ಉಡುಪಿ ವಿಡಿಯೋ ಚಿತ್ರೀಕರಣ ಕೇಸ್ – ವಿದ್ಯಾರ್ಥಿನಿಯರು, ಕಾಲೇಜ್ ವಿರುದ್ಧ ಎಫ್‌ಐಆರ್ ದಾಖಲು

Public TV
3 Min Read

ಉಡುಪಿ: ಖಾಸಗಿ ಕಾಲೇಜಿನ ಶೌಚಾಲಯದಲ್ಲಿ ಚಿತ್ರೀಕರಣ ವಿಚಾರಕ್ಕೆ ಸಂಬಂಧಿಸಿದಂತೆ ಉಡುಪಿಯ ಖಾಸಗಿ ಕಾಲೇಜು ವಿರುದ್ಧ ಉಡುಪಿ ಜಿಲ್ಲಾ ಪೊಲೀಸ್ ಸ್ವಯಂಪ್ರೇರಿತ ಕೇಸ್ ದಾಖಲಿಸಿದ್ದಾರೆ.

ವಿವಿಧ ಸೆಕ್ಷನ್‌ಗಳಡಿ ಕಾಲೇಜು ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಐಪಿಸಿ ಸೆಕ್ಷನ್ 509 (ಮಹಿಳೆಯನ್ನು ಅವಮಾನಿಸುವ ಉದ್ದೇಶದಿಂದ ಮಾಡಿರುವ ಕೃತ್ಯ, 204 (ಅರಿವಿಗೆ ಬಾರದಂತೆ ವಿಡಿಯೋ ಮಾಡುವ ಕೃತ್ಯ), ಜೊತೆಗೆ ದಾಖಲೆ ನಾಶ ವಿಚಾರ, ಸಾಕ್ಷ್ಯ ನಾಶ, 175 (ಉದ್ದೇಶ ಪೂರ್ವಕವಾಗಿ ಸೂಕ್ತ ದಾಖಲೆ ನೀಡದಿರುವುದು), 34 (ಸಾಮೂಹಿಕವಾಗಿ ಮಾಡಿರುವ ಕೃತ್ಯ) ಆರೋಪದಡಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಲೇಡಿಸ್ ಟಾಯ್ಲೆಟ್‌ನಲ್ಲಿ ಮೊಬೈಲ್ ಚಿತ್ರೀಕರಣ – ಧ್ವನಿ ಎತ್ತಿದ ಯುವತಿಗೆ ಪೊಲೀಸರಿಂದ ಕಿರುಕುಳ ಆರೋಪ

ಖಾಸಗಿತನಕ್ಕೆ ಧಕ್ಕೆ ಆಗುವ ವಿಡಿಯೋ ಚಿತ್ರೀಕರಣ ಆಗಿದೆ. ವಿಷಯ ತಿಳಿದು ವೀಡಿಯೋ ಡಿಲೀಟ್ ಮಾಡಿರುವುದಾಗಿ ಆಡಳಿತ ಮಂಡಳಿ ಹೇಳಿದೆ. ಇದೊಂದು ಗಂಭೀರವಾದ ಅಪರಾಧ ಕೃತ್ಯವಾಗಿದೆ. ವಿಡಿಯೋ ಮಾಡಿ ತಪ್ಪೊಪ್ಪಿಕೊಂಡಿರುವ ಬಗ್ಗೆ ಆಡಳಿತ ಮಂಡಳಿ ಹೇಳಿದೆ. ಸತ್ಯಾಸತ್ಯತೆ ಪತ್ತೆ ಹಚ್ಚುವ ಉದ್ದೇಶದಿಂದ ಪ್ರಕರಣ ದಾಖಲು ಮಾಡಲಾಗಿದೆ ಎಂದು ಮಲ್ಪೆ ಎಸ್‌ಐ ಸುಷ್ಮಾ ಜಿ.ಬಿ ತಿಳಿಸಿದ್ದಾರೆ.

ಎಫ್‌ಐಆರ್‌ನಲ್ಲಿ ಏನಿದೆ?
ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾಜೀವ್ ಗಾಂಧಿ ಯುನಿವರ್ಸಿಟಿ ಆಫ್ ಹೆಲ್ತ್ ಸೈನ್ಸ್ ಇದರ ಅನುದಾನದ ಅಡಿಯಲ್ಲಿ ಖಾಸಗಿ ಶಿಕ್ಷಣ ಸಂಸ್ಥೆ ಪ್ಯಾರಾ ಮೆಡಿಕಲ್‌ಗೆ ಸಂಬಂಧಿಸಿ ಡಿಪ್ಲೊಮಾ ಮತ್ತು ಡಿಗ್ರಿ ತರಗತಿಗಳನ್ನು ನಡೆಸುತ್ತಿರುತ್ತದೆ. ಜು.20 ರಂದು ಮಧ್ಯಾಹ್ನ 12:30 ಗಂಟೆಗೆ ಕಾಲೇಜಿನ ವಿದ್ಯಾರ್ಥಿಗಳು ಕಾಲೇಜು ಆವರಣದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಮಾಹಿತಿ ತಿಳಿದು ಬಂದಿತು. ನಾನು ಅಲ್ಲಿಗೆ ತೆರಳಿ ವಿಚಾರಿಸಿದಾಗ ನನಗೆ ತಿಳಿದು ಬಂದ ಅಂಶವೇನೆಂದರೆ, ಜು.18 ರಂದು ಮಧ್ಯಾಹ್ನ 02:30 ರಿಂದ 03:00 ಗಂಟೆಯ ಮಧ್ಯದ ಅವಧಿಯಲ್ಲಿ ಎರಡನೇ ವರ್ಷದ ಡಿಪ್ಲೊಮಾ ಇನ್ ಆಪರೇಶನ್ ಥಿಯೇಟರ್ ಕೋರ್ಸ್ ವಿದ್ಯಾರ್ಥಿನಿಯೊಬ್ಬರು ಕಾಲೇಜಿನ ಶೌಚಾಲಯಕ್ಕೆ ಹೋದರು. ಆಗ ಇತರೆ ವಿದ್ಯಾರ್ಥಿನಿಯರು ಈಕೆಯ ವಿಡಿಯೋ ಮಾಡಲು ಹೋಗಿ ಆಕಸ್ಮಿಕವಾಗಿ ಬೇರೊಬ್ಬ ವಿದ್ಯಾರ್ಥಿನಿಯ ವಿಡಿಯೋ ಮಾಡಿದ್ದಾರೆ. ಇದನ್ನೂ ಓದಿ: ಜಲಪಾತ ವೀಕ್ಷಣೆಗೆ ತೆರಳಿದ್ದ ಯುವಕ ಸಾವು- ಮೊಬೈಲ್‍ನಲ್ಲಿ ಕೊನೇ ಕ್ಷಣ ಸೆರೆ

ಇದು ವಿದ್ಯಾರ್ಥಿನಿ ಗಮನಕ್ಕೆ ಬಂದ ಕೂಡಲೇ ಅವರ ಸಮಕ್ಷಮದಲ್ಲಿಯೇ ವಿಡಿಯೋ ಡಿಲೀಟ್ ಮಾಡಿ ಕ್ಷಮೆಯಾಚಿಸಿರುತ್ತಾರೆ. ನಂತರ ಜು.19 ರಂದು ವಿದ್ಯಾರ್ಥಿನಿಯರಿಂದ ಮೂರು ಮೊಬೈಲ್‌ಗಳನ್ನು ಕಾಲೇಜು ಆಡಳಿತ ಮಂಡಳಿಯವರು ತಮ್ಮ ವಶಕ್ಕೆ ಪಡೆದುಕೊಂಡಿರುವುದಾಗಿಯೂ ತಿಳಿದು ಬಂದಿದೆ. ಆದರೆ ಈ ಘಟನೆಯ ಬಗ್ಗೆ ಪ್ರಕರಣ ದಾಖಲಿಸಲು ಯಾರೂ ಸಹ ದೂರನ್ನು ನೀಡಿರುವುದಿಲ್ಲ. ಸತ್ಯಾಂಶದ ಬಗ್ಗೆ ಸಂಪೂರ್ಣ ಮಾಹಿತಿ ಇರುವುದಿಲ್ಲ. ಜು.25 ರಂದು ಅಡಳಿತ ಮಂಡಳಿಯವರು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ತಾವು ವಿಡಿಯೋ ಮಾಡಿದ್ದೇವೆ ಎಂದು ಮಕ್ಕಳು ತಪ್ಪೊಪ್ಪಿಗೆ ನೀಡಿರುತ್ತಾರೆ. ಆ ಉದ್ದೇಶಕ್ಕೆ ಅವರನ್ನು ಅಮಾನತು ಮಾಡಿರುತ್ತೇವೆ ಎಂದು ತಿಳಿಸಿದ ಬಗ್ಗೆ ವರದಿಯಾಗಿರುತ್ತದೆ. ಇದು ನನ್ನ ಗಮನಕ್ಕೆ ಬಂದಿದ್ದು, ಇದೊಂದು ಸಂಜ್ಷೇಯ ಅಪರಾಧ ಆಗಿರುವುದರಿಂದ, ಮಹಿಳೆಯ ಮಾನ ಮತ್ತು ಗೌರವಕ್ಕೆ ಧಕ್ಕೆ ಉಂಟಾಗುವ ರೀತಿಯಲ್ಲಿ ಅವಳ ಖಾಸಗಿತನದ ವಿಡಿಯೋವನ್ನು ಮೊಬೈಲ್‌ನಲ್ಲಿ ಚಿತ್ರೀಕರಣ ಮಾಡಿ, ವಿಷಯ ತಿಳಿದ ಕೂಡಲೇ ಡಿಲೀಟ್ ಮಾಡಿರುವ ವಿದ್ಯಾರ್ಥಿನಿಯರ ವಿರುದ್ಧ ಹಾಗೂ ಆಡಳಿತ ಮಂಡಳಿಯ ವಿರುದ್ಧ ಸತ್ಯಾಸತ್ಯತೆಯನ್ನು ಪತ್ತೆ ಹಚ್ಚುವ ಉದ್ದೇಶದಿಂದ ಈ ದೂರನ್ನು ನೀಡುತ್ತಿದ್ದೇನೆ. ಇದನ್ನು ಸ್ವೀಕರಿಸಿ, ದೂರು ದಾಖಲಿಸಿ ಸೂಕ್ತ ತನಿಖೆ ನಡೆಸಬೇಕೆಂದು ಮಲ್ಪೆ ಎಸ್‌ಐ ಸುಷ್ಮಾ ದೂರು ನೀಡಿದ್ದಾರೆ.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್