ನಾಗರ ಪಂಚಮಿಗೆ ಉತ್ತರ ಕರ್ನಾಟಕದ ಸ್ಪೆಷಲ್‌ ಬೇಯಿಸಿದ ಹೂರಣ ಕಡುಬು ಮಾಡಿ

Public TV
1 Min Read

ತ್ತರ ಕರ್ನಾಟಕದಲ್ಲಿ ವಿಜೃಂಭಣೆಯಿಂದ ಆಚರಿಸುವ ಹಬ್ಬಗಳಲ್ಲಿ ನಾಗರ ಪಂಚಮಿಯೂ ಒಂದು. ಶ್ರಾವಣದ ಜೊತೆಗೆ ನಾಗರಪಂಚಮಿ ಬರುವುದರಿಂದ ಅದರ ಕಳೆ ಇನ್ನಷ್ಟು ಹೆಚ್ಚುತ್ತದೆ.

ಉತ್ತರ ಕರ್ನಾಟಕದ ಜಿಲ್ಲೆಗಳಾದ ಬಾಗಲಕೋಟೆ, ವಿಜಯಪುರ, ಬೆಳಗಾವಿ, ಬೀದರ್‌, ಕಲಬುರಗಿ ಸೇರಿದಂತೆ ಇನ್ನಿತರ ಜಿಲ್ಲೆಗಳಲ್ಲಿ ನಾಗರ ಪಂಚಮಿಯಂದು ಬೇಯಿಸಿದ ಹೂರಣದ ಕಡುಬು ಮಾಡುವುದು ವಿಶೇಷ. ಇದನ್ನು ದೇವರಿಗೆ ನೈವೇದ್ಯವಾಗಿಯೂ ಅರ್ಪಿಸುತ್ತಾರೆ.

ಬೇಕಾಗುವ ಪದಾರ್ಥಗಳು:
ಗೋಧಿ ಹಿಟ್ಟು
ಕಡಲೆ ಬೆಳೆ
ಬೆಲ್ಲ
ಮೆಕ್ಕೆ ಜೋಳದ ಎಲೆ
ಉಪ್ಪು (ರುಚಿಗೆ ತಕ್ಕಷ್ಟು)

ಮಾಡುವ ವಿಧಾನ:
ಮೊದಲಿಗೆ ಕಡಲೆಬೇಳೆಯನ್ನು ಚೆನ್ನಾಗಿ ತೊಳೆದು ಮೆತ್ತಗೆ ಆಗುವವರೆಗೂ ಬೇಯಿಸಿಕೊಳ್ಳಬೇಕು. ಬಳಿಕ ಅದರ ರುಚಿಗನುಸಾರವಾಗಿ ಬೆಲ್ಲವನ್ನು ಹಾಕಿಕೊಳ್ಳಬೇಕು. ನಂತರ ಇನ್ನೊಂದು ಪಾತ್ರೆಯಲ್ಲಿ ನೀರು ಕುದಿಯಲು ಇಡಬೇಕು. ಅದರ ಮೇಲೆ ಸ್ಟೀಲ್‌ ರಂಧ್ರದ ಜರಡಿಯನ್ನು ಇಟ್ಟುಕೊಂಡು ಅದಕ್ಕೆ ಮೆಕ್ಕೆಜೋಳದ ಎಲೆಯನ್ನು ಹಾಕಿಕೊಳ್ಳಬೇಕು.

ಬಳಿಕ ಕಡುಬು ಮಾಡುವ ಆಕಾರದಲ್ಲಿ ಚಪಾತಿಯನ್ನು ಮಾಡಿಕೊಂಡು ಅದಕ್ಕೆ ಹೂರಣ ತುಂಬಿಕೊಳ್ಳಬೇಕು. ಬಳಿಕ ಖರ್ಜಿಕಾಯಿ ರೀತಿಯಲ್ಲಿ ಮಾಡಿಕೊಳ್ಳಬೇಕು. ಕೊನೆಗೆ ಪಾತ್ರೆಯಲ್ಲಿಟ್ಟ ನೀರು ಕುದಿಯಲು ಆರಂಭಿಸಿದಾಗ ಮೆಕ್ಕೆಜೋಳದ ಎಲೆ ಮೇಲೆ ಮಾಡಿದ ಕಡುಬು ಹಾಕಿಕೊಂಡು ಅದರ ಮೇಲೆ ಮುಚ್ಚಳ ಮುಚ್ಚಿಕೊಳ್ಳಬೇಕು. 5 ರಿಂದ 9 ನಿಮಿಷದ ಒಳಗೆ ಕಡುಬು ತಯಾರಾಗಿರುತ್ತದೆ.

ಕಡುಬು ತುಪ್ಪಿನ ಜೊತೆ ಸವಿಯಲು ಚೆನ್ನಾಗಿರುತ್ತದೆ.

Share This Article