ಬ್ರೇಕ್‌ಫಾಸ್ಟ್‌ಗೆ ಮಾಡಿ ಚೀಸೀ ಗಾರ್ಲಿಕ್‌ ಬ್ರೆಡ್‌!

1 Min Read

ಕೆಲವೊಮ್ಮೆ ಅಡುಗೆ ಮಾಡಿಕೊಳ್ಳಲು ಬೇಜಾರಾಗುತ್ತದೆ. ಅಂತಹ ಸಮಯದಲ್ಲಿ ನಾವೆಲ್ಲ ಬೇಗನೆ ತಯಾರಾಗುವ ಅಡುಗೆ ಬಗ್ಗೆ ಯೋಚನೆ ಮಾಡುತ್ತೇವೆ. ಜೊತೆಗೆ ಚೆನ್ನಾಗಿಯೂ ಇರಬೇಕು ಎಂದು ಆಸೆ ಪಡುತ್ತೇವೆ. ಆದರೆ ಚೆನ್ನಾಗಿರಬೇಕೆಂದರೆ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಹೀಗಾಗಿ ಇಂತಹ ಸಮಯದಲ್ಲಿ ಸುಲಭವಾಗಿ ಹಾಗೂ ಬಾಯಿಗೆ ಹಿತ ನೀಡುವ ಅಡುಗೆ ಬೇಕೆಂದರೆ ಈ ಗಾರ್ಲಿಕ್ ಬ್ರೆಡ್ ಮಾಡಿ ಸವಿಯಿರಿ.

ಬೇಕಾಗುವ ವಿಧಾನಗಳು;
ಬೆಳ್ಳುಳ್ಳಿ
ಬೆಣ್ಣೆ
ಈರುಳ್ಳಿ
ಕೊತ್ತಂಬರಿ
ಆರಿಗ್ಯಾನೋ
ಚಿಲ್ಲಿ ಫ್ಲಿಕ್ಸ್‌
ಎಣ್ಣೆ
ಚೀಸ್‌

ಮಾಡುವ ವಿಧಾನ;
ಮೊದಲಿಗೆ ಬೆಳ್ಳುಳ್ಳಿಯನ್ನು ಎಣ್ಣೆಯಲ್ಲಿ ಕರಿದುಕೊಳ್ಳಬೇಕು. ಗೋಲ್ಡನ್‌ ಬಣ್ಣ ಬರುವವರೆಗೂ ಕರೆದು ಅದನ್ನು ಸ್ಮ್ಯಾಶ್‌ ಮಾಡಿಕೊಳ್ಳಬೇಕು. ಅದಕ್ಕೆ ಬೆಣ್ಣೆಯನ್ನು ಹಾಕಿಕೊಳ್ಳಬೇಕು. ಅದಕ್ಕೆ ಚಿಕ್ಕದಾಗಿ ಕತ್ತರಿಸಿರುವ ಈರುಳ್ಳಿ, ಕೊತ್ತಂಬರಿ, ಆರಿಗ್ಯಾನೋ, ಚಿಲ್ಲಿ ಫ್ಲಿಕ್ಸ್‌ ಹಾಕಿಕೊಳ್ಳಿ. ನಂತರ ಎಲ್ಲವನ್ನೂ ಚೆನ್ನಾಗಿ ಕಲಸಿಕೊಳ್ಳಿ. ನಂತರ ಬ್ರೆಡ್‌ ಅಥವಾ ಬನ್‌ ತೆಗೆದುಕೊಂಡು ಅದಕ್ಕೆ ಕಲಸಿದ ಮಿಶ್ರಣವನ್ನು ಹಚ್ಚಿಕೊಳ್ಳಿ. ಅದರ ಮೇಲೆ ಚೆನ್ನಾಗಿ ತುರಿದುಕೊಂಡು ಚೀಸ್‌ ಹಾಕಿಕೊಳ್ಳಿ.

Mak

ಒಂದು ಕಡಾಯಿ ತೆಗೆದುಕೊಂಡು ಅದರಲ್ಲಿ ಬನ್‌ ಇಟ್ಟು ಮೇಲೆ ಮುಚ್ಚಿಕೊಳ್ಳಬೇಕು. ಸ್ವಲ್ಪ ಹೊತ್ತು ಬನ್‌ ಫ್ರೈ ಮಾಡಿಕೊಳ್ಳಬೇಕು. ಅದನ್ನು ಬಳಿಕ ಚಿಕ್ಕ ಚಿಕ್ಕ ಪೀಸ್‌ಗಳಾಗಿ ಮಾಡಿಕೊಂಡರೆ, ಗಾರ್ಲಿಕ್‌ ಬ್ರೆಡ್‌ ತಯಾರಾಗುತ್ತದೆ.

Share This Article