ಹೆಲಿಕಾಪ್ಟರ್‌ ಒಳಗೆ ಆಯತಪ್ಪಿ ಬಿದ್ದ ದೀದಿ- ಸಣ್ಣಪುಟ್ಟ ಗಾಯ

Public TV
1 Min Read

ನವದೆಹಲಿ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamta Banerjee) ಅವರು ಇಂದು ಹೆಲಿಕಾಪ್ಟರ್ ಒಳಗೆ ಹೋಗುವಾಗ ಕಾಲು ಜಾರಿ ಬಿದ್ದ ಪ್ರಸಂಗ ನಡೆದಿದೆ.

ಪಶ್ಚಿಮ ಬರ್ಧಮಾನ್‌ನ ದುರ್ಗಾಪುರದಲ್ಲಿ ಈ ಘಟನೆ ನಡೆದಿದೆ. ದೀದಿ ದುರ್ಗಾಪುರದಿಂದ ಅಸನ್ಸೋಲ್‌ ತೆರಳಬೇಕಾಗಿತ್ತು. ಹೀಗಾಗಿ ಹೆಲಿಕಾಪ್ಟರ್‌ ಹತ್ತಿ ಒಳಗೆ ಹೋಗಿ ಸೀಟಲ್ಲಿ ಕುಳಿತುಕೊಳ್ಳಲು ನೋಡಿದಾಗ ಆಯತಪ್ಪಿ ಬಿದ್ದಿದ್ದಾರೆ. ಪರಿಣಾಮ ಸಣ್ಣಪುಟ್ಟ ಗಾಯಗಳಾಗಿವೆ.

ಮಮತಾ ಸ್ಲಿಪ್‌ ಆಗಿ ಬೀಳುತ್ತಿದ್ದಂತೆಯೇ ಭದ್ರತಾ ಸಿಬ್ಬಂದಿ ಅವರಿಗೆ ಸಹಾಯ ಮಾಡಿದ್ದಾರೆ. ಹೀಗಾಗಿ ಭಾರೀ ಅನಾಹುತವೊಂದು ತಪ್ಪಿದಂತಾದರೂ ಸಣ್ಣಪುಟ್ಟ ಗಾಯಗಳಾಗಿವೆ. ತಿಂಗಳ ಹಿಂದೆ ಕೋಲ್ಕತ್ತಾದ ಕಾಳಿಘಾಟ್ ನಿವಾಸದಲ್ಲಿ ಬಿದ್ದು ಮಮತಾ ಬ್ಯಾನರ್ಜಿ ಅವರ ಹಣೆಗೆ ಗಾಯವಾಗಿತ್ತು. ಕೂಡಲೇ ಅವರನ್ನು  ಕೋಲ್ಕತ್ತಾದ ಸರ್ಕಾರಿ ಎಸ್‌ಎಸ್‌ಕೆಎಂ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ಇದನ್ನೂ ಓದಿ: ಆಪ್ ಶಾಸಕ ಅಮಾನತುಲ್ಲಾ ಖಾನ್‌ಗೆ ಜಾಮೀನು

Share This Article