ಮುಂಬೈ: ಮದುವೆಯಾಗದೆ ಇದ್ದರೂ ಮಕ್ಕಳನ್ನು ಹೇರುವುದರಲ್ಲಿ ಯಾವುದೇ ತೊಂದರೆ ಇಲ್ಲ ಎಂದು ಬಾಲಿವುಡ್ ನಟಿ ಮಾಹಿ ಗಿಲ್ ಹೇಳಿದ್ದಾರೆ.
ಇತ್ತೀಚೆಗೆ ಮಾಹಿ ಗಿಲ್ ಸಂದರ್ಶನದಲ್ಲಿ ಭಾಗವಹಿಸಿದ್ದರು. ಈ ವೇಳೆ ಅವರು, “ನಾನು ಹಲವು ದಿನಗಳಿಂದ ಲಿವಿನ್ ರಿಲೇಶನ್ಶಿಪ್ನಲ್ಲಿ ಇದ್ದೇನೆ. ಅಲ್ಲದೆ ನನಗೆ ಈಗ ಮಗಳು ಕೂಡ ಇದ್ದಾಳೆ. ಅಗಸ್ಟ್ ತಿಂಗಳು ಬಂದರೆ ಆಕೆಗೆ ಮೂರು ವರ್ಷ ಆಗುತ್ತದೆ” ಎಂದು ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮೊದಲ ಬಾರಿಗೆ ರಿವೀಲ್ ಮಾಡಿದ್ದಾರೆ.
ಮಗಳಿಗೆ ತಾಯಿ ಆಗಿರುವ ವಿಷಯದ ಬಗ್ಗೆ ನನಗೆ ಹೆಮ್ಮೆ ಇದೆ. ಹೌದು. ನಾನು ಇನ್ನೂ ಮದುವೆ ಮಾಡಿಕೊಂಡಿಲ್ಲ. ಮದುವೆ ಮಾಡಿಕೊಳ್ಳಬೇಕು ಎನಿಸಿದಾಗ ನಾನು ಮದುವೆ ಮಾಡಿಕೊಳ್ಳುತ್ತೇನೆ. ಮದುವೆ ಎನ್ನುವುದು ಅದು ನನ್ನ ವೈಯಕ್ತಿಕ ನಿರ್ಧಾರ ಎಂದು ಹೇಳಿದ್ದಾರೆ.
ಮದುವೆಯಾಗಿ ಏನೂ ಮಾಡಬೇಕು? ಮದುವೆಯಾಗುವ ಅವಶ್ಯಕತೆ ಆದರೂ ಏನು? ಇದು ಅವರ ಸ್ವಂತ ಅಲೋಚನೆ ಹಾಗೂ ಸಮಯದ ಮೇಲೆ ಅವಲಂಬಿಸಿರುತ್ತದೆ. ಮದುವೆ ಇಲ್ಲದೆ ಮಕ್ಕಳು ಹಾಗೂ ಕುಟುಂಬವನ್ನು ಮಾಡಬಹುದು. ಮದುವೆ ಇಲ್ಲದೆ ಮಕ್ಕಳು ಹೇರುವುದರಲ್ಲಿ ಯಾವುದೇ ತೊಂದರೆ ಇಲ್ಲ. ಇದರಲ್ಲಿ ಸಮಸ್ಯೆಯಿದೆ ಎಂದು ನನಗೆ ಅನಿಸುತ್ತಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.
ಅಲ್ಲದೆ ನಾನು ಅವಿವಾಹಿತ ಎಲ್ಲ ಮಕ್ಕಳ ತಾಯಿ ಆಗಲು ರೆಡಿಯಾಗಿದ್ದೇನೆ. ಪ್ರತಿಯೊಬ್ಬರಿಗೂ ತಮ್ಮದೇ ಆದ ವೈಯಕ್ತಿಕ ಜೀವನ ಇರುತ್ತದೆ. ಜೀವನವನ್ನು ನಡೆಸುವುದಕ್ಕೆ ಎಲ್ಲರಿಗೂ ತಮ್ಮದೇ ಆದ ತತ್ವ ಇರುತ್ತದೆ. ಪ್ರತಿಯೊಬ್ಬ ಅಲೋಚನೆಗೆ ನಾವು ಧೈರ್ಯ ತುಂಬಬೇಕು ಎಂದು ನಾನು ಭಾವಿಸುತ್ತೇನೆ. ಮದುವೆ ಎನ್ನುವುದು ಒಂದು ಸುಂದರ ವಿಷಯ. ಆದರೆ ಮದುವೆ ಮಾಡಿಕೊಳ್ಳುವುದು ಅಥವಾ ಮಾಡದೇ ಇರುವುದು ಅದು ಅವರ ವೈಯಕ್ತಿಕ ಆಯ್ಕೆ ಎಂದು ಮಾಹಿ ಸಂದರ್ಶನದಲ್ಲಿ ಹೇಳಿದ್ದಾರೆ.
ಯಾಕೆ ಈ ವಿಚಾರವನ್ನು ಬಹಿರಂಗ ಪಡಿಸಿಲ್ಲ ಎಂದು ಕೇಳಿದ್ದಕ್ಕೆ, ಇದೂವರೆಗೆ ಯಾರು ನನ್ನ ಬಳಿ ಈ ಪ್ರಶ್ನೆ ಕೇಳಿಲ್ಲ ಎಂದು ಉತ್ತರಿಸಿದ್ದಾರೆ.
1975 ಡಿಸೆಂಬರ್ 25 ರಂದು ಜನಿಸಿದ ಮಾಹಿಗಿಲ್ ಅವರ ನಿಜವಾದ ಹೆಸರು ರಿಂಪಿ ಕೌರ್ ಗಿಲ್. ಹಿಂದಿ ಹಾಗೂ ಪಂಜಾಬಿ ಸಿನಿಮಾದಲ್ಲಿ ನಟಿಸಿರುವ ಇವರು ಡೆವ್ ಡಿ ಚಿತ್ರದ ನಟನೆಗೆ ಫಿಲ್ಮ್ ಫೇರ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.