ಹೀಗೆ ಮಾಡಿ ಸಿಂಪಲ್ ಪೀನಟ್ ಬಟರ್‌ನ ಮಿಠಾಯಿ

By
1 Min Read

ನೆಯಲ್ಲಿ ಏನೂ ಸಿಹಿ ಪದಾರ್ಥಗಳು ಇಲ್ಲದೇ ಹೋದಾಗ, ಫಟಾಫಟ್ ಅಂತ ಏನಾದರೂ ಸಿಹಿ ತಯಾರಿಸಬೇಕಾಗಿ ಬಂದಾಗ ನಾವಿಂದು ಹೇಳಿಕೊಡುತ್ತಿರುವ ರೆಸಿಪಿ ಮಾಡಲು ಪರ್ಫೆಕ್ಟ್ ಆಗಿದೆ. ಮಕ್ಕಳು ಮನೆಯಲ್ಲಿದ್ದಾಗ ಈ ಪೀನಟ್ ಬಟರ್‌ನ ಮಿಠಾಯಿ ಮಾಡೋದು ಖಡಿತಾ ಮರೆಯಬೇಡಿ. ಆರೋಗ್ಯಕರ ಮಿಠಾಯಿ ರೆಸಿಪಿಯನ್ನು ಕೆಲವೇ ನಿಮಿಷಗಳಲ್ಲಿ ತಯಾರಿಸಬಹುದು. ಹಾಗಿದ್ದರೆ ಪೀನಟರ್ ಬಟರ್‌ನ ಮಿಠಾಯಿ ಹೇಗೆ ಮಾಡೋದು ಎಂದು ನೋಡೋಣ.

ಬೇಕಾಗುವ ಪದಾರ್ಥಗಳು:
ಪೀನಟ ಬಟರ್ – 1 ಕಪ್
ತೆಂಗಿನ ಎಣ್ಣೆ – ಅರ್ಧ ಕಪ್
ಮೇಪಲ್ ಸಿರಪ್ – ಅರ್ಧ ಕಪ್
ವೆನಿಲ್ಲಾ ಸಾರ – ಕಾಲು ಟೀಸ್ಪೂನ್
ಒರಟಾಗಿ ಪುಡಿ ಮಾಡಿದ ನೆಲ ಕಡಲೆ – ಕಾಲು ಕಪ್ ಇದನ್ನೂ ಓದಿ: ಆರೋಗ್ಯಕರ ಬಾದಾಮಿ, ಖರ್ಜೂರ ಹಾಲು

ಮಾಡುವ ವಿಧಾನ:
* ಮೊದಲಿಗೆ ಒಂದು ಬೌಲ್‌ನಲ್ಲಿ ಮೇಲೆ ತಿಳಿಸಲಾದ ಎಲ್ಲಾ ಪದಾರ್ಥಗಳನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
* ಒಂದು ಬಟ್ಟಲಿಗೆ ಬಟರ್ ಪೇಪರ್ ಅನ್ನು ಜೋಡಿಸಿ, ಅದರ ಮೇಲೆ ಈ ಮಿಶ್ರಣವನ್ನು ಸುರಿಯಿರಿ.
* ಬಟ್ಟಲನ್ನು ಫ್ರಿಜ್‌ನಲ್ಲಿ ಇಟ್ಟು, ಸುಮಾರು 1 ಗಂಟೆ ಗಟ್ಟಿಯಾಗಲು ಬಿಡಿ.
* ಈಗ ಬಟ್ಟಲನ್ನು ಹೊರ ತೆಗೆದು, ಮಿಠಾಯಿಯನ್ನು ಬಟ್ಟಲಿನಿಂದ ಬೇರ್ಪಡಿಸಿ.
* ಸುಮಾರು 5 ನಿಮಿಷ ರೂಮ್ ಟೆಂಪ್ರೇಚರ್‌ನಲ್ಲಿ ಮಿಠಾಯಿಯನ್ನು ಸ್ವಲ್ಪ ಮೃದುವಾಗಲು ಬಿಟ್ಟು, ಬಳಿಕ ಚಾಕು ಸಹಾಯದಿಂದ ಚೌಕಾಕಾರವಾಗಿ ಕತ್ತರಿಸಿಕೊಳ್ಳಿ.
* ಇದೀಗ ಪೀನಟ್ ಬಟರ್ ಮಿಠಾಯಿ ತಯಾರಾಗಿದ್ದು, ಸವಿಯಲು ಮಕ್ಕಳಿಗೆ ನೀಡಿ.
* ಉಳಿದ ಮಿಠಾಯಿಯನ್ನು ಗಾಳಿಯಾಡದ ಡಬ್ಬಿಯಲ್ಲಿ ಸಂಗ್ರಹಿಸಿ, ಫ್ರಿಜ್‌ನಲ್ಲಿ ಇಡಿ. ಹಾಗೂ ಬೇಕೆನಿಸಿದಾಗ ಸವಿಯಿರಿ. ಏಕೆಂದರೆ ರೂಮ್ ಟೆಂಪ್ರೇಚರ್‌ನಲ್ಲಿ ಮಿಠಾಯಿ ಮೃದುವಾಗುತ್ತದೆ. ಇದನ್ನೂ ಓದಿ: ನಾಲ್ಕೇ ಪದಾರ್ಥ ಸಾಕು – ರುಚಿಕರವಾದ ತೆಂಗಿನಕಾಯಿ ಬಿಸ್ಕಿಟ್ ಹೀಗೆ ಮಾಡಿ

Web Stories

Share This Article
ಮಳೆಗಾಲದಲ್ಲಿ ಪಡ್ಡೆಗಳ ಮೈಚಳಿ ಬಿಡಿಸಿದ ತಮನ್ನಾ ಹಾಟ್‌ ಲುಕ್‌ ಯೋಗ ದಿನದಂದು ನಟಿ ಪ್ರಣಿತಾ ಯೋಗ… ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್