ಉಡುಪಿ: ಬಿ.ಎಲ್ ಸಂತೋಷ್ (BL Santosh) ವಿರುದ್ಧ ಅವಹೇಳನಕಾರಿ ಮಾತುಗಳನ್ನಾಡಿ ಜೈಲು ಸೇರಿರುವ ಮಹೇಶ್ ಶೆಟ್ಟಿ ತಿಮರೋಡಿಗೆ (Mahesh Shetty Thimarody) ಇಂದು ಮಹತ್ವದ ದಿನವಾಗಿದೆ. ಗುರುವಾರ ಬ್ರಹ್ಮಾವರ ಪೊಲೀಸರು ತಿಮರೋಡಿಯನ್ನ ವಶಕ್ಕೆ ಪಡೆದು ಬಳಿಕ ಅರೆಸ್ಟ್ ಮಾಡಿದ್ದರು. ನಂತರ ಕೋರ್ಟ್ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿತ್ತು. ಹಿರಿಯಡ್ಕ ಸಬ್ ಜೈಲಿನಲ್ಲಿರುವ ತಿಮರೋಡಿಯ ಜಾಮೀನು ಅರ್ಜಿ ವಿಚಾರಣೆ ಇಂದು ನಡೆಯಲಿದೆ.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ವಿರುದ್ಧ ಮಾತನಾಡಿದ್ದಕ್ಕೆ ಬ್ರಹ್ಮಾವರ ಪೊಲೀಸರು ಮಹೇಶ್ ತಿಮರೋಡಿಯನ್ನು ಬಂಧಿಸಿ ಆನಂತರ ಹೈಡ್ರಾಮಾ ನಡೆದು ಕೋರ್ಟ್‌ಗೆ ಹಾಜರು ಪಡಿಸಿದರು. ವಿಚಾರಣೆ ನಡೆಸಿದ ನ್ಯಾಯಾಲಯ 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ನೀಡಿತ್ತು. ಹಿರಿಯಡ್ಕ ಸಬ್ ಜೈಲಿನಲ್ಲಿರುವ ಮಹೇಶ್ ತಿಮರೋಡಿ ಪ್ರತ್ಯೇಕ ಸೆಲ್‌ನಲ್ಲಿ ಚಡಪಡಿಸುತ್ತಾ ಎರಡು ದಿನ ಕಳೆದಿದ್ದಾರೆ. ತಿಮರೋಡಿ ಭೇಟಿಗೆ ಬಂದ ಬೆಂಬಲಿಗರಿಗೆ ಅವಕಾಶವೂ ಸಿಕ್ಕಿಲ್ಲ. ಬಿಪಿ ಏರುಪೇರು ಆದ ಕಾರಣ ವೈದ್ಯರನ್ನು ಕರೆಸಿ ತಪಾಸಣೆ ಮಾಡಿಸಲಾಗಿದೆ. ಇದನ್ನೂ ಓದಿ: ಭೀಮಾ ನದಿಗೆ 2.10 ಲಕ್ಷ ಕ್ಯೂಸೆಕ್ ನೀರು ರಿಲೀಸ್ – ಯಲ್ಲಮ್ಮ ದೇವಿ ದೇವಸ್ಥಾನ ಜಲಾವೃತ
ಗುರುವಾರ ಬ್ರಹ್ಮಾವರ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿತ್ತು. ಸಂಚಾರಿ ಪೀಠವಾದ ಕಾರಣ ಇಂದು ಉಡುಪಿ ಜಿಲ್ಲಾ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಲಿದೆ. ತಿಮರೋಡಿ ಬೇಲ್ ಸಂಬಂಧ ಕೋರ್ಟ್‌ನಲ್ಲಿ ಯಾವೆಲ್ಲಾ ಅಂಶಗಳ ಮೇಲೆ ವಾದ-ಪ್ರತಿವಾದ ನಡೆಯಲಿದೆ? ನ್ಯಾಯಾಲಯದ ಮುಂದೆ ಇರುವ ಆಯ್ಕೆಗಳೇನು ಎಂಬುದನ್ನು ಈ ಕೆಳಗೆ ನೀಡಲಾಗಿದೆ. ಇದನ್ನೂ ಓದಿ: Nelamangala | 16 ವರ್ಷದ ಬಾಲಕಿ ನೇಣಿಗೆ ಶರಣು
ನ್ಯಾಯಾಲಯದ ಮುಂದೆ ಹಲವು ಆಯ್ಕೆಗಳು:
-ಪಬ್ಲಿಕ್ ಪ್ರಾಸಿಕ್ಯೂಟರ್ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ಕೇಳಬಹುದು.
-ಪಬ್ಲಿಕ್ ಪ್ರಾಸಿಕ್ಯೂಟರ್ ಆಕ್ಷೇಪಣೆ ಸಲ್ಲಿಸಿ ವಾದ-ಪ್ರತಿವಾದ.
-ವಾದ-ಪ್ರತಿವಾದ ನಡೆದು ತೀರ್ಪನ್ನು ಕಾಯ್ದಿರಿಸುವ ಅವಕಾಶ.
-ಮಹೇಶ್ ಶೆಟ್ಟಿ ತಿಮರೋಡಿಗೆ ಬೇಲ್ ಸಿಗಬಹುದು.
-ಬೇಲ್ ಸಿಕ್ಕ ನಂತರವೂ ಬಾಡಿ ವಾರೆಂಟ್ ಪಡೆದು ಮತ್ತೆ ಅರೆಸ್ಟ್ ಸಾಧ್ಯತೆ.
-ಬೆಳ್ತಂಗಡಿ ಕೇಸ್‌ನ ಆಧಾರದಲ್ಲಿ ಬಾಡಿ ವಾರೆಂಟ್ ಮೇಲೆ ಮತ್ತೆ ಬಂಧಿಸಬಹುದು.
-ಈ ಮಧ್ಯೆ ಆರೋಪಿ ಹೈಕೋರ್ಟ್ನಿಂದ ಸ್ಟೇ ತರಲು ಅವಕಾಶ ಇದೆ.
-ಬಿ.ಎಲ್ ಸಂತೋಷ್ ವಿರುದ್ಧ ಮಾತನಾಡಿದ ಕೇಸ್‌ಗೆ ಸ್ಟೇ ಪಡೆಯಬಹುದು.
-ತಡೆಯಾಜ್ಞೆ ಸಿಕ್ಕರೆ ಆರೋಪಿ ತಿಮರೋಡಿ ಬಿಡುಗಡೆಯೂ ಆಗಬಹುದು.
ಒಟ್ಟಾರೆ ಬಿ.ಎಲ್ ಸಂತೋಷ್ ವಿರುದ್ಧ ಮಾತನಾಡಿ ಜೈಲು ಸೇರಿರುವ ತಿಮರೋಡಿಗೆ ಇಂದು ಕೋರ್ಟ್‌ನಲ್ಲಿ ಬೇಲ್ ಸಿಗುತ್ತಾ? ಇಲ್ವಾ ಅನ್ನೋದು ಸದ್ಯದ ಕುತೂಹಲದ ಸಂಗತಿಯಾಗಿದೆ. ಇದನ್ನೂ ಓದಿ: ರಷ್ಯಾ ತೈಲ ಖರೀದಿಸಲು ಸಾಧ್ಯವಾಗದಿದ್ರೆ ಭಾರತಕ್ಕಿರೋ ಆಯ್ಕೆಗಳೇನು? – ಅಮೆರಿಕಗೆ ಭಾರತವೇ ಯಾಕೆ ಟಾರ್ಗೆಟ್?