7 ತಿಂಗಳಿನಲ್ಲಿ 30 ಸಾವಿರ ಮಹೀಂದ್ರಾ ಇವಿ ಕಾರು ಮಾರಾಟ

1 Min Read

ನವದೆಹಲಿ: ಕೇವಲ ಏಳು ತಿಂಗಳಲ್ಲಿ 30,000 ಎಲೆಕ್ಟ್ರಿಕ್ ವಾಹನಗಳು (Electric Vehicles) ಮಾರಾಟ ಮಾಡಿದ್ದೇವೆ ಎಂದು ಮಹೀಂದ್ರಾ (Mahindra) ಕಂಪನಿ ಹೇಳಿದೆ.

ಕಳೆದ ವರ್ಷ XEV 9e ಮತ್ತು BE 6 (ಬ್ಯಾಟ್‌ಮ್ಯಾನ್ ಸೀಮಿತ ಆವೃತ್ತಿ) ಕಾರುಗಳನ್ನು ಬಿಡುಗಡೆ ಮಾಡಿತ್ತು. ಈ ಎರಡು ಎಲೆಕ್ಟ್ರಿಕ್‌ ಕಾರುಗಳಿಂದ ಕಂಪನಿಯ ಆದಾಯ 8,000 ಕೋಟಿ ರೂ.ಗಿಂತ ಹೆಚ್ಚಾಗಿದೆ ಎಂದು ತಿಳಿಸಿದೆ. ಇದನ್ನೂ ಓದಿ:  ಮುಂದಿನ 4-6 ತಿಂಗಳಿನಲ್ಲಿ ಪೆಟ್ರೋಲ್‌ ಕಾರು ದರದಲ್ಲಿ ಇವಿ ಸಿಗುತ್ತೆ: ಗಡ್ಕರಿ

ದೇಶದ ಇವಿ ಮಾರುಕಟ್ಟೆಯಲ್ಲಿ ವೇಗವಾಗಿ ಮಹೀಂದ್ರಾ ಬೆಳೆಯುತ್ತಿದ್ದು ಮುಂದೆ ಅಂತಾರಾಷ್ಟ್ರೀಯ ಮಾರುಕಟ್ಟೆಯನ್ನು ಕೇಂದ್ರೀಕರಿಸುವ ಗುರಿಯನ್ನು ಹಾಕಿಕೊಂಡಿದೆ.

XEV 9e ಮತ್ತು BE 6 ಮಹೀಂದ್ರಾಗೆ ಸಂಪೂರ್ಣವಾಗಿ ಹೊಸ ಗ್ರಾಹಕರನ್ನು ತಂದಿದೆ. ಹತ್ತು ಗ್ರಾಹಕರ ಪೈಕಿ ಎಂಟು ಮಂದಿ ಹಿಂದೆಂದೂ ಮಹೀಂದ್ರಾ ವಾಹನವನ್ನು ಹೊಂದಿರಲಿಲ್ಲ ಎಂದು ಕಂಪನಿ ಹೇಳಿದೆ.

ಸದ್ಯ ಭಾರತ ಇವಿ ಕಾರು ಮಾರುಕಟ್ಟೆಯಲ್ಲಿ ಟಾಟಾ ಮೋಟಾರ್ಸ್‌ ಪ್ರಾಬಲ್ಯವನ್ನು ಹೊಂದಿದೆ. 2027ರ ಒಳಗಡೆ 250 ಕೇಂದ್ರಗಳಲ್ಲಿ 180 kW ಸಾಮರ್ಥ್ಯದ ಒಟ್ಟು 1 ಸಾವಿರ ಚಾರ್ಜಿಂಗ್‌ ಕೇಂದ್ರಗಳನ್ನು ತೆರೆಯುವುದಾಗಿ ಹೇಳಿದೆ.

Share This Article