ರಾಹುಲ್ ಗಾಂಧಿ ನಡೆಗೆ ಸ್ಪೀಕರ್ ಸುಮಿತ್ರಾ ಮಹಾಜನ್ ಅಸಮಾಧಾನ

Public TV
1 Min Read

ನವದೆಹಲಿ: ಭಾಷಣ ಮುಗಿಯುತ್ತಿದ್ದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ರವರು ಪ್ರಧಾನಿ ನರೇಂದ್ರ ಮೋದಿ ರವರ ಆಲಂಗಿಸಿದ್ದು, ಸದನದ ಶಿಷ್ಟಾಚಾರದ ಉಲಂಘನೆ ಎಂದು ಎಂದು ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅವಿಶ್ವಾಸ ನಿರ್ಣಯ ಕುರಿತು ಎಐಸಿಸಿ ಅಧ್ಯಕ್ಷ ರಾಹುಲ್ ತಮ್ಮ ಭಾಷಣ ಮಾಡಿದ ಬಳಿಕ ಪ್ರಧಾನಿ ಮೋದಿ ಅವರನ್ನು ಆಲಂಗಿಸಿ ಕೊಂಡಿದ್ದರು. ರಾಹುಲ್ ನಡೆಯ ಬಳಿಕ ಮಾತನಾಡಿದ ಸ್ಪೀಕರ್, ನನಗೆ ನಿಮ್ಮ ನಡೆ ಇಷ್ಟವಾಗಲಿಲ್ಲ. ಸದನದಲ್ಲಿ ಇರುವುದು ಬರಿ ನರೇಂದ್ರ ಮೋದಿ ಅಲ್ಲ, ಅವರು ಭಾರತದ ಪ್ರಧಾನಿ. ಈ ಹುದ್ದೆಗೆ ತನ್ನದೇ ಆದ ಗೌರವ ಇದೆ ಎಂದರು.

ಇದೇ ವೇಳೆ ತಮಗೇ ರಾಹುಲ್‍ಗಾಂಧಿ ಮೇಲೆ ಯಾವುದೇ ದ್ವೇಷವಿಲ್ಲ ಎಂದು ಸ್ಪಷ್ಟಪಡಿಸಿದ ಸ್ಪೀಕರ್, ರಾಹುಲ್ ತಮಗೇ ಮಗನ ಹಾಗೇ. ಸದನದಲ್ಲಿರುವ ಎಲ್ಲಾ ಸದಸ್ಯರು ಸಭೆಯ ಘನತೆ ಗೌರವವನ್ನು ಕಾಪಾಡಬೇಕು ಹಾಗೂ ಶಾಂತಿಯಿಂದ ವರ್ತಿಸಬೇಕು ಸೂಚಿಸಿದರು.

ಸ್ಪೀಕರ್‍ ರವರ ಹೇಳಿಕೆ ನಂತರ ಗೃಹ ಸಚಿವ ರಾಜ್‍ನಾಥ್ ಸಿಂಗ್ ಪ್ರತಿಕ್ರಿಯೆ ನೀಡಿ, ರಾಹುಲ್ ಗಾಂಧಿಯ ಆಲಿಂಗನವನ್ನು ಚಿಪ್ಕೋ ಆಂದೋಲನ ರೀತಿಯಾಗಿತ್ತು ಎಂದು ವ್ಯಂಗ್ಯವಾಡಿದರು.

ಸದ್ಯ ರಾಹುಲ್ ನಡೆಯನ್ನು ಸಮರ್ಥಿಸಿರುವ ಕಾಂಗ್ರೆಸ್ ಹಿರಿಯ ಮುಖಂಡ, ಸಂಸದ ಶಶಿತರೂರ್, ರಾಹುಲ್ ಗಾಂಧಿರವರದ್ದು ಅದ್ಭುತವಾದ ಭಾಷಣವಾಗಿತ್ತು. ಅವರ ಭಾಷಣ ಗೇಮ್ ಚೇಂಜಿಂಗ್ ಆಗಿತ್ತು. ಸರ್ಕಾರದ ಹೇಳಿಕೆಗಳನ್ನು ಹೊರತುಪಡಿಸಿ, ಬಿಜೆಪಿ ಅಕ್ಷರಃ ಸಹ ಉಸಿರಾಡಲು ಸಾಧ್ಯವಿಲ್ಲವಾಗಿತ್ತು ಎಂದು ಶಶಿ ತರೂರ್ ಟ್ವೀಟ್ ಮಾಡಿದ್ದಾರೆ.

ಈ ರಾಹುಲ್ ರವರ ನಡೆಯನ್ನು ಟೀಕಿಸಿದ ಬಿಜೆಪಿ ಮುಖಂಡ, ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಅನಂತ್ ಕುಮಾರ್, ರಾಹುಲ್ ರವರ ನಡೆ ಚಿಕ್ಕ ಮಕ್ಕಳ (ಚೈಲ್ಡಿಶ್) ವರ್ತನೆಯಂತಿತ್ತು. ರಾಹುಲ್ ಗಾಂಧಿ ಇಷ್ಟು ದೊಡ್ಡವರಾಗಿದ್ದು, ಚಿಕ್ಕ ಮಗುವಿನ ಹಾಗೇ ವರ್ತಿಸಿದರು ಅವರಿಗೆ ತಿಳುವಳಿಕೆ ಇಲ್ಲ ಎಂಬುವುದನ್ನು ಸ್ಪಷ್ಟಪಡಿಸುತ್ತದೆ ಎಂದು ಆರೋಪಿಸಿದರು.

Share This Article
Leave a Comment

Leave a Reply

Your email address will not be published. Required fields are marked *