ಮಾಲಾಶ್ರೀ ಕೋರಿಕೆಯನ್ನ ಈಡೇರಿಸಿದ ದೈವ- ಕೊರಗಜ್ಜನ ಆದಿಸ್ಥಳಕ್ಕೆ ನಟಿ ಭೇಟಿ

Public TV
1 Min Read

ತುಳುನಾಡಿನ ದೈವದ ಶಕ್ತಿ, ಅದರ ಪವಾಡ ಇದೀಗ ಎಲ್ಲರ ಅರಿವಿಗೂ ಬರುತ್ತಿದೆ. ಅದರಲ್ಲೂ ಕಾಂತಾರ (Kantara) ಸಿನಿಮಾ ತೆರೆಗೆ ಬಂದ ಮೇಲಂತೂ ತುಳುನಾಡಿನ ದೈವವನ್ನು ನಂಬುವ ಸಂಖ್ಯೆ ಜಾಸ್ತಿಯಾಗಿದೆ. ಕೊರಗಜ್ಜನ ಪವಾಡದಿಂದ ನಟಿ ಮಾಲಾಶ್ರೀ ಅವರ ಬದುಕಿನಲ್ಲೂ ಬದಲಾವಣೆ ಆಗಿದೆ. ಮಂಗಳೂರಿನ ಕೊರಗಜ್ಜನ(Koragajja) ಆದಿಸ್ಥಳಕ್ಕೆ ನಟಿ ಮಾಲಾಶ್ರೀ (Malashree) ಭೇಟಿ ನೀಡಿದ್ದಾರೆ.

ಆಗಸ್ಟ್ 10ರಂದು ಮಾಲಾಶ್ರೀ ಅವರ ಜನ್ಮದಿನವಾಗಿದ್ದು, ಒಂದು ದಿನ ಮುಂಚಿತವಾಗಿಯೇ ಕೊರಗಜ್ಜನ ಸನ್ನಿಧಾನಕ್ಕೆ ನಟಿ ಮಾಲಾಶ್ರೀ ಅವರು ತಮ್ಮ ಕುಟುಂಬ ಮತ್ತು ಸ್ನೇಹಿತರೊಡನೆ ಭೇಟಿ ನೀಡಿದ್ದಾರೆ. ಬಳಿಕ ವಿಶೇಷ ಪೂಜೆಯನ್ನ ನಟಿ ಸಲ್ಲಿಸಿದ್ದಾರೆ. ಇದನ್ನೂ ಓದಿ:Kushi Trailer: ವಿಜಯ್-ಸಮಂತಾ ಲವ್, ಮದುವೆ, ಜಗಳವೇ ಇಲ್ಲಿ ಹೈಲೈಟ್

ಮಾಲಾಶ್ರೀ ಅವರು ದೈವದ ಬಳಿ ಸಂಕಲ್ಪವೊಂದನ್ನ ಮಾಡಿದ್ದರು. ಅದರಂತೆ ಅವರ ಕೋರಿಕೆಯನ್ನ ದೈವ ಈಡೇರಿಸಿದೆ. ಮೂರೇ ತಿಂಗಳಲ್ಲಿ ಬೇಡಿಕೆ ಈಡೇರಿಸಿದ ಕೊರಗಜ್ಜನ ಕುತ್ತಾರು ಆದಿಸ್ಥಳಕ್ಕೆ ಬಂದು ಮಾಲಾಶ್ರೀ ಹರಕೆ ತೀರಿಸಿದ್ದಾರೆ. ಮಾಲಾಶ್ರೀ ಜೊತೆ ಅವರ ಪುತ್ರಿ ಅನನ್ಯಾ ಸಹ ಭೇಟಿ ನೀಡಿ ಹರಕೆ ತೀರಿಸಿದ್ದಾರೆ. ಈ ವೇಳೆ ಮಾತನಾಡಿ ಮಾಲಾಶ್ರೀ, ಮೂರು ತಿಂಗಳ ಹಿಂದಷ್ಟೇ ಕೊರಗಜ್ಜನ ಕಟ್ಟೆಗೆ ಬಂದು ಬೇಡಿಕೊಂಡಿದ್ದೆವು.

ಎಲ್ಲವೂ ನಮ್ಮ ಖುಷಿಯಂತೆ ಅಂದುಕೊಂಡಂತೆ ನಡೆದಿದೆ. ಬಹಳಷ್ಟು ಪಾಸಿಟಿವ್ ಎನರ್ಜಿ ಕ್ಷೇತ್ರದಲ್ಲಿದೆ. ಒಳಗೆ ಹೋಗುವಾಗಲೇ ಸಾನಿಧ್ಯದ ಶಕ್ತಿ ಭಾಸವಾಗುತ್ತದೆ. ಬೇಡಿಕೆ ಈಡೇರಿದ ಹಾಗೆ ಹರಕೆ ತೀರಿಸಿ ಮತ್ತೆ ಆಶೀರ್ವಾದ ಪಡೆಯುವ ಉದ್ದೇಶದಿಂದ ಕುಟುಂಬ ಹಾಗೂ ಸ್ನೇಹಿತರ ಜೊತೆಗೆ ಬಂದಿದ್ದೇನೆ. ಮುಂದೆಯೂ ಬರುತ್ತೇನೆ ಎಂದು ಖುಷಿಯಿಂದ ನಟಿ ಮಾತನಾಡಿದ್ದಾರೆ. ಬಳಿಕ ದೇವಸ್ಥಾನದ ಸಮತಿ ಕಡೆಯಿಂದ ಮಾಲಾಶ್ರೀ ಅವರ ಮಗಳಿಗೆ ಸನ್ಮಾನ ಮಾಡಲಾಯಿತು.

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್