ರಾಷ್ಟ್ರಪತಿ ದ್ರೌಪದಿ ಮುರ್ಮುರನ್ನು `ಮುರ್ಮಾಜೀ’ ಎಂದು ಉಚ್ಛರಿಸಿ ಅಪಮಾನ ಮಾಡಿದ ಖರ್ಗೆ

Public TV
1 Min Read

ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮುರನ್ನು (Draupadi Murmu)`ಮುರ್ಮಾಜೀ’ ಎಂದು ಉಚ್ಛರಿಸಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅಪಮಾನ ಮಾಡಿದ್ದಾರೆ.

ಛತ್ತೀಸ್‌ಘಡದ ರಾಯಪುರ್‌ನ ಕಾರ್ಯಕ್ರಮವೊಂದರಲ್ಲಿ ಮಾತನಾಡುವಾಗ ಮುರ್ಮು ಅವರನ್ನು `ಮುರ್ಮಾಜೀ’ ಎಂದು ತಪ್ಪಾಗಿ ಉಚ್ಛರಿಸಿದ್ದಾರೆ. ತಕ್ಷಣವೇ ಎಚ್ಚೆತ್ತು ತಿದ್ದಿಕೊಂಡಿದ್ದಾರೆ. ನಂತರ ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು `ಕೋವಿಡ್’ ಅಂತಲೂ ತಪ್ಪಾಗಿ ಉಚ್ಛರಿಸಿದ್ದಾರೆ. ಛತ್ತೀಸ್‌ಗಡದಲ್ಲಿ ದೊಡ್ಡಪ್ರಮಾಣದಲ್ಲಿ ಅರಣ್ಯನಾಶ ಮಾಡಲಾಗ್ತಿದೆ. ಬಿಜೆಪಿಗರು ದೊಡ್ಡ ಉದ್ದಿಮೆದಾರರ ಸ್ನೇಹಿತರು ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.ಇದನ್ನೂ ಓದಿ: ಯೆಮೆನ್‌ನಲ್ಲಿ ಮರಣದಂಡನೆಗೆ ಗುರಿಯಾಗಿರುವ ಕೇರಳ ನರ್ಸ್‌ಗೆ ಜು.16ಕ್ಕೆ ನೇಣು

ನೆಲ-ಜಲ-ಅರಣ್ಯ ಸಂರಕ್ಷಣೆ ನಮ್ಮ ಹೊಣೆ. ಮುರ್ಮಾಜೀ, ಕೋವಿಡ್‌ರನ್ನು ನಾವು ರಾಷ್ಟ್ರಪತಿ ಮಾಡಿದ್ದೇವೆ ಎಂದು ಬಿಜೆಪಿಯವರು ಹೇಳಿಕೊಳ್ಳಬಹುದು. ಯಾಕೆಂದರೆ, ನಮ್ಮ ನೆಲ-ಜಲ-ಅರಣ್ಯ, ಸಂಪನ್ಮೂಲಗಳನ್ನು ಲೂಟಿ ಮಾಡಲು. ಅದಾನಿ, ಅಂಬಾನಿ ಅಂತವರು ಇವತ್ತು ಇದನ್ನೆಲ್ಲಾ ವಶಪಡಿಸಿಕೊಂಡಿದ್ದಾರೆ ಎಂದು ಖರ್ಗೆ ಟೀಕಿಸಿದ್ದಾರೆ.

ಖರ್ಗೆ ಹೇಳಿಕೆಯನ್ನು ಬಿಜೆಪಿ ಕಟುವಾಗಿ ಟೀಕಿಸಿದೆ. ಮುರ್ಮು ಅವರ ವಿರುದ್ಧ ಖರ್ಗೆ ಅಗೌರವ, ಆಕ್ಷೇಪಾರ್ಹ ಪದ ಬಳಸಿದ್ದಾರೆ. ದೇಶದ ಇಡೀ ಬುಡಕಟ್ಟು ಸಮುದಾಯ ಇದನ್ನು ಖಂಡಿಸುತ್ತೆ. ಇದು ಎಸ್‌ಸಿ/ಎಸ್‌ಟಿ ವಿರೋಧಿ ಕಾಂಗ್ರೆಸ್ ಮನಸ್ಥಿತಿ ತೋರಿಸುತ್ತೆ ಎಂದು ಬಿಜೆಪಿ ತೀವ್ರವಾಗಿ ಖಂಡಿಸಿದೆ.ಇದನ್ನೂ ಓದಿ: ದಾವಣಗೆರೆಯಲ್ಲಿ ಅತೃಪ್ತರ ಬಲ ಪ್ರದರ್ಶನ – ಬಿಎಸ್‌ವೈ ವಿರುದ್ಧ ಸಿದ್ದೇಶ್ವರ್, ಲಿಂಬಾವಳಿ ಗುಡುಗು

Share This Article