‘ಮಲೈಕೋಟೈ ವಾಲಿಬನ್’ ಫಸ್ಟ್ ಲುಕ್ ಪೋಸ್ಟರ್ ರಿಲೀಸ್

Public TV
1 Min Read

ನ್ನಡವೂ ಸೇರಿದಂತೆ ಹಿಂದಿ, ತೆಲುಗು, ತಮಿಳು ಹಾಗೂ ಮಲೆಯಾಳಂ ಭಾಷೆಗಳಲ್ಲಿ ನಿರ್ಮಾಣವಾಗಿರುವ ’ಮಲೈಕೋಟೈ ವಾಲಿಬನ್’ (Malaikotai Valiban) ಸಿನಿಮಾದ ಫಸ್ಟ್ ಲುಕ್ (First Look) ಪೋಸ್ಟರ್ ರಿಲೀಸ್ ಆಗಿದೆ. ಮಾಲಿವುಡ್ ಸೂಪರ್‌ಸ್ಟಾರ್ ಮೋಹನ್‌ ಲಾಲ್ (Mohanlal) ನಟನೆ, ಲಿಜೋ ಜೋಸ್‌ ಫೆಲ್ಲಿಸ್ಸರಿ ರಚನೆ ಹಾಗೂ ನಿರ್ದೇಶನದಲ್ಲಿ ಚಿತ್ರ ರೆಡಿಯಾಗಿದೆ.

ಹಬ್ಬದ ಪ್ರಯುಕ್ತ ತಂಡವು ಸಿನಿಮಾದ ಫಸ್ಟ್ ಲುಕ್‌ ಅನ್ನು ರಿಲೀಸ್ ಮಾಡಿದ್ದು, ಆಂಗ್ರಿಯಂಗ್ ಮ್ಯಾನ್ ಅವತಾರದಲ್ಲಿ ಆವೇಶದಿಂದ ದಪ್ಪದಾದ ಹಗ್ಗವನ್ನು ಎಳೆಯುತ್ತಿರುವ ನಾಯಕನ ಸ್ಟಿಲ್ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಬರುವಂತೆ ಮಾಡಿದೆ. ಜಾನ್ ಮೇರಿ ಕ್ರಿಯೇಟೀವ್ ಬ್ಯಾನರ್ ಅಡಿಯಲ್ಲಿ ಶಿಬುಬೇಬಿ ಜಾನ್ ಬಂಡವಾಳ ಹೂಡುತ್ತಿದ್ದು, ಸೆಂಚೂರಿ ಫಿಲಿಂಸ್‌ನ ಕೋಚುಮನ್ ಮತ್ತು ಮ್ಯಾಕ್ಸ್ ಲ್ಯಾಬ್‌ನ ಅನೂಪ್ ಇವರುಗಳು ನಿರ್ಮಾಣದಲ್ಲಿ ಪಾಲುದಾರರು. ಇದನ್ನೂ ಓದಿ:ರಾಕಿ ಭಾಯ್ ಲೆಜೆಂಡ್ ಎಂದು ಹಾಡಿ ಹೊಗಳಿದ ಪೂಜಾ ಹೆಗ್ಡೆ

ಕಥೆ ಹಾಗೂ ಹಿನ್ನಲೆ ಕುರಿತಂತೆ ಒಂದಷ್ಟು ವದಂತಿಗಳು ಹಬ್ಬಿದ್ದವು. ಆದರೆ ನಿರ್ಮಾಪಕರು ಮಲೈಕೋಟೈ ವಾಲಿಬನ್ ಅವರದಲ್ಲವೆಂದು ಸ್ಪಷ್ಟನೆ ನೀಡಿದ್ದಾರೆ. ಉಳಿದಂತೆ ತಾರಗಣದ ವಿವರವನ್ನು ಬಿಟ್ಟುಕೊಟ್ಟಿಲ್ಲ. ಆದರೂ ಆಯಾ ಭಾಷೆಯ ಖ್ಯಾತ ಕಲಾವಿದರನ್ನು ಬಳಸಿಕೊಳ್ಳುವುದಾಗಿ ಹೇಳಿಕೊಂಡಿದ್ದಾರೆ. ಪ್ರಶಾಂತ್‌ ಪಿಳ್ಳೈ ಸಂಗೀತ, ಪಿ.ಎಸ್.ರಫಿಕ್ಯೂ ಚಿತ್ರಕಥೆ, ’ಅಮೆನ್’ ಖ್ಯಾತಿಯ ಮಂಧು ನೀಲಕಂದನ್ ಛಾಯಾಗ್ರಹಣ, ದೀಪುಜೋಸಫ್ ಸಂಕಲನವಿದೆ. ಜನವರಿ 18 ರಿಂದ ಜೈಸಲ್ಮರ್, ರಾಜಸ್ತಾನ್ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಯುತ್ತಿದೆ.

Share This Article