ಕಪೂರ್ ಫ್ಯಾಮಿಲಿಗೆ ಟಕ್ಕರ್ ಕೊಟ್ಟ ಮಲೈಕಾ: ಬ್ರೇಕ್ ಅಪ್ ಅಂತಿದ್ದಾರೆ ಫ್ಯಾನ್ಸ್

Public TV
2 Min Read

ಬಾಲಿವುಡ್ (Bollywood) ಹಾಟ್ ಬೆಡಗಿ ಮಲೈಕಾ ಆರೋರಾ ಮತ್ತು ಅರ್ಜುನ್ ಕಪೂರ್ (Arjun Kapoor) ದೂರ ದೂರ ಆಗಿದ್ದಾರೆ ಎನ್ನುವ ಮಾತು ಬಾಲಿವುಡ್ ಅಂಗಳದಿಂದ ಕೇಳಿ ಬರುತ್ತಿದೆ. ತಮ್ಮಿಬ್ಬರ ನಡುವೆ ಸಾಕಷ್ಟು ವಯಸ್ಸಿನ ಅಂತರವಿದ್ದರೂ, ಅರ್ಜುನ್ ಹೊಂದಿಕೊಂಡು ಹೋಗುತ್ತಿದ್ದಾರೆ ಎನ್ನುವ ಮಾತಿತ್ತು. ಇದೀಗ ಕಪೂರ್ ಫ್ಯಾಮಿಲಿಯ ಬಹುತೇಕ ಸದಸ್ಯರ ಸೋಷಿಯಲ್ ಮೀಡಿಯಾ ಅಕೌಂಟ್ ಅನ್ನು ಫಾಲೋ ಮಾಡುವುದನ್ನು ನಿಲ್ಲಿಸಿದ್ದರೆ. ಅನ್ ಫಾಲೋ ಮಾಡಿದ್ದಾರೆ ಎನ್ನುವ ಕಾರಣಕ್ಕಾಗಿ ಅರ್ಜುನ್ ಮತ್ತು ಮಲೈಕಾ ಸ್ನೇಹಕ್ಕೆ ಫುಲ್ ಸ್ಟಾಪ್ ಬಿದ್ದಿದೆ ಎಂದು ಹೇಳಲಾಗುತ್ತಿದೆ.

ಇತ್ತೀಚೆಗಷ್ಟೇ ಮಲೈಕಾ ಆರೋರಾ ಗರ್ಭಿಣಿ ಎನ್ನುವ ವಿಚಾರ ಬಿಟೌನ್ ನಲ್ಲಿ ಭಾರೀ ಚರ್ಚೆ ಹುಟ್ಟು ಹಾಕಿತ್ತು. ಈ ವಿಷಯದ ಕುರಿತಾಗಿಯೇ ಅನೇಕರು ಟ್ರೋಲ್ ಕೂಡ ಮಾಡಿದ್ದರು. ಅಧಿಕೃತವಾಗಿ 2ನೇ ಮದುವೆ ಘೋಷಣೆ ಮಾಡದೇ, ಮಲೈಕಾ ಮಗು ಮಾಡಿಕೊಂಡಿದ್ದಾರೆ ಎಂದು ಹಲವರು ಕಾಮೆಂಟ್ ಕೂಡ ಮಾಡಿದ್ದರು. ಈ ಕುರಿತು ಮಲೈಕಾ (Malaika Arora) ಬಾಯ್ ಫ್ರೆಂಡ್, ನಟ ಅರ್ಜುನ್ ಕಪೂರ್ ಪ್ರತಿಕ್ರಿಯೆ ನೀಡಿದ್ದರು.

ಮಲೈಕಾ ಗರ್ಭಿಣಿ ಎಂದು ಸುಳ್ಳು ಹಬ್ಬಿಸುತ್ತಿರುವವರ ಬಗ್ಗೆ ಕಿಡಿಕಾರಿರುವ ಅರ್ಜುನ್, ‘ಈ ರೀತಿ ಸುಳ್ಳು ಹೇಳುವುದು ಸರಿಯಲ್ಲ. ಬೇರೆಯವರ ಜೀವನದಲ್ಲಿ ಯಾರೂ ಆಟವಾಡಬಾರದು. ಬೇರೆಯವರ ನೆಮ್ಮದಿ ಹಾಳು ಮಾಡುವುದು ಸರಿಯಲ್ಲ. ಯಾರ ಮನಸ್ಸಿಗೂ ನೋವು ಆಗದಂತೆ ಇರಬೇಕು’ ಎಂದು ಪಾಠವನ್ನೂ ಮಾಡಿದ್ದರು.

ಈ ನಡುವೆ ಗೆಳೆಯ ಅರ್ಜುನ್ ಕಪೂರ್ ಅವರ ಖಾಸಗಿ ಫೋಟೋವನ್ನ ಮಲೈಕಾ ಶೇರ್ ಮಾಡಿದ್ದರು. ಆ ಫೋಟೋ ಕೂಡ ಟ್ರೋಲಿಗರ ಬಾಯಿಗೆ ಆಹಾರವಾಗಿತ್ತು. ಸದಾ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಲ್ಲಿರುವ ಈ ಜೋಡಿ ಸಿನಿಮಾಗಿಂತ ಖಾಸಗಿ ವಿಚಾರವಾಗಿಯೇ ಹೆಚ್ಚು ಸುದ್ದಿಯಲ್ಲಿರುತ್ತಾರೆ.

 

ಮಲೈಕಾ- ಅರ್ಜುನ್ ಕಪೂರ್ ರಿಲೇಷನ್‌ಶಿಪ್ ಇದೀಗ ಗುಟ್ಟಾಗಿ ಏನು ಉಳಿದಿಲ್ಲ. ಅರ್ಬಾಜ್ ಖಾನ್ ಜೊತೆಗಿನ ದಾಂಪತ್ಯಕ್ಕೆ ಅಂತ್ಯ ಹಾಡಿದ ಮೇಲೆ ಮಲೈಕಾ, ಅರ್ಜುನ್ ಕಪೂರ್ ಜೊತೆ ಡೇಟ್ ಮಾಡುತ್ತಿದ್ದಾರೆ. ಲಿವಿಂಗ್ ರಿಲೇಷನ್‌ಶಿಪ್ನಲ್ಲೂ ಇದ್ದಾರೆ. ಆಗಾಗ ಇಬ್ಬರೂ ವಿದೇಶಕ್ಕೆ ಹೋಗಿ ಬರುತ್ತಾರೆ. ಅಷ್ಟರ ಮಟ್ಟಿಗೆ ಇಬ್ಬರ ಬಂಧ ಗಟ್ಟಿಯಾಗಿತ್ತು. ಇದೀಗ ಅಪಸ್ವರ ಕೇಳಿ ಬರುತ್ತಿದೆ.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್