ಹಾಲಿನ ದರ ಏರಿಕೆ ಸರ್ಕಾರದ ಆರನೇ ಭಾಗ್ಯ: ಮಹೇಶ್ ಟೆಂಗಿನಕಾಯಿ

Public TV
1 Min Read

ಹುಬ್ಬಳ್ಳಿ: ಸರ್ಕಾರ ಬಂದಾಗ 5 ಗ್ಯಾರಂಟಿಗಳನ್ನು ಕೊಟ್ಟಿತ್ತು. ನಂತರ ದರ ಏರಿಕೆಯ ಐದು ಬರೆ ಗ್ಯಾರಂಟಿ ಕೊಡುತ್ತಿದೆ. ಇದೀಗ ಹಾಲಿನ ದರ ಏರಿಕೆಯ ಮೂಲಕ ಸರ್ಕಾರ ಆರನೇ ಭಾಗ್ಯ ಎಂದು ಬಿಜೆಪಿ ಶಾಸಕ ಮಹೇಶ್ ಟೆಂಗಿನಕಾಯಿ (Mahesh Tenginakai) ವ್ಯಂಗ್ಯವಾಡಿದರು.

ಹುಬ್ಬಳ್ಳಿಯಲ್ಲಿ (Hubballi) ಹಾಲಿನ ದರ ಏರಿಕೆ ಬಗ್ಗೆ ಮಾತನಾಡಿದ ಅವರು, ಸರ್ಕಾರ ಒಂದು ಕಡೆ ಹಾಲಿನ ದರ ಪ್ರತಿ ಲೀಟರ್‌ಗೆ 4 ರೂ. ಏರಿಸಲು ನಿರ್ಧರಿಸಿದೆ. ಮತ್ತೊಂದು ಕಡೆ ವಿದ್ಯುತ್ ದರ ಏರಿಕೆಗೂ ಮುಂದಾಗಿದೆ. ಇದರ ನಡುವೆ ನೋಂದಣಿ ಸೇರಿ ಹಲವಾರು ಶುಲ್ಕಗಳ ಏರಿಕೆ ಮಾಡಿದೆ ಎಂದು ಆಕ್ರೋಶ ಹೊರಹಾಕಿದರು. ಇದನ್ನೂ ಓದಿ: Milk Price Hike | ಗ್ಯಾರಂಟಿ ಸರ್ಕಾರದ ಬಂದ ಮೇಲೆ ಯಾವುದು ಎಷ್ಟು ಏರಿಕೆ? ಮುಂದೆ ಏನೇನು ಶಾಕ್ ಸಿಗುತ್ತೆ?

ಕಾಂಗ್ರೆಸ್ (Congress) ಸರ್ಕಾರ ದರ ಏರಿಕೆಯ ಗ್ಯಾರಂಟಿಗಳನ್ನು ಕೊಡುತ್ತಲೇ ಸಾಗಿದೆ. ಕೂಡಲೇ ಹಾಲಿನ ದರ ಏರಿಕೆ ವಾಪಸ್ ಪಡೆಯಬೇಕು. ಇಲ್ಲದಿದ್ದಲ್ಲಿ ರಾಜ್ಯದಾದ್ಯಂತ ಹೋರಾಟ ಮಾಡುವ ಎಚ್ಚರಿಕೆ ನೀಡಿದರು. ಇದನ್ನೂ ಓದಿ: ನಂದಿನಿ ಹಾಲಿನ ದರ 4 ರೂ. ಹೆಚ್ಚಳ – ರೈತರಿಗೆ ಪೂರ್ಣ ಹಣ ವರ್ಗಾವಣೆಗೆ ಕ್ಯಾಬಿನೆಟ್ ತೀರ್ಮಾನ

Share This Article