1 ರನ್ ಹೊಡೆದ್ರೆ ವಿಶೇಷ ಕ್ಲಬ್‍ಗೆ ಸೇರ್ಪಡೆಯಾಗಲಿದ್ದಾರೆ ಧೋನಿ!

Public TV
1 Min Read

ಮುಂಬೈ: ಏಕದಿನ ಕ್ರಿಕೆಟ್ ನಲ್ಲಿ  10 ಸಾವಿರ ರನ್ ಹೊಡೆದ ಆಟಗಾರರ ಕ್ಲಬ್ ಸೇರಲು ಟೀಂ ಇಂಡಿಯಾದ ಮಾಜಿ ನಾಯಕ, ವಿಕೆಟ್ ಕೀಪರ್ ಎಂಎಸ್ ಧೋನಿ ಗೆ 1 ರನ್ ಗಳ ಅವಶ್ಯಕತೆಯಿದೆ.

ವಿಂಡೀಸ್ ವಿರುದ್ಧ ಮುಂಬೈನಲ್ಲಿ ನಡೆದ 4ನೇ ಪಂದ್ಯದಲ್ಲಿ ಧೋನಿ 24 ರನ್ ಗಳಿಸಿದ್ದರೆ ಈ ಸಾಧನೆ ನಿರ್ಮಾಣವಾಗುತಿತ್ತು. ಆದರೆ 15 ಎಸೆತಗಳನ್ನು ಎದುರಿಸಿದ ಧೋನಿ 2 ಬೌಂಡರಿ ಸಿಡಿಸಿ 23 ರನ್ ಹೊಡೆದು ಕ್ಯಾಚ್ ನೀಡಿ ಔಟಾದರು.

ಅಂತಾರಾಷ್ಟ್ರೀಯ ಕ್ರಿಕೆಟ್‍ನಲ್ಲಿ ಧೋನಿ ಒಟ್ಟು 10,173 ರನ್ ಗಳಿಸಿದ್ದಾರೆ. ಹೀಗಾಗಿ ಈಗಾಗಲೇ 10 ಸಾವಿರ ರನ್ ಗಳ ಗಡಿ ದಾಟಿದ್ದಾರೆ ಅಲ್ಲವೇ ಎನ್ನುವ ಪ್ರಶ್ನೆ ಮೂಡುವುದು ಸಹಜ. ಆದರೆ ಈ ಪೈಕಿ 174 ರನ್‍ಗಳು ಏಷ್ಯಾ ತಂಡವನ್ನು ಪ್ರತಿನಿಧಿಸಿ ಗಳಿಸಿದ್ದಾರೆ. 2007 ರಲ್ಲಿ ಆಫ್ರಿಕಾ ಇಲೆವನ್  ಮತ್ತು  ಎಷ್ಯಾ ಇಲೆವನ್ ನಡುವೆ ನಡೆದ 3 ಪಂದ್ಯಗಳ ಸರಣಿಯಲ್ಲಿ ಧೋನಿ ಒಟ್ಟು 174 ರನ್ ಗಳಿಸಿದ್ದರು. ಹೀಗಾಗಿ ಈ ರನ್ ಟೀಂ ಇಂಡಿಯಾ ಪರ ಸೇರದ ಕಾರಣ ಈಗ 9,999 ರನ್ ಗಳ ಹೊಸ್ತಿಲಿನಲ್ಲಿ ಧೋನಿ ಇದ್ದಾರೆ.

ಭಾರತದ ಪರ ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ, ರಾಹುಲ್ ದ್ರಾವಿಡ್, ವಿರಾಟ್ ಕೊಹ್ಲಿ 10 ಸಾವಿರ ರನ್‍ಗಳ ಗಡಿ ದಾಟಿದ್ದಾರೆ. ಧೋನಿ 10 ಸಾವಿರ ರನ್ ಗಳಿಸಿದರೆ ವಿಶ್ವ ಕ್ರಿಕೆಟ್ ನಲ್ಲಿ ಈ ಸಾಧನೆ ಮಾಡಿದ 13ನೇ ಆಟಗಾರ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಲಿದ್ದಾರೆ.

ವಿಶ್ವ ಕ್ರಿಕೆಟ್ ನಲ್ಲಿ ಶ್ರೀಲಂಕಾದ ಕುಮಾರ ಸಂಗಕ್ಕಾರ, ಸನತ್ ಜಯಸೂರ್ಯ, ಮಹೇಲ ಜಯವರ್ಧನೆ, ತಿಲಕರತ್ನೆ ದಿಲ್ಶಾನ್, ಆಸ್ಟ್ರೇಲಿಯಾದ ರಿಕ್ಕಿ ಪಾಟಿಂಗ್, ಪಾಕಿಸ್ತಾನದ ಇಂಜಮಾಮ್ ಉಲ್ ಹಕ್, ದಕ್ಷಿಣ ಆಫ್ರಿಕಾದ ಜ್ಯಾಕ್ ಕಾಲಿಸ್, ವೆಸ್ಟ್ ಇಂಡೀಸಿನ ಬ್ರಿಯಾನ್ ಲಾರಾ 10 ಸಾವಿರ ರನ್ ಗಳನ್ನು ಹೊಡೆದಿದ್ದಾರೆ.  ಇದನ್ನೂ ಓದಿ: ಧೋನಿಯ ಶರವೇಗದ ಸ್ಟಂಪಿಂಗ್ – ವೈರಲ್ ಆಗಿದೆ ವಿಡಿಯೋ

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *