ಕಷ್ಟ ಪಟ್ಟಿದ್ದು ನಾನು, ಕೃಷ್ಣ ಸಿಎಂ ಆದ್ರು – ಮುಖ್ಯಮಂತ್ರಿ ಸ್ಥಾನ ಸಿಗದಿದ್ದಕ್ಕೆ ಖರ್ಗೆ ಬಹಿರಂಗ ಬೇಸರ

Public TV
1 Min Read

ವಿಜಯಪುರ: ತಮಗೆ ಸಿಎಂ ಸ್ಥಾನ ಸಿಗದ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಬೇಸರ ವ್ಯಕ್ತಪಡಿಸಿದ್ದಾರೆ.

ವಿಜಯಪುರದ (Vijayapura) ಬಿಎಂ ಪಾಟೀಲ್ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆ ಉದ್ಘಾಟನೆ ಮಾಡಿ ಅವರು ಮಾತಾಡಿದರು. ಈ ವೇಳೆ, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಪ್ರಯತ್ನಿಸಿದೆ. ಆದರೆ, ಸಿಎಂ ಆಗಿದ್ದು ಎಸ್‍ಎಂ ಕೃಷ್ಣ. ನಾನು ಸಲ್ಲಿಸಿದ ಸೇವೆ ನೀರಲ್ಲಿ ಹೋಯ್ತು ಎಂದು ಬೇಸರ ಹೊರಹಾಕಿದ್ದಾರೆ. ಇದನ್ನೂ ಓದಿ: ನಾನು ಸಿಎಂ ಆಗೋಕೆ ಗುರು ಬಲ ಬೇಕು, ಶನಿಕಾಟ ಕಡಿಮೆ ಆಗ್ಬೇಕು: ಸತೀಶ್ ಜಾರಕಿಹೊಳಿ

ಬ್ಲಾಕ್ ಅಧ್ಯಕ್ಷನಿಂದ ಈಗ ಎಐಸಿಸಿ ಅಧ್ಯಕ್ಷನಾಗಿದ್ದೇನೆ. ಅಧಿಕಾರದ ಬೆನ್ನು ಹತ್ತಿ ಹೋಗಲಿಲ್ಲ. ಅದಾಗೇ ಸಿಕ್ಕಿದೆ ಎಂದಿದ್ದಾರೆ.

ಕರ್ನಾಟಕದ ಇತಿಹಾಸದಲ್ಲಿ ಬಹು ದಿನಗಳಿಂದ ದಲಿತ ಸಿಎಂ ಕೂಗು ಕೇಳಿ ಬರುತ್ತಿದೆ. ಡಾ. ಜಿ. ಪರಮೇಶ್ವರ ಸಿಎಂ ಆಗಲಿ ಅಂತ ಜಗಳೂರು ಕಾಂಗ್ರೆಸ್ ಶಾಸಕ ಬಿ. ದೇವೇಂದ್ರಪ್ಪ ಹೇಳಿಕೆ ನೀಡಿದ್ದಾರೆ. ಅಲ್ಲದೆ, ಸಿಎಂ ಡಿಸಿಎಂ ಮಧ್ಯೆ ಮೊದಲೇ ಒಪ್ಪಂದ ಆಗಿದ್ದರೆ ಅಧಿಕಾರ ಹಂಚಿಕೆ ಆಗಲಿ ಅವರು ಹೇಳಿದ್ದಾರೆ.

ಇದೆಲ್ಲದರ ನಡುವೆ, ಕಾಂಗ್ರೆಸ್ ನಾಯಕರ ಮ್ಯೂಸಿಕಲ್ ಚೇರ್ ಆಸೆಗೆ ರಾಜ್ಯದ ಜನ ಬಲಿಯಾಗುತಿದ್ದಾರೆ ಅಂತ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಕಿಡಿಕಾರಿದ್ದಾರೆ. ಇದನ್ನೂ ಓದಿ: ರೈತರಿಗೆ ಸಮರ್ಪಕ ಗೊಬ್ಬರ ವಿತರಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ – ಬೊಮ್ಮಾಯಿ

Share This Article