RJD ಅಭ್ಯರ್ಥಿ ವಿರುದ್ಧ 12,000 ಮತಗಳ ಅಂತರದಿಂದ ಜಯ – ಬಿಹಾರದ ಕಿರಿಯ ಶಾಸಕಿಯಾದ ಗಾಯಕಿ ಮೈಥಿಲಿ ಠಾಕೂರ್

Public TV
1 Min Read

ಪಾಟ್ನಾ: ಕೆಲವು ತಿಂಗಳುಗಳ ಹಿಂದೆ ಬಿಜೆಪಿಗೆ ಸೇರಿದ್ದ ಗಾಯಕಿ ಮೈಥಿಲಿ ಠಾಕೂರ್ (Maithili Thakur) ಇದೀಗ 12,000 ಮತಗಳ ಅಂತರದಿಂದ ಗೆಲುವು ಸಾಧಿಸುವ ಮೂಲಕ ರಾಜ್ಯದ ಕಿರಿಯ ಶಾಸಕಿಯಾಗಿ ಹೊರಹೊಮ್ಮಿದ್ದಾರೆ.

ಬಿಹಾರ ವಿಧಾನಸಭಾ ಚುನಾವಣೆಯಲ್ಲಿ (Bihar Election) ಎನ್‌ಡಿಎ (DNA) ಡಬಲ್ ಸೆಂಚುರಿ ಭಾರಿಸಿದೆ. ಈ ಪೈಕಿ ಬಿಹಾರದ ದರ್ಭಾಂಗನ ಅಲಿಗರ್ ಕ್ಷೇತ್ರದಿಂದ ಸ್ಪರ್ಧಿಸಿದ್ದ 25ರ ಹರೆಯದ ಮೈಥಿಲಿ ಠಾಕೂರ್, ಆರ್‌ಜೆಡಿ ಅಭ್ಯರ್ಥಿ ಬಿನೋದ್ ಮಿಶ್ರಾ (Binod Mishra) ವಿರುದ್ಧ 12,000 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ಸಿನ ‘ವೋಟ್‌ ಚೋರಿ’ ಸುಳ್ಳು ಸಂಕಥನಕ್ಕೆ ಕಪಾಳಮೋಕ್ಷ: ಹೆಚ್.ಡಿ.ಕುಮಾರಸ್ವಾಮಿ ಟಾಂಗ್‌

ಮೈಥಿಲಿ ಠಾಕೂರ್ 2000ರ ಜುಲೈ 25ರಂದು ಮಧುಬನಿಯಲ್ಲಿ ಜನಿಸಿದ್ದರು. ಬಳಿಕ ತಮ್ಮ ಕುಟುಂಬದೊಂದಿಗೆ ದೆಹಲಿ ನಜಾಫ್‌ಗಡಕ್ಕೆ ಬಂದು ನೆಲೆಸಿದ್ದರು. ಇಲ್ಲಿಗೆ ಬಂದ ಕೆಲವೇ ಸಮಯದಲ್ಲಿ ಮೈಥಿಲಿ ಅವರ ತಂದೆ ಕೆಲಸ ಕಳೆದುಕೊಂಡು, ಕುಟುಂಬವು ಆರ್ಥಿಕ ಸಮಸ್ಯೆ ಎದುರಿಸುವಂತಾಗಿತ್ತು. ಆನಂತರ ಶಾಸ್ತ್ರೀಯ ಗಾಯಕರಾಗಿದ್ದ ಅವರ ತಂದೆ ಸಂಗೀತದತ್ತ ಮುಖ ಮಾಡಿ, ಮೈಥಿಲಿ ಅವರಿಗೂ ಸಂಗೀತ ಕಲಿಸುವಲ್ಲಿ ಮಾರ್ಗದರ್ಶಕರಾದರು. ಅಲ್ಲಿಂದ ಶುರುವಾದ ಪಯಣ ತಮ್ಮ ಇಬ್ಬರು ಸಹೋದರರೊಂದಿಗೆ ಜಾನಪದ ಸಂಗೀತಕ್ಕೆ ಒತ್ತು ಕೊಟ್ಟರು.

ಸರಿಗಮಪ ಲಿಟಲ್ ಚಾಂಪ್ಸ್ ಮತ್ತು ಇಂಡಿಯನ್ ಐಡಲ್ ಜೂನಿಯರ್‌ನಂತಹ ಪ್ರಸಿದ್ಧ ರಿಯಾಲಿಟಿ ಶೋಗಳಿಗೆ ಆಡಿಷನ್ ನೀಡಿದ್ದ ಅವರು ಪ್ರಾರಂಭದಲ್ಲಿ ತಿರಸ್ಕೃತಗೊಂಡರು. ಬಳಿಕ 2017ರಲ್ಲಿ ರೈಸಿಂಗ್ ಸ್ಟಾರ್‌ನ ಮೊದಲ ರನ್ನರ್-ಅಪ್ ಆಗಿ ಹೊರಹೊಮ್ಮಿದರು. ಅಲ್ಲಿಂದ ಫೇಸ್‌ಬುಕ್ ಮತ್ತು ಯೂಟ್ಯೂಬ್‌ನಲ್ಲಿ ಸಂಚಲನ ಮೂಡಿಸಿದರು. 2021ರಲ್ಲಿ ಸಂಗೀತ ನಾಟಕ ಅಕಾಡೆಮಿಯಿಂದ ಉಸ್ತಾದ್ ಬಿಸ್ಮಿಲ್ಲಾ ಖಾನ್ ಯುವ ಪುರಸ್ಕಾರವನ್ನು ಪಡೆದುಕೊಂಡರು.ಇದನ್ನೂ ಓದಿ: 2020 ರಲ್ಲಿ 1, ಈ ಬಾರಿ 20+ ಕ್ಷೇತ್ರಗಳಲ್ಲಿ ಜಯ – ಯುವ ನಾಯಕ, ಮೋದಿಯ ಹನುಮ ಚಿರಾಗ್‌ ಕಮಾಲ್‌!

Share This Article