ಬೆಂಗ್ಳೂರು ಬಳಿಕ ಚೆನ್ನೈನಲ್ಲಿ ಅಗ್ನಿ ಅವಘಡ- 200ಕ್ಕೂ ಹೆಚ್ಚು ಕಾರು ಭಸ್ಮ

Public TV
1 Min Read

ಚೆನ್ನೈ: ಯಲಹಂಕ ಏರ್ ಶೋ ಪಾರ್ಕಿಂಗ್ ನಲ್ಲಿ ನಡೆದ ಅಗ್ನಿ ಅವಘಡದಲ್ಲಿ 300ಕ್ಕೂ ಹೆಚ್ಚು ಕಾರುಗಳು ಬೆಂಕಿಗೆ ಆಹುತಿಯಾದ ಬೆನ್ನಲ್ಲೇ ತಮಿಳು ನಾಡಿನ ಪೊರುರ್ ನ ಕಾರ್ ಶೆಡ್ ಬಳಿ ಇಂತಹದ್ದೇ ಅಗ್ನಿ ಅವಘಡ ನಡೆದಿದ್ದು, ಸುಮಾರು 200ಕ್ಕೂ ಹೆಚ್ಚು ಕಾರುಗಳು ಬೆಂಕಿಗೆ ಭಸ್ಮವಾಗಿದೆ.

ಸ್ಥಳದಲ್ಲಿದ್ದ ಒಣ ಹುಲ್ಲಿನಿಂದಾಗಿ ಎಲ್ಲೆಡೆ ಬೆಂಕಿ ವ್ಯಾಪಿಸಿದ್ದು, ಸುಮಾರು 32 ಎಕರೆ ಪ್ರದೇಶದಲ್ಲಿ ಬೆಂಕಿಯ ಜ್ವಾಲೆ ಹರಡಿದೆ. ಪರಿಣಾಮ ಪಾರ್ಕ್ ಮಾಡಿದ್ದ 200 ಕ್ಕೂ ಹೆಚ್ಚು ಕಾರುಗಳು ಬೆಂಕಿಗಾಹುತಿಯಾಗಿದೆ.

ಕಾರು ನಿಲ್ಲಿಸಿದ್ದ ಸ್ಥಳ ಖಾಸಗಿ ಪಾರ್ಕಿಂಗ್ ಪ್ರದೇಶವಾಗಿದ್ದು, ಘಟನೆಯ ಬಗ್ಗೆ ಹಲವು ಸಾರ್ವಜನಿಕರು ಸಾಮಾಜಿಕ ಜಾಲತಾಣದಲ್ಲಿ ಬೆಂಕಿಯ ತೀವ್ರತೆಯನ್ನು ವಿಡಿಯೋ, ಫೋಟೋ ತೆಗೆದು ಪೋಸ್ಟ್ ಮಾಡಿದ್ದಾರೆ.

ಅಗ್ನಿ ಅವಘಡದ ಮಾಹಿತಿ ಪಡೆದಿರುವ ಅಗ್ನಿ ಶಾಮಕ ದಳದ 8 ವಾಹನಗಳು ಸ್ಥಳಕ್ಕೆ ತಲುಪಿದ್ದು, ಬೆಂಕಿಯನ್ನು ಹತೋಟಿಗೆ ತರುವ ಕಾರ್ಯವನ್ನು ಮಾಡುತ್ತಿವೆ. ಬೆಂಕಿ ಕೆನ್ನಾಲಿಗೆಗೆ ಸ್ಥಳದಲ್ಲಿ ಭಾರೀ ಪ್ರಮಾಣದ ಹೊಗೆ ಕೂಡ ಕಾಣಿಸಿಕೊಂಡಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಅವಘಡಕ್ಕೆ ಕಾರಣ ಏನೆಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಮಧ್ಯಾಹ್ನ 2.10ರ ವೇಳೆಗೆ ಘಟನೆ ನಡೆದಿದ್ದಾಗಿ ವರದಿಯಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *