ರೈತರ ಬಗ್ಗೆ ಕಾಳಜೀ ಇದೆ ಅಂತಾರೆ, ರಸ್ತೆಗೆ ಬಂದ್ರೆ ಹುಷಾರ್ ಅಂತ ಎಚ್ಚರಿಕೆ ಕೊಡ್ತಾರೆ: ಖರ್ಗೆ ಕಿಡಿ

Public TV
2 Min Read

– RSS ಮನುಸ್ಮೃತಿಯನ್ನ ಪ್ರತಿಪಾದಿಸುತ್ತಿದೆ
– ಅಜಯ್ ಮಿಶ್ರಾ ಸಚಿವ ಸ್ಥಾನದಿಂದ ಕೆಳಗಿಳಿಯಲಿ

ಬೆಂಗಳೂರು: ಉತ್ತರ ಪ್ರದೇಶದಲ್ಲಿ ನಾಲ್ಕು ಜನ ರೈತರ ಮೇಲೆ ಗಾಡಿ ಹರಿಸಿ ಕೊಂದಿದ್ದಾರೆ. ಆದರೆ ಕೆಲ ನಾಯಕರು ನಾವು ರೈತರ ಪರ ಅಂತಾರೆ, ಮತ್ತೆ ರೈತರು ರಸ್ತೆ ಮೇಲೆ ಬಂದ್ರೆ ಪಾಠ ಕಲಿಸ್ತೇವೆ ಅಂತ ಯೋಗಿ, ಖಟ್ಟರ್ ರಂತಹ ನಾಯಕರು ರೈತರಿಗೆ ಎಚ್ಚರಿಕೆ ನೀಡಿದ್ದಾರೆ ಎಂದು ರಾಜ್ಯಸಭೆ ವಿಪಕ್ಷ ನಾಯಕ ಹಾಗೂ ರಾಜ್ಯ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ರೈತರ ಬಗ್ಗೆ ಕಾಳಜೀ ಇದೆ ಅಂತಾರೆ. ಮುಖ್ಯಂಮತ್ರಿಗಳು ಇಂತಹ ಹೇಳಿಕೆ ನೀಡುತ್ತಾರೆ. ರಸ್ತೆಗೆ ಬಂದರೆ ಹುಷಾರು ಎಂದು ಎಚ್ಚರಿಕೆ ನೀಡಿದ್ದಾರೆ, ಒಬ್ಬ ಸಿಎಂ ಮತ್ತು ಗೃಹ ಖಾತೆ ಸಚಿವರು ಇಂತಹ ಬೇದರಿಕೆ ಹಾಕಬಹುದಾ? ಸ್ವತಃ ಮುಖ್ಯಮಂತ್ರಿ ಈ ರೀತಿ ಹೇಳಿಕೆ ನೀಡುವುದು ಎಷ್ಟು ಸರಿ? ಲಖೀಂಪುರ್ ಘಟನೆ ದೇಶದಲ್ಲೇ ಅಲ್ಲೋಲ, ಕಲ್ಲೋಲ ಉಂಟು ಮಾಡುವ ಘಟನೆಯಾಗಿದ್ದು, ರೈತರ ಮೇಲೆ ಯಾವ ರೀತಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ವಿಶೇಷವಾಗಿ ಯುಪಿ ಹಾಗೂ ಹರಿಯಾಣ ಸರ್ಕಾರ ದಬ್ಬಾಳಿಕೆ ಮಾಡುತ್ತಿದೆ ಎಂಬುದಕ್ಕೆ ಇದು ಉದಾಹರಣೆ ಎಂದು ಕಿಡಿಕಾರಿದರು.  ಇದನ್ನೂ ಓದಿ: ಲಖೀಂಪುರದಲ್ಲಿ ನಾಲ್ವರು ರೈತರನ್ನು ಕೊಂದ ಪ್ರಕರಣ – ಇನ್ನೂ ಅರೆಸ್ಟ್ ಆಗಿಲ್ಲ ಮಂತ್ರಿ ಮಗ

ಕೇಂದ್ರ ಸಚಿವರ ಮಗ ಚಳವಳಿ ಮಾಡುತ್ತಿದ್ದ ರೈತರಿಗೆ ನಿಮಗೆಲ್ಲಾ ಪಾಠ ಕಲಿಸುತ್ತಿದ್ದೆ ಎಂದು ಮೊದಲು ವಾರ್ನ್ ಮಾಡಿದ್ದ. ಆನಂತರ ಗಾಡಿ ತಗೆದುಕೊಂಡು ಹೋಗಿ ಗುದ್ದಿದ್ದಾನೆ ಆದರೂ ಕೇಂದ್ರ ಸರ್ಕಾರದ ಗೃಹ ಖಾತೆ ರಾಜ್ಯ ಸಚಿವರ ಮಗನನ್ನು ಯಾಕೆ ಅರೆಸ್ಟ್ ಮಾಡ್ತಿಲ್ಲ? ಸಾಂತ್ವಾನ ಹೇಳಲು ಹೋಗುವವರನ್ನು ಅರೆಸ್ಟ್ ಮಾಡಿ ಗೃಹ ಬಂಧನದಲ್ಲಿ ಇಡಲಾಗುತ್ತಿದೆ. ಬೇರೆ ಪಕ್ಷದ ನಾಯಕರು ಭೇಟಿ ಮಾಡಲು ಅವಕಾಶ ಕೊಟ್ಟಿದ್ದಾರೆ, ಅಲ್ಲಿನ ಸಿಎಂಗೆ ಭೇಟಿ ಮಾಡಲು ಅವಕಾಶ ಕೊಟ್ಟಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷದವರಿಗೆ ಮಾತ್ರ ಅವಕಾಶ ನೀಡದೇ ಬಂಧಿಸಲಾಗುತ್ತಿದೆ. ಅಜಯ್ ಮಿಶ್ರಾರ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಸ್ಥಾನದಿಂದ ಕೆಳಗಿಳಿಸಬೇಕು. ಕಾರಿನಲ್ಲಿ ಮಂತ್ರಿ ಮಗ ಇದ್ದ. ಅಲ್ಲಿನ ರೈತರೇ ಇದನ್ನು ಹೇಳಿದ್ದಾರೆ. ಆದರೆ ನನ್ನ ಮಗ ಅಲ್ಲಿರಲಿಲ್ಲ ಅಂತ ವಾದಿಸುತ್ತಿದ್ದಾರೆ ಎಂದು ಟೀಕಿಸಿದ್ದಾರೆ. ಇದನ್ನೂ ಓದಿ: ಚಾಲಕನ ಮೇಲೆ ದಾಳಿಯಾದಾಗ ನಿಯಂತ್ರಣ ತಪ್ಪಿ ಕಾರು ರೈತರ ಮೇಲೆ ಹರಿದಿದೆ: ಮಿಶ್ರಾ

ಈ ಘಟನೆ ಬಗ್ಗೆ ಉಳಿದವರು ಬೇರೆ ರೀತಿ ಸತ್ತಿದ್ದಾರೆ ಎಂದು ಹೇಳುತ್ತಿದ್ದಾರೆ. ಇದೆಲ್ಲ ಹೇಗಾಯ್ತು ಎಂಬುದು ತನಿಖೆಯಿಂದ ಗೊತ್ತಾಗಲಿದೆ. ಸುಪ್ರೀಂಕೋರ್ಟ್ ಸಿಟ್ಟಿಂಗ್ ಜಡ್ಜ್ ಇಂದ ಈ ಘಟನೆ ಬಗ್ಗೆ ತನಿಖೆ ನಡೆದರೆ ಸತ್ಯ ಹೊರಬರುತ್ತದೆ. ನಂತರ ಬಗ್ಗೆ ಮಾತನಾಡಿ ಆರ್‌ಎಸ್‌ಎಸ್‌ ಮನುಸ್ಮೃತಿಯನ್ನು ಪ್ರತಿಪಾದಿಸುತ್ತಿದೆ. ಗೋಲ್ವಾಲ್ಕರ್ ಯಾರು, ಅದರ ಪ್ರತಿಪಾದಕ. ಆರ್‌ಎಸ್‌ಎಸ್‌ ಏನು ಪ್ರತಿಪಾದಿಸುತ್ತದೆ. ಮನುಸ್ಮೃತಿ ಏನು ಪ್ರತಿಪಾದಿಸುತ್ತದೆ ಎಂದು ಪ್ರಶ್ನಿಸಿ ಕಲಬುರಗಿಯಲ್ಲಿ ನನ್ನ ಸೋಲಿಗೆ ಆರ್‌ಎಸ್‌ಎಸ್‌ ಕೂಡ ಒಂದು ಕಾರಣ ಎಂದರು. ಇದನ್ನೂ ಓದಿ: ರಾಹುಲ್ ಗಾಂಧಿ ಲಖೀಂಪುರ್ ಭೇಟಿಗೆ ಅವಕಾಶವಿಲ್ಲವೆಂದ ಯೋಗಿ ಸರ್ಕಾರ

Share This Article
Leave a Comment

Leave a Reply

Your email address will not be published. Required fields are marked *