ಮಮತಾ ಬ್ಯಾನರ್ಜಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ ತುರ್ತು ಭೂಸ್ಪರ್ಶ

Public TV
1 Min Read

ಕೋಲ್ಕತ್ತಾ: ಹವಾಮಾನ ವೈಪರೀತ್ಯದ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ ತುರ್ತು ಭೂಸ್ಪರ್ಶ ಮಾಡಿದೆ.

ಪಂಚಾಯತ್‌ ಚುನಾವಣೆ ಪ್ರಚಾರ ಮುಗಿಸಿ ಮಮತಾ ಬ್ಯಾನರ್ಜಿ ಅವರು ಬಾಗ್ದೋಗ್ರಾದಿಂದ ಜಲಪೈಗೂರಿಗೆ ಹೆಲಿಕಾಪ್ಟರ್‌ನಲ್ಲಿ ತೆರಳುತ್ತಿದ್ದರು. ಈ ಭಾಗದಲ್ಲಿ ಭಾರೀ ಮಳೆಯ ಹಿನ್ನಲೆಯಲ್ಲಿ ಉತ್ತರ ಬಂಗಾಳದ ಸಲಗರಾ ಸೇನಾ ವಾಯುನೆಲೆಯಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ಇದನ್ನೂ ಓದಿ: ವಿಪಕ್ಷ ನಾಯಕರು 20 ಲಕ್ಷ ಕೋಟಿ ಹಗರಣದ ಗ್ಯಾರಂಟಿ ಕೊಡುತ್ತಿದ್ದಾರೆ – ವಿರೋಧ ಪಕ್ಷದ ವಿರುದ್ಧ ಮೋದಿ ಕಿಡಿ

ಇಂದು ಮಧ್ಯಾಹ್ನ ಎರಡು ಗಂಟೆಗೆ ಈ ಘಟನೆ ನಡೆದಿದೆ. ‘ಹೆಲಿಕಾಪ್ಟರ್‌ ಲ್ಯಾಂಡ್‌ ಆಗಬೇಕಿದ್ದ ಭಾಗದಲ್ಲಿ ಭಾರೀ ಮಳೆಯಾಗುತ್ತಿತ್ತು. ಹೀಗಾಗಿ ಪೈಲಟ್ ತುರ್ತು ಲ್ಯಾಂಡಿಂಗ್ ಮಾಡಲು ನಿರ್ಧರಿಸಿದರು’ ಎಂದು ಮೂಲಗಳು ತಿಳಿಸಿವೆ.

ಬ್ಯಾನರ್ಜಿ ಅವರು ಬಾಗ್ಡೋಗ್ರಾ ವಿಮಾನ ನಿಲ್ದಾಣಕ್ಕೆ ರಸ್ತೆ ಮೂಲಕ ಪ್ರಯಾಣಿಸಿ, ನಂತರ ಕೋಲ್ಕತ್ತಾಗೆ ಹಿಂತಿರುಗಿದರು. ಇದನ್ನೂ ಓದಿ: ಸ್ಕೂಟರ್‌ನಲ್ಲಿ 7 ಮಕ್ಕಳನ್ನು ಒಟ್ಟಿಗೆ ಕರೆದೊಯ್ದ ವ್ಯಕ್ತಿ ವಿರುದ್ಧ ಎಫ್‍ಐಆರ್

ಜುಲೈ 8 ರಂದು ಮತದಾನ ನಡೆಯಲಿರುವ ಪಂಚಾಯತ್ ಚುನಾವಣೆಯ ಪ್ರಚಾರಕ್ಕಾಗಿ ಮುಖ್ಯಮಂತ್ರಿಗಳು ಉತ್ತರ ಪಶ್ಚಿಮ ಬಂಗಾಳದ ಕೆಲವು ಭಾಗಗಳಲ್ಲಿ ಪ್ರವಾಸ ಕೈಗೊಂಡಿದ್ದರು.

Share This Article
ಹೊಸ ಲುಕ್‌ನಲ್ಲಿ ಹಾಟ್ ಆಗಿ ಮಿಂಚಿದ ಮಿಲ್ಕಿ ಬ್ಯೂಟಿ ಹೊಸ ಫೋಟೋಶೂಟ್‌ನಲ್ಲಿ ಹರ್ಷಿಕಾ ಹಾಟ್ ಪೋಸ್ ಹಾಟ್ ಹಾಟ್ ಆಗಿ ಕಾಣಿಸಿಕೊಂಡ ಕೆಜಿಎಫ್ ನಟಿ ಹಾಟ್‌ ಲುಕ್‌ನಲ್ಲಿ ಕಾಣಿಸಿಕೊಂಡ ನಟಿ ಆಶಿಕಾ ರಂಗನಾಥ್‌ ಹಾಟ್‌ ಲುಕ್‌ನಲ್ಲಿ ನಟಿ ನಭಾ ನಟೇಶ್ ಹಾಟ್‌ ಲುಕ್‌ ಬೆಡಗಿ ಸಾನ್ಯಾ ಹಾಟ್ ಬ್ಯೂಟಿ ಲಕ್ಷ್ಮಿ ರೈ: ಬೆಳಗಾವಿ ಸುಂದರಿಯ ಫೋಟೋ ವೈರಲ್ ಹಾಟ್ ಫೋಟೋಶೂಟ್ ಮಾಡಿ ಪಡ್ಡೆಹುಡುಗರ ನಿದ್ದಕದ್ದ ಶರಣ್ಯಾ ಹಾಟ್ ಆಗಿ ಕಾಣಿಸಿಕೊಂಡ ಸ್ಯಾಮ್..! ಹಾಟ್ ಅವತಾರದಲ್ಲಿ ಮಾನ್ವಿತಾ