ಉಡುಪಿ: ಮಹೇಶ್ ತಿಮರೋಡಿಗೆ (Mahesh Shetty Thimarody) ಉಡುಪಿಯ ಜಿಎಂಎಫ್‌ಸಿ ಕೋರ್ಟ್ ಜಾಮೀನು ಮಂಜೂರು ಮಾಡಿದೆ.
ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ಅವರಿಗೆ (BL Santosh) ಅವಹೇಳನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ರಹ್ಮಾವರ ಪೊಲೀಸರು ಮಹೇಶ್ ಶೆಟ್ಟಿ ತಿಮರೋಡಿಯನ್ನು ಬಂಧಿಸಿದ್ದರು. ಇದನ್ನೂ ಓದಿ: ಉಜಿರೆಯಲ್ಲಿ ಇದ್ದಿದ್ದಕ್ಕೆ ಬಚಾವಾದೆ, ಉಡುಪಿಯಲ್ಲಿ ಇದ್ದಿದ್ರೆ ಮಲ್ಪೆ ಬೀಚಲ್ಲಿ ಫುಟ್ಬಾಲ್ ಆಡಿಸ್ತಿದ್ದೆ – ಸಮೀರ್‌ಗೆ ಯಶ್‌ಪಾಲ್ ಸುವರ್ಣ ಎಚ್ಚರಿಕೆ
ಬಿ.ಎಲ್ ಸಂತೋಷ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ತೇಜೋವಧೆ ಮಾಡೋ ಮೂಲಕ ಹಿಂದೂ ಧರ್ಮದ ನಾಯಕನ ನಿಂದನೆ ಮಾಡಿ ಧರ್ಮ, ಸಮುದಾಯಗಳ ನಡುವೆ ವೈಮನಸ್ಸು ಉಂಟುಮಾಡಿದ್ದಾರೆ ಎಂದು ಬಹ್ಮಾವರ ಗ್ರಾಮಾಂತರ ಬಿಜೆಪಿ ಮಂಡಲ ಅಧ್ಯಕ್ಷ ರಾಜೀವ್ ಕುಲಾಲ್ ದೂರು ದಾಖಲಿಸಿದ್ದರು. ಸುಳ್ಳು ನಿಂದನೆ, ಸಾರ್ವಜನಿಕವಾಗಿ ಶಾಂತಿ ಕದಡುವ ಸೆಕ್ಷನ್‌ನಲ್ಲಿ ಕೇಸ್ ದಾಖಲಾಗಿತ್ತು.
ಆ.21 ರಂದು ಉಜಿರೆ ಬಳಿಯ ತಿಮರೋಡಿಯ ನಿವಾಸಕ್ಕೆ 8 ವಾಹನಗಳಲ್ಲಿ ಬ್ರಹ್ಮಾವರ ಪೊಲೀಸರು ಹೋಗಿದ್ದರು. ಈ ವೇಳೆ, ಕೋಣೆಯಲ್ಲಿ ಲಾಕ್ ಮಾಡಿಕೊಂಡು ತಿಮರೋಡಿ ಕೂತಿದ್ದರು. ಪೊಲೀಸರ ಜೊತೆ ಗಿರೀಶ್ ಮಟ್ಟಣ್ಣನವರ್ ಹಾಗೂ ತಿಮರೋಡಿ ಬೆಂಬಲಿಗರು ವಾಗ್ವಾದ ನಡೆಸಿದದ್ದರು. ಭಾರೀ ಹೈಡ್ರಾಮಾದ ನಡುವೆ ತಿಮರೋಡಿಯನ್ನು ಪೊಲೀಸರು ಬಂಧಿಸಿದ್ದರು.