ಎಗ್‌ನಿಂದ ಮಾಡಿ ಬಟರ್‌ ಗಾರ್ಲಿಕ್‌ ರೆಸಿಪಿ!

1 Min Read

ಬಟರ್‌ ಗಾರ್ಲಿಕ್‌ ಅನ್ನು ಸಾಮಾನ್ಯವಾಗಿ ನಾವೆಲ್ಲರೂ ತಿಂದಿರುತ್ತೇವೆ. ಆದರೆ ಮೊಟ್ಟೆ ಬಳಸಿ ವಿಭಿನ್ನವಾಗಿ ಬಟರ್‌ ಗಾರ್ಲಿಕ್‌ ಮಾಡಬಹುದು. ನಿಜಕ್ಕೂ ಒಂದು ಬಾರಿ ಮಾಡಿಕೊಂಡು ತಿಂದರೆ ಮತ್ತೆ ಮತ್ತೆ ತಿನ್ನಬೇಕು ಎನ್ನಿಸುತ್ತದೆ.

ಬೇಕಾಗುವ ಸಾಮಗ್ರಿಗಳು:
ಮೊಟ್ಟೆ
ಉಪ್ಪು
ಮೆಣಸಿನ ಪುಡಿ
ಚಿಲ್ಲಿ ಫ್ಲೆಕ್ಸ್‌
ಬೆಳ್ಳುಳ್ಳಿ
ಹಾಲು
ಕಾರ್ನ್‌ ಫ್ಲೋರ್‌
ಇಟಾಲಿಯನ್‌ ಸೀಸನಿಂಗ್‌

ಮಾಡುವ ವಿಧಾನ:
ಮೊದಲಿಗೆ ಒಂದು ಬೌಲ್‌ಗೆ ಮೊಟ್ಟೆಯನ್ನು ಒಡೆದುಕೊಳ್ಳಬೇಕು. ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು, ಕರಿಮೆಣಸಿನ ಪುಡಿ, ಚಿಲ್ಲಿ ಫ್ಲೆಕ್ಸ್‌ ಹಾಗೂ ಸಣ್ಣದಾಗಿ ಕತ್ತರಿಸಿದ ಬೆಳ್ಳುಳ್ಳಿಯನ್ನು ಹಾಕಿಕೊಂಡು ಚೆನ್ನಾಗಿ ಕಲಸಬೇಕು. ಬಳಿಕ ಒಂದು ಬಾಣಲಿಗೆ ಎಣ್ಣೆ ಅಥವಾ ಬೆಣ್ಣೆ ಹಾಕಿ, ಅದಕ್ಕೆ ಕಲಸಿದ ಮೊಟ್ಟೆ ಮಿಶ್ರಣವನ್ನು ಹಾಕಿ.. ಡ್ರೈ ಆಗುವವರೆಗೂ ಹುರಿದುಕೊಳ್ಳಬೇಕು.

ನಂತರ ಇನ್ನೊಂದು ಬಾಣಲಿಗೆ ಬೆಣ್ಣೆ, ಸಣ್ಣದಾಗಿ ಕತ್ತರಿಸಿದ ಬೆಳ್ಳುಳ್ಳಿ, ರುಚಿಗೆ ತಕ್ಕಷ್ಟು ಉಪ್ಪು, ಕರಿಮೆಣಸಿನ ಪುಡಿ, ಚಿಲ್ಲಿ ಫ್ಲೆಕ್ಸ್‌ ಹಾಕಿ ಮಿಕ್ಸ್‌ ಮಾಡಬೇಕು. ಅದಕ್ಕೆ ಸ್ವಲ್ಪ ಕಾರ್ನ್‌ ಫ್ಲೋರ್‌ ಹಾಕಿಕೊಂಡು ಮಿಕ್ಸ್‌ ಮಾಡಿ, ಹಾಲು ಹಾಕಬೇಕು. ಚೆನ್ನಾಗಿ ಕುದಿಯಲು ಆರಂಭಿಸಿದಾಗ ಅದಕ್ಕೆ ಇಟಾಲಿಯನ್‌ ಸೀಸನಿಂಗ್‌ ಹಾಕಬೇಕು. ಕೊನೆಗೆ ಅದಕ್ಕೆ ಮೊಟ್ಟೆಯ ಡ್ರೈ ಮಿಶ್ರಣವನ್ನು ಹಾಕಿದರೆ.. ಬಟರ್‌ ಗಾರ್ಲಿಕ್‌ ಎಗ್ ತಯಾರಾಗುತ್ತದೆ.

ಮೊಟ್ಟೆಯನ್ನು ನೀವು ಎಷ್ಟು ಜನಕ್ಕೆ ಮಾಡುತ್ತಿದ್ದೀರಾ ಎನ್ನುವುದರ ಮೇಲೆ ನಿರ್ಧರಿಸಬೇಕು.

Share This Article