್ನೇ ಶವಸಂಸ್ಕಾರ ಮಾಡಲಾಗಿದೆ ಎಂದು ದೃಢೀಕರಣ ಪತ್ರ ನೀಡುವ ಮೂಲಕ ಕೊಳ್ಳೇಗಾಲ ನಗರಸಭೆ ಎಡವಟ್ಟು ಮಾಡಿದೆ.

ನಿಧನರಾಗಿದ್ದ ತಾಯಿಯ ಶವಸಂಸ್ಕಾರದ ದೃಢೀಕರಣ ಪತ್ರಕ್ಕಾಗಿ ಶಂಕರ್ ಎಂಬವರು ಅರ್ಜಿ ಸಲ್ಲಿಸಿದ್ದರು. ಆದರೆ, ಶಂಕರ್ ಅವರ ಶವಸಂಸ್ಕಾರ ನೆರವೇರಿಸಲಾಗಿದೆ ಎಂದು ನಗರಸಭೆ ಅಧಿಕಾರಿಗಳು ದೃಢೀಕರಣ ಪತ್ರ ನೀಡಿದ್ದಾರೆ.

ಕೊಳ್ಳೇಗಾಲ ಕುರುಬರ ಬೀದಿಯ ನಿವಾಸಿಯಾಗಿರುವ ಶಂಕರ್ ಅವರ ಪುಟ್ಟಮ್ಮ ಅನಾರೋಗ್ಯದಿಂದ ಬೆಂಗಳೂರಿನಲ್ಲಿ ನಿಧನರಾಗಿದ್ದರು. ಅ.27 ರಂದು ಕೊಳ್ಳೇಗಾಲಕ್ಕೆ ತಂದು ಶವಸಂಸ್ಕಾರ ಮಾಡಲಾಗಿತ್ತು. ಈ ಬಗ್ಗೆ ದೃಢೀಕರಣ ಪತ್ರಕ್ಕಾಗಿ ಪುಟ್ಟಮ್ಮ ಅವರ ಪುತ್ರ ಶಂಕರ್ ಅರ್ಜಿ ಸಲ್ಲಿಸಿದ್ದರು.

ನಿಧನರಾದ ತಾಯಿಯ ಆಧಾರ್ ಕಾರ್ಡ್ ಸಹ ನೀಡಿದ್ದರು. ಆದರೆ, ಶಂಕರ್ ಅವರ ಶವಸಂಸ್ಕಾರ ಮಾಡಲಾಗಿದೆ ಎಂದು ನಗರಸಭೆ ಅಧಿಕಾರಿಗಳು ದೃಢೀಕರಣ ಪತ್ರ ನೀಡಿದ್ದಾರೆ. ತಮ್ಮ ಶವಸಂಸ್ಕಾರ ಎಂದು ಉಲ್ಲೇಖಿಸಿರುವ ದೃಢೀಕರಣ ಪತ್ರ ನೋಡಿ ವ್ಯಕ್ತಿ ಹೌಹಾರಿದ್ದಾರೆ.

Share This Article