ಕಲ್ಲೆಸೆತಕ್ಕೆ ಸುದ್ದಿಯಾಗಿದ್ದ ಕಾಶ್ಮೀರದಲ್ಲಿ ಫಸ್ಟ್‌ ಟೈಂ ಫಾರ್ಮುಲಾ 4 ರೇಸ್‌ – ಮೋದಿ ಮೆಚ್ಚುಗೆ

Public TV
1 Min Read

ಶ್ರೀನಗರ: ಕಲ್ಲೆಸೆತಕ್ಕೆ ಸುದ್ದಿಯಾಗುತ್ತಿದ್ದ ಕಾಶ್ಮೀರ (Jammu Kashmir) ಈಗ ಬದಲಾಗುತ್ತಿದ್ದು, ಇದೇ ಮೊದಲ ಬಾರಿಗೆ ಫಾರ್ಮುಲಾ 4(Formula 4 ) ಕಾರ್‌ ರೇಸ್‌ ನಡೆದಿದೆ.

ಶ್ರೀನಗದ ವಿಶ್ವಪ್ರಸಿದ್ಧ ದಾಲ್ ಸರೋವರದ ದಡದಲ್ಲಿ (Srinagar’s Dal Lake) ಭಾನುವಾರದಂದು ಮೊದಲ ಬಾರಿಗೆ ಫಾರ್ಮುಲಾ 4 ಕಾರ್ ರೇಸಿಂಗ್ ಪ್ರದರ್ಶನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ವೃತ್ತಿಪರ ಫಾರ್ಮುಲಾ 4 ಚಾಲಕರು ಪ್ರದರ್ಶಿಸಿದ ಸಾಹಸಗಳನ್ನು ವೀಕ್ಷಿಸಿದ ಸ್ಥಳೀಯರು ರೋಮಂಚನಗೊಂಡಿದ್ದಾರೆ. ನಗರದ ದಾಲ್ ಸರೋವರದ ದಡದಲ್ಲಿರುವ ಲಲಿತ್ ಘಾಟ್‌ನಿಂದ ನೆಹರೂ ಪಾರ್ಕ್‌ವರೆಗಿನ 1.7 ಕಿಮೀ ಟ್ರ್ಯಾಕ್‌ನಲ್ಲಿ ಸ್ಲೀಕ್ ರೇಸಿಂಗ್ ಕಾರುಗಳು ಘರ್ಜಿಸಿದವು. ಇದನ್ನೂ ಓದಿ: ಚಾರ್ಮಾಡಿ ಘಾಟಿಯಲ್ಲಿ ಕೆಟ್ಟು ನಿಂತ 16 ಚಕ್ರದ ಲಾರಿ – ಕಿ.ಮೀಗಟ್ಟಲೆ ಟ್ರಾಫಿಕ್‌ ಜಾಮ್‌

ನೂರಾರು ಉತ್ಸಾಹಿ ಯುವಕರು ರಸ್ತೆಯಲ್ಲಿ ಸಾಲುಗಟ್ಟಿ ನಿಂತು ಈ ರೇಸ್‌ ವೀಕ್ಷಿಸಿದ್ದಾರೆ. ಕಾಶ್ಮೀರದಲ್ಲಿ ಪ್ರವಾಸೋದ್ಯಮವನ್ನು (Tourism) ಉತ್ತೇಜಿಸಲು ಮತ್ತು ಕ್ರೀಡೆಯನ್ನು ವೃತ್ತಿಯನ್ನಾಗಿ ಆಯ್ಕೆ ಮಾಡಿಕೊಳ್ಳಲು ಯುವಕರನ್ನು ಪ್ರೋತ್ಸಾಹಿಸಲು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಆರ್ಟಿಕಲ್‌ 370 ತೆಗೆದ ನಂತರ ನಮ್ಮ ಕಾಶ್ಮೀರ ಬದಲಾಗುತ್ತಿದೆ. ಕಾಶ್ಮೀರವನ್ನೇ ಬದಲಿಸಿದ ಪ್ರಧಾನಿ ಮೋದಿ! ಮೊಟ್ಟಮೊದಲ ಫಾರ್ಮುಲಾ 4 ಕಾರ್ ಶೋ ಇಂದು ದಾಲ್ ಲೇಕ್ ಶ್ರೀನಗರದ ದಡದಲ್ಲಿ ನಡೆಯಿತು ಎಂದು ಕಾಶ್ಮೀರದ ನೆಟ್ಟಿಗರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲೂ ಕಾಶ್ಮೀರದ ಮಂದಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನು ನೋಡಲು ತುಂಬಾ ಸಂತೋಷವಾಗಿದೆ. ಇದು ಜಮ್ಮು ಮತ್ತು ಕಾಶ್ಮೀರದ ಸೌಂದರ್ಯವನ್ನು ಮತ್ತಷ್ಟು ಪ್ರದರ್ಶಿಸಲು ಸಹಾಯ ಮಾಡುತ್ತದೆ. ಭಾರತವು ಮೋಟಾರು ಕ್ರೀಡೆಗಳು ಅಭಿವೃದ್ಧಿ ಹೊಂದಲು ಉತ್ತಮ ಅವಕಾಶಗಳನ್ನು ನೀಡುತ್ತದೆ ಎಂದು ಪ್ರಧಾನಿ ಮೋದಿ (PM Narendra Modi) ಎಕ್ಸ್‌ನಲ್ಲಿ ಸಂತೋಷ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ‘ಟಾಕ್ಸಿಕ್’ ಸಿನಿಮಾದಲ್ಲಿ ನಟಿಸೋದು ಪಕ್ಕಾ ಅಂದ್ರಾ ನಟಿ ಕರೀನಾ

 

Share This Article