ನಗ್ನ ದೃಶ್ಯಗಳಿಗೆ ಮಲ್ಲಿಕಾ ಟಾರ್ಗೆಟ್ ಆಗಿದ್ದೇಕೆ? – ಕಷ್ಟದ ದಿನಗಳನ್ನು ನೆನಪಿಸಿಕೊಂಡ ಮರ್ಡರ್ ಚೆಲುವೆ

Public TV
2 Min Read

ಮುಂಬೈ: ಬಾಲಿವುಡ್‍ಗೆ ಎಂಟ್ರಿ ಕೊಟ್ಟ ತಕ್ಷಣ ಬೋಲ್ಡ್ ದೃಶ್ಯಗಳಲ್ಲಿ ಅಭಿನಯಿಸಲು ಆರಂಭಿಸಿದೆ ಎಂದು ಅನೇಕ ಮಂದಿ ಟೀಕಿಸಲು ಪ್ರಾರಂಭಿಸಿದರು. ಅಲ್ಲದೇ ಆ ಸಮಯದಲ್ಲಿ ನನ್ನ ಸಹ ನಟರೂ ಕೂಡ ನನ್ನಿಂದ ದೂರ ಆದಾಗ ಸಾಕಷ್ಟು ಕ್ರೂರವಾದ ಪರೀಕ್ಷೆಗಳನ್ನು ಎದುರಿಸಬೇಕಾಯಿತು ಎಂದು ನಟಿ ಮಲ್ಲಿಕಾ ಶೆರಾವತ್ ಸಂದರ್ಶನವೊಂದರಲ್ಲಿ ಬಹಿರಂಗ ಪಡಿಸಿದ್ದಾರೆ.

Mallika Sherawat

ನಾನು ಹಲವು ಬಾರಿ ಬೋಲ್ಡ್ ದೃಶ್ಯಗಳಲ್ಲಿ ಅಭಿನಯಿಸಿದ್ದರಿಂದ ಒಂದು ರೀತಿ ಟಾರ್ಗೆಟ್ ಆಗಿದ್ದೆ ಮತ್ತು ಈ ವೇಳೆ ಸಮಾಜ ಕೂಡ ಹೇಗೆ ಬದಲಾಯಿತು ಎಂಬುದನ್ನು ಹಂಚಿಕೊಂಡಿದ್ದಾರೆ. 2004ರಲ್ಲಿ ಮಲ್ಲಿಕಾ ಶೆರಾವತ್ ಅಭಿನಯಿಸಿದ್ದ ಮರ್ಡರ್ ಸಿನಿಮಾದ ಬಗ್ಗೆ ಮಾತನಾಡಿದ ಅವರು, ಬೋಲ್ಡ್ ದೃಶ್ಯಗಳಲ್ಲಿ ಅಭಿನಯಿಸುವ ಮಹಿಳೆ ಹಾಗೂ ಪುರುಷರನ್ನು ಸಮಾಜ ಯಾವ ದೃಷ್ಟಿಯಲ್ಲಿ ನೋಡುತ್ತದೆ ಹಾಗೂ ಪುರುಷರು ಎಲ್ಲದರಿಂದ ದೂರ ಆದರು ಮಹಿಳೆಯರು ಮಾತ್ರ ಟಾರ್ಗೆಟ್ ಆಗಿರುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಕೊರೊನಾದಿಂದ ಮೃತಪಟ್ಟವರ ಕುಟುಂಬಕ್ಕೆ 50,000 ಪರಿಹಾರ ನೀಡಲು NDMA ಶಿಫಾರಸು

Mallika Sherawat

ಬಾಲಿವುಡ್‍ನಲ್ಲಿ ಮಹಿಳೆಯರನ್ನೇ ಯಾಕೆ ಗುರಿಯಾಗಿಸಿಕೊಳ್ಳುತ್ತಾರೆ. ಪುರುಷರನ್ನು ಮಾತ್ರ ಯಾಕೆ ಗುರಿ ಮಾಡುವುದಿಲ್ಲ. ಇದು ಕೇವಲ ಭಾರತ ಮಾತ್ರವಲ್ಲ ಇಡೀ ಪ್ರಪಂಚದಾದ್ಯಂತ ಇದೆ. ಪುರುಷರು ಎಲ್ಲದರಿಂದ ದೂರ ಆಗಬಹುದು ಆದರೆ ಮಹಿಳೆಯರನ್ನು ಮಾತ್ರ ಯಾಕೆ ಎಲ್ಲರೂ ದೂಷಿಸುತ್ತಾರೆ ಎಂದು ನನಗೆ ಗೊತ್ತಿಲ್ಲ. ಅದರಲ್ಲಿಯೂ ಭಾರತದಲ್ಲಿಯೇ ಹೆಚ್ಚು ಎಂದು ನಾನು ಭಾವಿಸುತ್ತೇನೆ. ನಮ್ಮ ಸಮಾಜವು ವಿಕಸನಗೊಂಡಿಲ್ಲ ಎಂದು ನಾನು ಅಂದುಕೊಳ್ಳುತ್ತೇನೆ. ಇಲ್ಲಿನ ಜನರು ವಿಭಿನ್ನವಾಗಿ ಯೋಚಿಸುತ್ತಾರೆ. ಅಲ್ಲದೇ ಈ ಹಿಂದೆ ಮಾಧ್ಯಮಗಳು ಸಹ ಇಂತಹ ದೃಶ್ಯಗಳಿಗೆ ಬೆಂಬಲಿಸುತ್ತಿರಲಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಸೋಲೂರಿನಲ್ಲಿ ದೇಶದಲ್ಲಿಯೇ ಪ್ರಥಮ ಬಾರಿಗೆ ಹುಲ್ಲನ್ನು ಬಳಸಿ ಬಯೋ ಗ್ಯಾಸ್ ತಯಾರು – ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಪ್ರಶಂಸೆ

ನನಗೆ ಕೆಲವು ವಿಷಯಗಳು ಕಷ್ಟವಾಗಿದ್ದರೂ, ನನ್ನ ವೃತ್ತಿ ಜೀವನದ ಆರಂಭದಲ್ಲಿ ಚಲನಚಿತ್ರಗಳ ಆಯ್ಕೆ ಮಾಡುವಾಗ ಒಂದು ರೀತಿ ಪೊಲೀಸ್  ಆಗಿದ್ದೆ. ಆದರೀಗ ಸಮಾಜ ಬದಲಾಗಿದೆ ಎಂದು ನಾನು ಅಂದುಕೊಂಡಿದ್ದೇನೆ. ಅಲ್ಲದೇ ಮಾಧ್ಯಮಗಳು ಕೂಡ ಈಗ ಹೆಚ್ಚಾಗಿ ಮಹಿಳೆಯರಿಗೆ ಬೆಂಬಲ ನೀಡುತ್ತದೆ. ಜೊತೆಗೆ ನಟಿಯರು ಈಗ ನಗ್ನ ದೃಶ್ಯಗಳಲ್ಲಿ ಅಭಿನಯಿಸಲು ಒಪ್ಪಿಕೊಳ್ಳುತ್ತಿದ್ದಾರೆ. ಇದನ್ನು ಬಹಳ ಕಲಾತ್ಮಕವಾಗಿ ಪರಿಗಣಿಸಲಾಗಿದೆ ಎಂದು ಅಭಿಪ್ರಾಯ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *