ನನ್ನನ್ನು ಐಟಂ ಗರ್ಲ್ ಎಂದವರಿಗೆ ಕಪಾಳಕ್ಕೆ ಬಾರಿಸುತ್ತೇನೆ: ಮಲೈಕಾ ಅರೋರಾ

Public TV
1 Min Read

ಮುಂಬೈ: ನನ್ನನ್ನು ಐಟಂ ಗರ್ಲ್ ಎಂದು ಕರೆದವರ ಕಪಾಳಕ್ಕೆ ಬಾರಿಸುತ್ತೇನೆ ಎಂದು ಬಾಲಿವುಡ್ ನಟಿ ಮಲೈಕಾ ಅರೋರಾ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.

ಇತ್ತೀಚೆಗೆ ಮಲೈಕಾ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಈ ವೇಳೆ ನಿರೂಪಕ ನಿಮಗೆ ಐಟಂ ಗರ್ಲ್ ಎಂದು ಕರೆಯುತ್ತಿರುತ್ತಾರೆ. ಆಗ ನಿಮ್ಮ ಪ್ರತಿಕ್ರಿಯೆ ಏನು ಎಂದು ಕೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಮಲೈಕಾ, “ನಾನು ಯಾವುದೇ ಹಾಡನ್ನು ಮಾಡಬೇಕೆಂದರೆ ಇಷ್ಟಪಟ್ಟು ಮಾಡಿದ್ದೇನೆ. ನನಗೆ ಇದರಲ್ಲಿ ಯಾವುದೇ ಅಭ್ಯಂತರವಿರಲಿಲ್ಲ. ನನಗೆ ಏನಾದರೂ ಇಷ್ಟವಾಗಿರಲಿಲ್ಲ ಎಂದರೆ ನಾನು ಆಗ ಮಾತನಾಡುತ್ತಿದೆ. ಇದನ್ನು ನಿರಾಕರಿಸುತ್ತಿದೆ” ಎಂದು ಹೇಳಿದ್ದಾರೆ.

ಈಗ ಸಮಯ ಬದಲಾಗಿದೆ. ನಾನು 80 ಹಾಗೂ 90ರ ದಶಕದಲ್ಲಿ ವಿಶೇಷ ಹಾಡಿಗೆ ಹೆಜ್ಜೆ ಹಾಕಿದ್ದಾಗ ಎಲ್ಲರೂ ಐಟಂ ಸಾಂಗ್ ಎಂದು ಕರೆಯುತ್ತಿದ್ದರು. ಆಗ ನನಗೆ ಕೋಪ ಬರುತಿತ್ತು. ಅಲ್ಲದೆ ನನಗೆ ಯಾರಾದರೂ ಐಟಂ ಗರ್ಲ್ ಎಂದು ಕರೆದರೆ ಕಪಾಳಕ್ಕೆ ಬಾರಿಸಬೇಕು ಎಂದು ಅನಿಸುತ್ತಿತ್ತು. ನನಗೆ ಇಷ್ಟವಾದ ಹಾಡಿಗೆ ನಾನು ಹೆಜ್ಜೆ ಹಾಕಿದ್ದೇನೆ ಹೊರತು ಬೇರೆ ಯಾರ ಬಲವಂತಕ್ಕೂ ನಾನು ಸಿನಿಮಾಗಳಲ್ಲಿ ಡ್ಯಾನ್ಸ್ ಮಾಡಿಲ್ಲ ಎಂದು ಮಲೈಕಾ ತಿಳಿಸಿದ್ದಾರೆ.

ಮಲೈಕಾ ಬಾಲಿವುಡ್ ಬಾದ್‍ಶಾ ಶಾರುಕ್ ಖಾನ್ ಅವರ ‘ದಿಲ್ ಸೇ’ ಚಿತ್ರದಲ್ಲಿ ‘ಛಯ್ಯಾ ಛಯ್ಯಾ’ ಹಾಡಿಗೆ ಹೆಜ್ಜೆ ಹಾಕುವುದರ ಮೂಲಕ ಬಾಲಿವುಡ್‍ಗೆ ಎಂಟ್ರಿ ಕೊಟ್ಟಿದ್ದರು. ಅಲ್ಲದೇ ‘ದಬಾಂಗ್’ ಚಿತ್ರದಲ್ಲಿ ಸಲ್ಮಾನ್ ಜೊತೆ ‘ಮುನ್ನಿ ಬದನಾಂ ಹುವಿ’, ‘ಹೌಸ್‍ಫುಲ್-2’ ಚಿತ್ರದಲ್ಲಿ ‘ಅರ್ನಾಕಲಿ ಡಿಸ್ಕೋ ಚಲಿ’ ಹಾಗೂ ತೆಲುಗಿನ ‘ಗಬ್ಬರ್ ಸಿಂಗ್’ ಚಿತ್ರದ ವಿಶೇಷ ಹಾಡಿಗೆ ಹೆಜ್ಜೆ ಹಾಕಿದ್ದರು.

Share This Article
Leave a Comment

Leave a Reply

Your email address will not be published. Required fields are marked *