ಶಬರಿಮಲೆಯಲ್ಲಿ ಬೆಳಗಿದ ʻಮಕರ ಜ್ಯೋತಿʼ – ಕಣ್ತುಂಬಿಕೊಂಡ ಅಯ್ಯಪ್ಪನ ಭಕ್ತರು

1 Min Read

ತಿರುವನಂತಪುರಂ: ವರ್ಷದ ಮೊದಲ ಹಬ್ಬವಾದ ಮಕರ ಸಂಕ್ರಾಂತಿಯಂದು ಜ್ಯೋತಿ ರೂಪದಲ್ಲಿ ಭಕ್ತರಿಗೆ ಅಯ್ಯಪ್ಪನ (Ayyappa) ದರ್ಶನವಾಯಿತು. ಸಂಕ್ರಾಂತಿಯಂದು (Makarasankranthi Festival) ಕೇರಳದ ಶಬರಿಮಲೆಯಲ್ಲಿ ಉದ್ಭವಿಸುವ ಮಕರ ಜ್ಯೋತಿಯನ್ನ (ಮಕರವಿಳಕ್ಕು) (Makara Jyothi) ಲಕ್ಷಾಂತರ ಭಕ್ತರು ಕಣ್ತುಂಬಿಕೊಂಡರು.

ಹೌದು. ಐತಿಹಾಸಿಕ ಶಬರಿಮಲೆ ದೇಗುಲದಲ್ಲಿ ಮಕರಜ್ಯೋತಿ ಕಣ್ತುಂಬಿಕೊಳ್ಳಲು ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತಸಾಗರ ನೆರೆದಿತ್ತು. ಸಂಜೆ 6:43 ರಿಂದ 6:46ರ ಸುಮಾರಿಗೆ ಅಯ್ಯಪ್ಪ (Sabarimala) ದೇಗುಲದ ಎದುರಿನ ಪೊನ್ನಂಬಲಮೇಡುವಿನಲ್ಲಿ ಜ್ಯೋತಿ ದರ್ಶನವಾಯಿತು. ಈ ವೇಳೆ ಅಯ್ಯಪ್ಪನ ಭಕ್ತಿಗೀತೆ ಗುಣಗಾನ ಮಾಡುತ್ತಾ ಭಕ್ತರು ಜ್ಯೋತಿ (Makara Jyoti) ಕಣ್ತುಂಬಿಕೊಂಡರು. ಇದನ್ನೂ ಓದಿ: ವರ್ಷದ ಮೊದಲ ಹಬ್ಬ; ವಿವಿಧ ರಾಜ್ಯಗಳಲ್ಲಿ ಮಕರ ಸಂಕ್ರಾಂತಿ ಆಚರಣೆ ಹೇಗೆ?

ಶಬರಿಮಲೆ (Sabarimala) ಅಯ್ಯಪ್ಪನ ದೇಗುಲದಲ್ಲಿ ಬುಧವಾರ ಸಂಕ್ರಾಂತಿ (Makara Sankranti) ಪ್ರಯುಕ್ತ ವಿಶೇಷ ಪೂಜೆ-ಪುನಸ್ಕಾರಗಳು ಆಯೋಜನೆಗೊಂಡಿದ್ದವು. ಪಂದಳ ರಾಜಮನೆತನದಿಂದ ಆಭರಣಗಳನ್ನ ತಂದು ಆಯ್ಯಪ್ಪ ಸ್ವಾಮಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಮಹಾಮಂಗಳಾರತಿ ವೇಳೆಗೆ ಜ್ಯೋತಿರೂಪದಲ್ಲಿ ಅಯ್ಯಪ್ಪನ ದರ್ಶನವಾಯಿತು. ಇದನ್ನೂ ಓದಿ: ದೇಶದ ಜನತೆಗೆ ಮಕರ ಸಂಕ್ರಾಂತಿಯ ಶುಭಾಶಯ ತಿಳಿಸಿದ ಮೋದಿ

Share This Article