ಬಿಟ್‍ಕಾಯಿನ್ ಬಗ್ಗೆ ಸುಳ್ಳಿನ ಪ್ರಚಾರ, ಬೇಜವಾಬ್ದಾರಿ ಹೇಳಿಕೆ ನೀಡಿದ್ರೆ ದೂರು: ಟೆಂಗಿನಕಾಯಿ ಮಹೇಶ್

Public TV
1 Min Read

ಹುಬ್ಬಳ್ಳಿ: ಬಿಟ್‍ಕಾಯಿನ್ ಬಗ್ಗೆ ಕಾಂಗ್ರೆಸ್ ಪಕ್ಷವು ಬಹಳ ದೊಡ್ಡ ಮಟ್ಟದಲ್ಲಿ ಪ್ರಚಾರ ಮಾಡುವ ಮೂಲಕ ಸುಳ್ಳಿನ ಪ್ರಚಾರ ಮಾಡುತ್ತಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಟೆಂಗಿನಕಾಯಿ ಮಹೇಶ್ ಕಿಡಿಕಾರಿದ್ದಾರೆ.

ಹುಬ್ಬಳ್ಳಿಯಲ್ಲಿಂದು ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಆಧಾರ ರಹಿತ ಹೇಳಿಕೆ ನೀಡುತ್ತಿದ್ದಾರೆ. ಹ್ಯಾರಿಸ್ ಪುತ್ರ, ಮಾಜಿ ಶಾಸಕ ರುದ್ರಪ್ಪ ಲಮಾಣಿ ಪುತ್ರನ ಹೆಸರು ಹೇಳಿದ್ದಾರೆ. ಕಾಂಗ್ರೆಸ್‍ನವರು ಕುಂಬಳಕಾಯಿ ಕಳ್ಳ ಅಂದರೆ ಹೆಗಲು ಮುಟ್ಟಿಕೊಳ್ಳುತ್ತಿದ್ದಾರೆ. ಬಿಟ್‍ಕಾಯಿನ್ ದಂಧೆ ಬಗ್ಗೆ ಸರ್ಕಾರ ಸಮಗ್ರ ತನಿಖೆ ನಡೆಸಲಾಗುತ್ತಿದೆ. ಇದೇ ರೀತಿ ಬೇಜವಾಬ್ದಾರಿ ಹೇಳಿಕೆಗಳನ್ನು ಕಾಂಗ್ರೆಸ್‍ನವರು ನೀಡಿದರೆ, ಮುಂದಿನ ದಿನಗಳಲ್ಲಿ ಪೊಲೀಸ್‍ರಲ್ಲಿ ದೂರು ನೀಡಬೇಕಾಗುತ್ತಿದೆ ಎಂದು ಕಾಂಗ್ರೆಸ್ ಪಕ್ಷದ ಕುರಿತಾಗಿ ಕಿಡಿಕಾರಿದ್ದಾರೆ. ಇದನ್ನೂ ಓದಿ:  ಪತ್ನಿಗಾಗಿ ಅಪ್ಪು ಹೇಳುತ್ತಿದ್ದ ಹಾಡು ಯಾವುದು ಗೊತ್ತಾ?

ಕಾಂಗ್ರೆಸ್ ದಲಿತರನ್ನು ಯಾವ ರೀತಿ ನಡೆಸಿಕೊಂಡಿದೆ ಎನ್ನುವುದು ಗೊತ್ತಿದೆ. ನಿಮ್ಮದೇ ದಲಿತ ಶಾಸಕನ ಮನೆಗೆ ಬೆಂಕಿ ಹಚ್ಚಿದಾಗ ಸಿದ್ದರಾಮಯ್ಯ ಏನ್ ಮಾಡಿದರು? ಅಂಬೇಡ್ಕರ್‍ರನ್ನು ಸೋಲಿಸಿದ್ದು ಇದೇ ಕಾಂಗ್ರೆಸ್ ಹಗರಣಗಳ ಪಕ್ಷವಾಗಿದೆ. ಹಾನಗಲ್ ಉಪಚುನಾವಣೆಯಲ್ಲಿ ಕಂಡ ಸೋಲು ಯಾರೋಬ್ಬರ ಸೋಲು ಅಲ್ಲ. ಸೋಲಿನ ಬಗ್ಗೆ ಅವಲೋಕನ ನಡೆದಿದೆ ಎಂದರು. ಇದನ್ನೂ ಓದಿ: ಡೆಸರ್ಟ್ ಸಫಾರಿ ಬಳಿಕ ಬಿಕಿನಿಯಲ್ಲಿ ಜಾನ್ವಿ, ಖುಷಿ ಕಪೂರ್ ಮೋಜು, ಮಸ್ತಿ

ಜನ ಸ್ವರಾಜ್ಯ ಯಾತ್ರೆ: ನವೆಂಬರ್ 18 ರಿಂದ 20ರವರೆಗೆ ರಾಜ್ಯದಲ್ಲಿ 4 ತಂಡಗಳಲ್ಲಿ ನಡೆಯುವ ಜನಸ್ವರಾಜ್ಯ ಯಾತ್ರೆಯಲ್ಲಿ ಮಾಜಿ ಮುಖ್ಯಮಂತ್ರಿಗಳು, ಸಚಿವರು, ಶಾಸಕರು, ಸೇರಿದಂತೆ ಪಕ್ಷದ ಮುಖಂಡರು, ಪದಾಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಲಿಂಗರಾಜ್ ಪಾಟೀಲ್ , ದತ್ತಮೂರ್ತಿ ಕುಲಕರ್ಣಿ. ರವಿ ನಾಯಕ್ ಉಪಸ್ಥಿತರಿದ್ದರು. ಇದನ್ನೂ ಓದಿ:  ಚೀನಾ ಕುರಿತು ಸರ್ಕಾರ ಯಾವುದೇ ಕಾರ್ಯತಂತ್ರ ಹೊಂದಿಲ್ಲ: ರಾಹುಲ್ ಗಾಂಧಿ

Share This Article
Leave a Comment

Leave a Reply

Your email address will not be published. Required fields are marked *