ಕಾಶ್ಮೀರಿ ಪಂಡಿತರಿಗೆ ಅನ್ಯಾಯವಾಗಿದೆ ಅದನ್ನು ಸರಿಪಡಿಸಿ ಪರಿಹಾರ ನೀಡಿ ಅದು ಬಿಟ್ಟು ಪ್ರಚೋದನೆ ಮಾಡಬೇಡಿ: ಖರ್ಗೆ

Public TV
2 Min Read

ಕಲಬುರಗಿ: ಕಾಶ್ಮೀರಿ ಪಂಡಿತರಿಗೆ ಅನ್ಯಾಯವಾಗಿದೆ ನಿಜ ಅದನ್ನು ಸರಿಪಡಿಸಿ ಅವರಿಗೆ ಮನೆ, ಜಮೀನು ನೀಡಿ ಅದು ಬಿಟ್ಟು ಪ್ರಚೋದನೆ ಮಾಡಬೇಡಿ. ದೇಶಕ್ಕಾಗಿ ಲಕ್ಷಾಂತರ ಜನ ಪ್ರಾಣ ಬಿಟ್ಟಿದ್ದಾರೆ ಅಂತವರ ಚಿತ್ರ ತೆಗೆಯಿರಿ ಎಂದು ಬಿಜೆಪಿ ವಿರುದ್ಧ ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.

ಕಲಬುರಗಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರವನ್ನು ಖುದ್ದು ಪ್ರಧಾನಿ ನರೇಂದ್ರ ಮೋದಿಯೇ ಜನರನ್ನು ನೋಡಿ ಎಂದು ಹೇಳಿ ಪ್ರಚೋದಿಸುತ್ತಿದ್ದಾರೆ. ಆ ಚಿತ್ರ ತೆಗೆದ ಅಗ್ನಿಹೋತ್ರಿ ಅವರ ಪಕ್ಷದವರೆ ಆಗಿದ್ದಾರೆ. ಆ ಚಿತ್ರದ ಅನುಪಮ್ ಖೇರ್ ಪತ್ನಿ ಬಿಜೆಪಿಯಲ್ಲಿದ್ದಾರೆ. ಈ ಚಿತ್ರವನ್ನು ಬಿಜೆಪಿ ಪಾರ್ಟಿ ಮಿಟಿಂಗ್‍ನಲ್ಲಿ ಚಿತ್ರ ನೋಡಲು ಹೇಳುತ್ತಿದೆ. ನಾವು ಜೈಹಿಂದ್ ಅಂದ್ರೆ ಅವರು ಬೇರೆನೆ ಹೇಳ್ತಾರೆ. 2024 ರವರೆಗೆ ಇಂತಹ ಹಲವು ಚಿತ್ರಗಳು ಬರುತ್ತವೆ. ನಾನು ಕಾಶ್ಮೀರ್ ಫೈಲ್ಸ್ ಚಿತ್ರ ನೋಡಿಲ್ಲ, ಮೋದಿ ನೋಡಿ ಎಂದು ಹೇಳಿಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ತೆರಿಗೆ ಹೊರೆ ಶ್ರೀಮಂತರ ಮೇಲಲ್ಲ, ಬಡವರ ಮೇಲೆ ಬೀಳುತ್ತಿದೆ: ಕೇಂದ್ರದ ವಿರುದ್ಧ ಕೃಷ್ಣಬೈರೇಗೌಡ ವಾಗ್ದಾಳಿ

ಯಾರು ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡ್ತಾರೆ. ಅವರಿಂದ ನಾವು ಫೇರ್ ರಾಜಕಾರಣ ನೀರಿಕ್ಷಿಸಲು ಆಗಲ್ಲ. ಈ ಹಿಂದಿನ ಯಾವ ರಾಜಕಾರಣಿ ಸಹ ಹೀಗೆ ಮಾಡಿರಲಿಲ್ಲ. ಆದ್ರೆ ಸದ್ಯ ಧರ್ಮದ ಮೇಲೆ ಜನರನ್ನು ಪ್ರಚೋದಿಸಲಾಗುತ್ತಿದೆ ಎಂದು ಗುಡುಗಿದರು.

ಗುಜರಾತ್ ಶಾಲೆಗಳಲ್ಲಿ ಭಗವದ್ಗೀತೆ ಕಡ್ಡಾಯ ಕುರಿತು ಪ್ರತಿಕ್ರಿಯಿಸಿ, ಅದರ ಬಗ್ಗೆ ನಾನು ಈಗ ಏನು ಮಾತನಾಡಲ್ಲ. ಒಂದು ಕಡೆ ಟೆಸ್ಟ್‌ಬುಕ್ ಕಮಿಟಿ ನಿರ್ಧಾರ ಅಂತಾರೆ. ಇನ್ನೊಂದು ಕಡೆ ಅವರೆ ನಿಯಮ ಮುರಿಯುತ್ತಾರೆ. ಭಗವದ್ಗೀತೆ ಕಡ್ಡಾಯ ಬಗ್ಗೆ ನಾನು ಈಗ ಮಾತನಾಡಿ ವಿವಾದ ಮಾಡಿಕೊಳ್ಳಲ್ಲ. ಈ ಬಗ್ಗೆ ಸದನದಲ್ಲಿ ಮಾತನಾಡುತ್ತೇನೆ ಎಂದರು. ಇದನ್ನೂ ಓದಿ: ಸೋನಿಯಾ ಗಾಂಧಿ ನಾಯಕತ್ವದಲ್ಲಿ ದೇಶವನ್ನು ಮತ್ತೆ ಮುನ್ನಡೆಸುವ ಶಕ್ತಿಯಾಗಿ ಕಾಂಗ್ರೆಸ್ ಎದ್ದು ಬರಲಿದೆ: ಸಿದ್ದರಾಮಯ್ಯ

ಪಂಚರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿನ ಕುರಿತು ಮಾತನಾಡಿ, ಪಂಜಾಬ್‍ನಲ್ಲಿ ಒಳಜಗಳದಿಂದ ನಾವು ಅಧಿಕಾರ ಕಳೆದುಕೊಂಡಿದ್ದೇವೆ. ಇನ್ನುಳಿದ ನಾಲ್ಕು ರಾಜ್ಯಗಳಲ್ಲಿ ನಮ್ಮ ಸರ್ಕಾರ ಬಿಳಿಸಿ ಬಿಜೆಪಿ ಸರ್ಕಾರ ರಚಿಸಿತ್ತು. ಜನ ಎಲ್ಲೆಲ್ಲಿ ನಮ್ಮ ಪಕ್ಷಕ್ಕೆ ಸಪೋರ್ಟ್ ಮಾಡಿದರು ಇವರು ಬಿಳಿಸಿ ಅಧಿಕಾರಕ್ಕೆ ಬಂದಿದ್ದಾರೆ. ಈ ಮೂಲಕ ಪ್ರಜಾಪ್ರಭುತ್ವದ ಕೊಲೆಯಾಗಿದೆ. ನಮ್ಮ ಸರ್ಕಾರ ರಚನೆ ಆಗುವಾಗ ಐಟಿ-ಇಡಿ ಮೂಲಕ ಹೆದರಿಸಿ ಸರ್ಕಾರ ಮಾಡುತ್ತಿದ್ದಾರೆ. ಇಲ್ಲಿಯವರೆಗೆ ಯಾವ ಪ್ರಧಾನಿ ಸಹ ತಿಂಗಳುಗಟ್ಟಲೆ ಪ್ರಚಾರಕ್ಕೆ ಹೋಗಿದ್ದರು?. ಪ್ರಧಾನಿ ದೇಶದ ಕೆಲಸ ಬಿಟ್ಟು ನೀತಿ ಸಂಹಿತೆ ಉಲಂಘಿಸಿ ಪ್ರಚಾರ ನಡೆಸಿದ್ದಾರೆ ಎಂದು ಜರಿದರು. ಇದನ್ನೂ ಓದಿ: ವಿಧಾನಸಭೆಯಲ್ಲಿ ರಾಗಿ, ರಾಗಿ ಎಂದು ಕೂಗಿದ ಕಾಂಗ್ರೆಸ್ ಶಾಸಕ: ಸ್ಪೀಕರ್ ಕೆಂಡಾಮಂಡಲ

ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ನಲ್ಲಿ ಬದಲಾವಣೆ ವಿಚಾರ ಮಾತನಾಡಿ, ಮೊನ್ನೆಯವರಗೆ ಸೋನಿಯಾ ಗಾಂಧಿ ಅವರನ್ನು ಹೊಗಳುತ್ತಿದ್ದರು. ಗೆದ್ದಾಗ ಇದೇ ನಾಯಕರು ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಅವರನ್ನು ಹೊಗಳಿದ್ದರು. ಕೆಲ ಜನರಿಗೆ ಅಧಿಕಾರ ಬೇಕು ಆದ್ರೆ ಅವರು ಅಷ್ಟು ಶಾಸಕರನ್ನೇ ಗೆಲ್ಲಿಸಿಲ್ಲಾ. ಇದೇ ನಾಯಕರೇ ಸೋನಿಯಾಗಾಂಧಿ, ರಾಹುಲ್ ಗಾಂಧಿ ಅವರನ್ನು ಕರೆತಂದಿದ್ದು ಇದೀಗ ಅವರೇ ಅವರ ನಾಯಕತ್ವದ ಬಗ್ಗೆ ಮಾತನಾಡುತ್ತಿದ್ದಾರೆ. ಇಂದಿರಾಗಾಂಧಿ, ರಾಜೀವ ಗಾಂಧಿ ಗುಂಡಿಗೆ ಬಲಿಯಾಗಿದ್ದಾರೆ. ಈವರು ಯಾರಾದ್ರು ದೇಶಕ್ಕಾಗಿ ಜೀವ ಕೊಟ್ಟಿದ್ದಾರಾ. ಪಕ್ಷದ ಮೇಲೆ ಅಭಿಮಾನ ಇರುವವರು ಈ ರೀತಿ ಮಾತನಾಡುವುದು ಸರಿಯಲ್ಲ. CWC ಸಭೆಯಲ್ಲಿ ಇವರೆಲ್ಲ ಮಾತನಾಡಲ್ಲಾ. ಹೊರಗಡೆ ಮಾತ್ರ ನಾಯಕತ್ವದ ಬಗ್ಗೆ ಮಾತನಾಡುತ್ತಾರೆ ಎಂದು ಕಿಡಿಕಾರಿದರು.

Share This Article
Leave a Comment

Leave a Reply

Your email address will not be published. Required fields are marked *