Kolkata Horror | ಕಿರಿಯ ವೈದ್ಯರಿಗೆ ನಾನು ಎಂದಿಗೂ ಬೆದರಿಕೆ ಹಾಕಿಲ್ಲ: ಮಮತಾ ಬ್ಯಾನರ್ಜಿ

Public TV
2 Min Read

ನವದೆಹಲಿ: ಕೋಲ್ಕತ್ತಾ ವೈದ್ಯಕೀಯ ಕಾಲೇಜಿನಲ್ಲಿ ಟ್ರೈನಿ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ (Kolkata Trainee Doctor Case) ಖಂಡಿಸಿ ಪ್ರತಿಭಟಿಸುತ್ತಿರುವ ವೈದ್ಯರಿಗೆ ನಾನು ಎಂದಿಗೂ ಬೆದರಿಕೆ ಹಾಕಿಲ್ಲ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಸ್ಪಷ್ಟನೆ ನೀಡಿದ್ದಾರೆ.

ಧರಣಿ ನಿರತ ಕಿರಿಯ ವೈದ್ಯರಿಗೆ ಬೆದರಿಕೆ ಹಾಕಿದ್ದಾರೆ ಎನ್ನುವ ಬಿಜೆಪಿ (BJP) ಆರೋಪ ಸಂಪೂರ್ಣ ಸುಳ್ಳು ಎಂದು ತಳ್ಳಿಹಾಕಿದ್ದಾರೆ. ಇದನ್ನೂ ಓದಿ:  ಯುಪಿಯಲ್ಲಿ 7 ಮಕ್ಕಳನ್ನು ಕೊಂದ ತೋಳ – ಆಪರೇಷನ್ ಭೇಡಿಯಾ ನಡೆಸಿ ಸೆರೆ

ಟಿಎಂಸಿ ವಿದ್ಯಾರ್ಥಿ ಘಟಕದ (TMC Student Wing) ಸಂಸ್ಥಾಪನಾ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇದು ದುರುದ್ದೇಶಪೂರಿತ ತಪ್ಪು ಮಾಹಿತಿ ಅಭಿಯಾನ. ವೈದ್ಯಕೀಯ ವಿದ್ಯಾರ್ಥಿಗಳು ಮತ್ತು ಕಿರಿಯ ವೈದ್ಯರ ವಿರುದ್ಧ ಒಂದು ಪದವನ್ನೂ ನಾನು ಹೇಳಿಲ್ಲ. ಮುಷ್ಕರ ನಿರತ ವೈದ್ಯರ ವಿರುದ್ಧ ಎಫ್‌ಐಆರ್‌ ದಾಖಲಿಸಲು ಬಯಸುವುದಿಲ್ಲ ಎಂದರು ಇದೇ ವೇಳೆ ವಿರಾಮದಲ್ಲಿರುವ ಸರ್ಕಾರಿ ಆಸ್ಪತ್ರೆಗಳಲ್ಲಿನ ಕಿರಿಯ ವೈದ್ಯರನ್ನು ಕೆಲಸಕ್ಕೆ ಮರಳುವಂತೆ ಒತ್ತಾಯಿಸಿದರು.

ನಾನು ಅವರ ಚಳುವಳಿಯನ್ನು ಸಂಪೂರ್ಣವಾಗಿ ಬೆಂಬಲಿಸುತ್ತೇನೆ ಅವರ ಚಳುವಳಿ ನಿಜವಾದದ್ದು. ಕೆಲವರು ನನ್ನ ಮೇಲೆ ಆರೋಪ ಮಾಡುತ್ತಿರುವಂತೆ ನಾನು ಅವರಿಗೆ ಎಂದಿಗೂ ಬೆದರಿಕೆ ಹಾಕಲಿಲ್ಲ. ಈ ಆರೋಪ ಸಂಪೂರ್ಣ ಸುಳ್ಳು. ಕೇಂದ್ರದ ಬೆಂಬಲದೊಂದಿಗೆ ಬಿಜೆಪಿಯು ಪಶ್ಚಿಮ ಬಂಗಾಳದಲ್ಲಿ ಪ್ರಜಾಪ್ರಭುತ್ವಕ್ಕೆ ಬೆದರಿಕೆ ಹಾಕುತ್ತಿದೆ ಮತ್ತು ಅರಾಜಕತೆ ಮತ್ತು ಕಾನೂನುಬಾಹಿರತೆಯನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದೆ ಎಂದು ಅವರು ಆರೋಪಿಸಿದರು. ಇದನ್ನೂ ಓದಿ: ಸಿದ್ದರಾಮಯ್ಯ ರಾಜೀನಾಮೆ ಪಕ್ಕ – ಅವರ ಪಾಪ ಅವರನ್ನು ಸುಮ್ಮನೆ ಬಿಡಲ್ಲ: ವಿಜಯೇಂದ್ರ

ನನ್ನನ್ನು ನಿಂದಿಸಲಾಗಿದೆ ಮತ್ತು ಅಗೌರವಿಸಲಾಗಿದೆ. ನಾನು ಅದರ ಬಗ್ಗೆ ಯೋಚಿಸಿದೆ. ನಾನು ಅವರ ವಿರುದ್ಧ ಯಾವುದೇ ಸೇಡು ತೀರಿಸಿಕೊಂಡಿಲ್ಲ. ಎಫ್‌ಐಆರ್ ದಾಖಲಿಸಿದರೆ ಕಿರಿಯ ವೈದ್ಯರ ಭವಿಷ್ಯ ಹಾಳಾಗುತ್ತದೆ, ಪಾಸ್‌ಪೋರ್ಟ್-ವೀಸಾ ಸಿಗುವುದಿಲ್ಲ ಎಂದು ಹೇಳಿದ್ದೆ. ಇದೇ ಹೇಳಿಕೆಯನ್ನು ಬಿಜೆಪಿ ನಾಯಕರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು. ಇದನ್ನೂ ಓದಿ: MUDA Scam; ಸಿಎಂ ಸಿದ್ದರಾಮಯ್ಯಗೆ ತಾತ್ಕಾಲಿಕ ರಿಲೀಫ್‌ – ಆ.31 ಕ್ಕೆ ವಿಚಾರಣೆ ಮುಂದೂಡಿಕೆ

Share This Article