ಬಿಜೆಪಿಯವರು ಹಗಲುಗನಸು ಕಾಣುವುದನ್ನು ಬಿಡಬೇಕು: ಮೋದಿಗೆ ಮಮತಾ ಬ್ಯಾನರ್ಜಿ ಟಾಂಗ್

Public TV
2 Min Read

ಕೋಲ್ಕತ್ತಾ: ಮುಂಬರುವ 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಗೆಲುವು ರಾಷ್ಟ್ರದ ಚಿತ್ತವನ್ನು ಪ್ರತಿಬಿಂಬಿಸುತ್ತದೆ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಯನ್ನು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ನಿರಾಕರಿಸಿದ್ದು, ಬಿಜೆಪಿಯವರು ಹಗಲುಗನಸು ಕಾಣುವುದನ್ನು ಬಿಡಬೇಕು ಎಂದು ಟಾಂಗ್ ನೀಡಿದರು.

ಬಿಜೆಪಿ ಗೆಲುವು ಜನಾದೇಶವಲ್ಲ. ಚುನಾವಣಾ ಯಂತ್ರಗಳು, ಕೇಂದ್ರ ಪಡೆಗಳು ಮತ್ತು ಏಜೆನ್ಸಿಗಳ ಸಹಾಯದಿಂದ ಗೆದ್ದಿದೆ ಎಂದು ಇತರ ರಾಜ್ಯಗಳ ಜೊತೆಗೆ ಉತ್ತರ ಪ್ರದೇಶದಲ್ಲಿ ಬಿಜೆಪಿ ಗೆಲುವಿನ ದಾಖಲೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿದರು. ಇದನ್ನೂ ಓದಿ: ನಾನೊಬ್ಬ ಅಧ್ಯಕ್ಷ, ಆದರೆ ಅದಕ್ಕೂ ಮೊದಲು 2 ಮಕ್ಕಳ ತಂದೆ: ಉಕ್ರೇನ್ ಅಧ್ಯಕ್ಷ

2024 ರಲ್ಲಿ ಬಿಜೆಪಿಯನ್ನು ಸೋಲಿಸಲು ಕಾಂಗ್ರೆಸ್ ಲೆಕ್ಕ ಹಾಕುತ್ತಿದೆ ಎಂಬ ಮಾತಿಗೆ ಅರ್ಥವಿಲ್ಲ. ರಾಜ್ಯ ಚುನಾವಣಾ ಫಲಿತಾಂಶಗಳು ಕೇಂದ್ರದಲ್ಲಿ ಆಡಳಿತ ಪಕ್ಷಕ್ಕೆ ಭಾರಿ ಉತ್ತೇಜನ ನೀಡಿರುವುದು ವಿರೋಧ ಪಕ್ಷಗಳ ಸಂಯುಕ್ತ ಒಕ್ಕೂಟಗಳನ್ನು ಪುನರುಜ್ಜೀವನಗೊಳಿಸಿದೆ ಎಂದರು.

ಕೋಲ್ಕತ್ತಾದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಚುನಾವಣಾ ಯಂತ್ರಗಳು ಮತ್ತು ಕೇಂದ್ರೀಯ ಪಡೆಗಳು, ಏಜೆನ್ಸಿಗಳ ಸಹಾಯದಿಂದ ಬಿಜೆಪಿಯವರು ಗೆದ್ದಿದ್ದಾರೆ. ಕೆಲವು ರಾಜ್ಯಗಳಲ್ಲಿ ಈಗ ಅವರು ಜಿಗಿಯುತ್ತಿದ್ದಾರೆ. ಸದ್ಯ ಕೆಟಲ್ ಡ್ರಮ್ ಭಾರಿಸುತ್ತಿದ್ದರೂ ಅವರಿಗೆ ಸಂಗೀತ ನುಡಿಸಲು ಸಾಧ್ಯವಿಲ್ಲ. ಏಕೆಂದರೆ ಸಂಗೀತಕ್ಕೆ ನಿಮಗೆ ಹಾರ್ಮೋನಿಯಂ ಅಗತ್ಯವಿದೆ ಎಂದು ತಿರುಗೇಟು ನೀಡಿದರು. ಇದನ್ನೂ ಓದಿ: ಉಕ್ರೇನ್‌ ಮೇಯರ್‌ ಕಿಡ್ನಾಪ್ ಮಾಡಿದ ರಷ್ಯಾ ಸೇನೆ

 

ಇವಿಎಂ ತೆಗೆದಿದ್ದಕ್ಕಾಗಿ ವಾರಣಾಸಿಯ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರನ್ನು ಅಮಾನತುಗೊಳಿಸಲಾಗಿತ್ತು. ಇದು ದೊಡ್ಡ ವಿಷಯವಾಗಿದೆ. ಹೀಗಾಗಿ ಅಖಿಲೇಶ್ ಯಾದವ್ ಅವರನ್ನು ಸೋಲುವಂತೆ ಮಾಡಲಾಗಿದೆ ಎಂದು ನಾನು ಭಾವಿಸುತ್ತೇನೆ. ಇದರಲ್ಲಿ ಲೂಟಿ ನಡೆದಿದೆ. ಅಖಿಲೇಶ್ ಅವರು ಈ ವಿಚಾರವಾಗಿ ಖಿನ್ನತೆಗೆ ಒಳಗಾಗಬಾರದು ಮತ್ತು ಅಸಮಾಧಾನಗೊಳ್ಳಬಾರದು. ಅವರು ಜನರ ಬಳಿಗೆ ಹೋಗಿ ಈ ಬಗ್ಗೆ ತಿಳಿಸಿ ಬಿಜೆಪಿ ವಿರುದ್ಧ ಸವಾಲು ಹಾಕಬೇಕು ಎಂದು ತಿಳಿಸಿದರು. ಇದನ್ನೂ ಓದಿ: ರಷ್ಯಾ ಉಕ್ರೇನ್ ಮೇಲೆ ವ್ಯಾಕ್ಯೂಮ್ ಬಾಂಬ್ ಹಾಕುವುದು ಖಚಿತ ಎಂದ ಬ್ರಿಟನ್

ಜನರು ಮತ ಚಲಾಯಿಸಲು ಬಳಸಿದ ಮತ್ತು ನಂತರ ಎಣಿಕೆಗೆ ತಂದ ಯಂತ್ರಗಳೇ ಎಂಬುದನ್ನು ನೋಡಲು ಎಲ್ಲಾ ಇವಿಎಂಗಳನ್ನು ಫೋರೆನ್ಸಿಕ್ ಪರೀಕ್ಷೆಗೆ ಒಳಪಡಿಸಬೇಕು. ಬಿಜೆಪಿ ಗೆದ್ದಿದ್ದರೆ, ಅದು ಜನಮತದಿಂದ ಗೆದ್ದಿಲ್ಲ, ಇದು ಜನಾದೇಶವಲ್ಲ, ಯಂತ್ರೋಪಕರಣಗಳ ಆದೇಶ ಎಂದು ಹೇಳಿದರು.

ಇದೇ ವೇಳೆ 2024ರ ಚುನಾವಣೆಯ ಕುರಿತಂತೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ವಿರುದ್ಧ ಹೋರಾಡಲು ಬಯಸುವ ಎಲ್ಲಾ ರಾಜಕೀಯ ಪಕ್ಷಗಳು ಒಟ್ಟಾಗಿ ಕೆಲಸ ಮಾಡಬೇಕು ಎಂದು ನಾನು ಹೇಳುತ್ತೇನೆ. ಕಾಂಗ್ರೆಸ್ ಅನ್ನು ಅವಲಂಬಿಸುವುದರಲ್ಲಿ ಯಾವುದೇ ಅರ್ಥವಿಲ್ಲ. ಕಾಂಗ್ರೆಸ್ ಮೊದಲು ತಮ್ಮ ಸಂಘಟನೆಯ ಮೂಲಕ ಇಡೀ ದೇಶವನ್ನು ವಶಪಡಿಸಿಕೊಳ್ಳುತ್ತಿತ್ತು. ಆದರೆ ಈಗ ಅವರಿಗೆ ಆಸಕ್ತಿ ಇಲ್ಲ ಮತ್ತು ಜನರು ಅವರ ಮೇಲೆ ಇಟ್ಟಿರುವ ವಿಶ್ವಾಸವನ್ನು ಕಳೆದುಕೊಳ್ಳುತ್ತಿದ್ದಾರೆ. ಹಲವಾರು ಪ್ರಾದೇಶಿಕ ರಾಜಕೀಯ ಪಕ್ಷಗಳಿವೆ. ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು. ಆಗ ಈ ಬಗ್ಗೆ ಖಂಡಿತವಾಗಿಯೂ ನಿರ್ಧಾರ ತೆಗೆದುಕೊಳ್ಳಬಹುದು ಎಂದರು.

Share This Article
Leave a Comment

Leave a Reply

Your email address will not be published. Required fields are marked *