ಟೇಸ್ಟಿಯಾಗಿ ಮಾಡಿ ಸಂಡೇ ಸ್ಪೆಷಲ್ ಎಗ್ ಪಡ್ಡು..

Public TV
1 Min Read

ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ದೋಸೆ, ಇಡ್ಲಿ, ಪಡ್ಡು ಮಾಡುತ್ತಾರೆ. ಅದರಲ್ಲೂ ವಿವಿಧ ಬಗೆಯ ದೋಸೆ, ಇಡ್ಲಿ ಮಾಡುವುದು ಸಾಮಾನ್ಯ. ಜೊತೆಗೆ ವಿಶೇಷವಾಗಿ ಸ್ಟಫ್ಡ್ ಪಡ್ಡು ಕೂಡ ಮಾಡುತ್ತಾರೆ. ಇನ್ನು ಹೊರಗಡೆ ತಿನ್ನುವುದಾದರೆ 99 ವಿವಿಧ ಬಗೆಯ ದೋಸೆ, ಆಮ್ಲೆಟ್ ಹೀಗೆ ವಿವಿಧ ರೀತಿಯಲ್ಲಿ ಮಾಡುತ್ತಾರೆ. ಇದೆಲ್ಲದಕ್ಕೂ ವಿಭಿನ್ನವಾಗಿ ಸಂಡೇ ಸ್ಪೆಷಲ್ ಎಗ್ ಪಡ್ಡು ಮಾಡಿ.

 

ಆಮ್ಲೆಟ್ ಮಾಡುವಾಗ ಅದಕ್ಕೆ ವಿವಿಧ ಮಸಾಲೆಗಳನ್ನು ಸೇರಿಸಿ ಬೇರೆ ರೀತಿಯಲ್ಲಿ ಮಾಡಲು ಪ್ರಯತ್ನಿಸುತ್ತಾರೆ. ಹಾಗೆಯೇ ಎಗ್ ಪಡ್ಡು ಮಾಡಬಹುದು. ಇದೇ ರೀತಿ ಎಗ್‌ ಪಡ್ಡನ್ನು ಮಕ್ಕಳಿಗೆ ಬೇರೆ ರೀತಿಯಲ್ಲಿಯೂ ಮಾಡಬಹುದು.

ಬೇಕಾಗುವ ಸಾಮಗ್ರಿಗಳು:
ಮೊಟ್ಟೆ
ಈರುಳ್ಳಿ
ಮೆಣಸಿನ ಕಾಯಿ ಅಥವಾ ಖಾರದಪುಡಿ
ಕೊತ್ತಂಬರಿ
ಈರುಳ್ಳಿ
ಟೊಮೆಟೊ
ಉಪ್ಪು
ಎಣ್ಣೆ

ಮಾಡುವ ವಿಧಾನ:
ಮೊದಲಿಗೆ ನೀವು ಪಡ್ಡು ಮಾಡುವ ಆಧಾರದ ಮೇಲೆ ಅಥವಾ ಎಷ್ಟು ಜನರಿಗೆ ಪಡ್ಡು ಮಾಡುತ್ತೀರಾ ಎನ್ನುವ ಆಧಾರದ ಮೇಲೆ ಮೊಟ್ಟೆಯನ್ನು ನಿರ್ಧರಿಸಬೇಕು. ಒಂದು ಪಾತ್ರೆಗೆ ಮೊಟ್ಟೆಗಳನ್ನು ಒಡೆದುಕೊಳ್ಳಬೇಕು. ಅದಕ್ಕೆ ಚಿಕ್ಕದಾಗಿ ಕತ್ತರಿಸಿದ ಈರುಳ್ಳಿ, ಟೊಮ್ಯಾಟೊ, ಉಪ್ಪು, ಖಾರದಪುಡಿ ಅಥವಾ ಹೆಚ್ಚಿದ ಮೆಣಸಿನ ಕಾಯಿ ಹಾಕಿ ಚೆನ್ನಾಗಿ ಕಲಸಿಕೊಳ್ಳಬೇಕು. ಬಳಿಕ ಕಾದ ಪಡ್ಡಿನ ಹಂಚಿಗೆ ಎಣ್ಣೆ ಹಾಕಿ ಮೊಟ್ಟೆ ಮಿಶ್ರಣವನ್ನು ಹಾಕಿಕೊಳ್ಳಬೇಕು. ಸ್ವಲ್ಪ ಹೊತ್ತಿನ ಬಳಿಕ ಬಿಸಿ ಬಿಸಿಯಾದ ಪಡ್ಡು ತಯಾರಾಗುತ್ತದೆ.

ಇದನ್ನು ನೀವು ಹಾಗೆಯೆ ಅಥವಾ ಸಾಸ್, ಚಟ್ನಿ ಜೊತೆಗೆ ತಿನ್ನಬಹುದು. ಮಕ್ಕಳಿಗೆ ಮಾಡುವುದಾದರೆ ಮೊಟ್ಟೆ ಒಡೆದ ನಂತರ ಕೇವಲ ಉಪ್ಪು ಹಾಕಿ ಕೂಡ ತಯಾರಿಸಬಹುದು.

Share This Article