ಮಹೀಂದ್ರಾ ಎಕ್ಸ್‌ಯುವಿ ಸ್ಪೋರ್ಟ್ಸ್‌ನಲ್ಲಿ ತಾಂತ್ರಿಕ ಸಮಸ್ಯೆ- ಬಗೆಹರಿಸುವ ಭರವಸೆ ನೀಡಿದ ಸಂಸ್ಥೆ

Public TV
1 Min Read

ಮುಂಬೈ: ಮಹಿಂದ್ರಾ ಎಕ್ಸ್‌ಯುವಿ ಸ್ಪೋರ್ಟ್ಸ್ (Mahindra Sports Utility Vehicle) ವಾಹನದ ವೈರಿಂಗ್ ಲೂಮ್‍ನಲ್ಲಿ ಸಂಭವನೀಯ ಸಮಸ್ಯೆ ಇರುವ ಬಗ್ಗೆ ಗಮನಕ್ಕೆ ಬಂದಿದ್ದು ಈ ಬಗ್ಗೆ ಪರಿಶೀಲಿಸುವುದಾಗಿ ಮಹಿಂದ್ರಾ ಸಂಸ್ಥೆ ಹೇಳಿಕೊಂಡಿದೆ. 2021ರ ಜೂನ್ 8 ರಿಂದ 2023ರ ಜೂನ್ 28ರ ನಡುವೆ ತಯಾರಿಸಲಾದ ಎಕ್ಸ್‌ಯುವಿ 700 ಸರಣಿಯ 108,306 ವಾಹನಗಳನ್ನು ಪರಿಶೀಲಿಸುವುದಾಗಿ ಸಂಸ್ಥೆ ಹೇಳಿದೆ.

ಸ್ಕಾರ್ಪಿಯೊ ಮತ್ತು ಥಾರ್‌ನಂತಹ ಎಸ್‍ಯುವಿಗಳು ಸಹ ಇದರಲ್ಲಿ ಸೇರಿದೆ. ಇಷ್ಟೇ ಅಲ್ಲದೇ 2023ರ ಫೆ. 16 ಮತ್ತು 2023ರ ಜೂ. 5ರ ನಡುವೆ ತಯಾರಿಸಲಾದ ಎಕ್ಸ್‍ಯುವಿ 400 ವಾಹನದ 3,560 ಯುನಿಟ್‍ಗಳ ಬ್ರೇಕ್ ಪೊಟೆನ್ಟಿಯೋಮೀಟರ್‌ಗಳನ್ನು ಪರಿಶೀಲಿಸಲಾಗುವುದು ಎಂದು ಮಹೀಂದ್ರಾ ಸಂಸ್ಥೆ ಹೇಳಿಕೊಂಡಿದೆ. ಇದನ್ನೂ ಓದಿ: UP Crime: ಸೆಕ್ಸ್‌ಗೆ ನಿರಾಕರಿಸಿದ ಲಿವ್‌ ಇನ್‌ ಗೆಳತಿ ಮೇಲೆ ಮಾರಣಾಂತಿಕ ಹಲ್ಲೆ – ಯುವಕ ಅಂದರ್‌

ಈ ಬಗ್ಗೆ ಗ್ರಾಹಕರನ್ನು ವೈಯಕ್ತಿಕವಾಗಿ ಸಂಪರ್ಕಿಸಲಾಗುತ್ತದೆ. ಅಲ್ಲದೇ ತಪಾಸಣೆ ಹಾಗೂ ನಂತರ ವಾಹನವನ್ನು ಉಚಿತವಾಗಿ ಮರಳಿಸಲಾಗುತ್ತದೆ ಎಂದು ಸಂಸ್ಥೆ ತಿಳಿಸಿದೆ.

ಮಹಿಂದ್ರಾ ಸಂಸ್ಥೆ ಭಾರತದ (India) ಅತೀ ದೊಡ್ಡ ಕಾರು (Car) ಉತ್ಪಾದಕ ಕಂಪನಿಗಳಲ್ಲಿ ಒಂದಾಗಿದ್ದು, ಎರಡನೇ ಸ್ಥಾನದಲ್ಲಿದೆ. ಇತ್ತೀಚೆಗೆ ಮಹೀಂದ್ರಾ ಭಾರತೀಯ ಸೇನೆಗಾಗಿ ನೂತನ ವಿನ್ಯಾಸದಲ್ಲಿ ಮಹೀಂದ್ರ ಆರ್ಮರ್ಡ್ ಎಂಬ ವಾಹನವನ್ನು ಸಿದ್ಧಪಡಿಸಿ ಸೇನೆಗೆ ಹಸ್ತಾಂತರಿಸಿತ್ತು. ಈ ಮೂಲಕ ಭಾರತದ ಕಾರು ಉತ್ಪಾದನಾ ಕ್ಷೇತ್ರದಲ್ಲಿ ತನ್ನದೇ ಆದ ಹೊಸ ಹೆಜ್ಜೆ ಇಟ್ಟಿತ್ತು. ಇದನ್ನೂ ಓದಿ: ಮುಂಬೈನಿಂದ ಮೆಜೆಸ್ಟಿಕ್‍ಗೆ ಆಗಮಿಸಿದ್ದ ರೈಲಿನಲ್ಲಿ ಬೆಂಕಿ – 2 ಬೋಗಿಗಳು ಸಂಪೂರ್ಣ ಭಸ್ಮ

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್