ಟ್ವಿಟ್ಟರ್ ಖಾತೆಯಲ್ಲಿ ರಾಜ್ಯಪಾಲರನ್ನು ಬ್ಲಾಕ್ ಮಾಡಿದ ಮಮತಾ ಬ್ಯಾನರ್ಜಿ

Public TV
1 Min Read

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸೋಮವಾರ ಟ್ವಿಟರ್‌ನಿಂದ ರಾಜ್ಯಪಾಲ ಜಗದೀಪ್ ಧನಕರ್‌ನನ್ನು ಬ್ಲಾಕ್ ಮಾಡಿರುವುದಾಗಿ ತಿಳಿಸಿದ್ದಾರೆ.

ಮೈಕ್ರೋಬ್ಲಾಗಿಂಗ್ ಪ್ಲಾಟ್‍ಫಾರ್ಮ್‍ನಿಂದ ಜಗದೀಪ್ ಧನಕರ್ ಅವರು ಸರ್ಕಾರದ ವಿರುದ್ಧ ಹಲವಾರು ಪೋಸ್ಟ್‌ಗಳನ್ನು ಹಾಕುತ್ತಿದ್ದರು. ಆ ಪೋಸ್ಟ್‌ಗಳು ನನಗೆ ಕಿರಿಕಿರಿ ಎನಿಸುತ್ತಿದ್ದವು. ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್ ಮಹಾನಿರ್ದೇಶಕರಿಗೆ ಹಲವಾರು ಸಂದರ್ಭಗಳಲ್ಲಿ ರಾಜ್ಯಪಾಲರು ಬೆದರಿಕೆಗಳನ್ನೂ ಹಾಕಿದ್ದಾರೆ. ಹೀಗಾಗಿ ನನ್ನ ಟ್ವಿಟ್ಟರ್ ಖಾತೆಯಿಂದ ಅವರನ್ನು ಬ್ಲಾಕ್ ಮಾಡಿದ್ದೇನೆ ಎಂದು ಬ್ಯಾನರ್ಜಿ ಹೇಳಿದ್ದಾರೆ. ಇದನ್ನೂ ಓದಿ: ಆರ್ಥಿಕ ಲಾಭಕ್ಕಾಗಿ ಮದ್ಯ ಮಾರಾಟಕ್ಕೆ ಆದ್ಯತೆ ನೀಡುತ್ತಿರುವುದು ದುರದೃಷ್ಟಕರ: ಅಣ್ಣಾ ಹಜಾರೆ

ಗವರ್ನರ್ ಜಗದೀಪ್ ಧನಕರ್ ಅವರನ್ನು ಟ್ವಿಟರ್‌ನಿಂದ ಬ್ಲಾಕ್‌ ಮಾಡಲು ನಾನು ಒತ್ತಾಯಿಸಿದ್ದೇನೆ. ಅವರು ಪ್ರತಿದಿನ ಸರ್ಕಾರಿ ಅಧಿಕಾರಿಗಳನ್ನು ಗುರಿಯಾಗಿಸಿಕೊಂಡು ಟ್ವೀಟ್ ಮಾಡುತ್ತಿದ್ದರು. ನಾವು ಅವರ ಬಂಧಿತ ಕಾರ್ಮಿಕರು ಎಂದು ಬೆದರಿಕೆ ಹಾಕುತ್ತಿದ್ದರು ಎಂದು ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ. ಇದನ್ನೂ ಓದಿ: Economic Survey 2022: ಹೊಸ ಹಣಕಾಸು ವರ್ಷಕ್ಕೆ ಶೇ.8-8.5 ಬೆಳವಣಿಗೆ ನಿರೀಕ್ಷೆ

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಮತಾ ಬ್ಯಾನರ್ಜಿ, ಧನಕರ್ ಅವರನ್ನು ಪದಚ್ಯುತಿಗೊಳಿಸಲು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹಲವು ಬಾರಿ ಪತ್ರ ಬರೆದಿದ್ದೇನೆ. ಆದರೂ ಇದುವರೆಗೆ ಪ್ರಧಾನಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *