ಮಹಾವೀರ ಜಯಂತಿ ಮೆರವಣಿಗೆ – ಗಮನ ಸೆಳೆದ ಬುರುಡೆ ಕೇಸ್‌ ಟ್ಯಾಬ್ಲೋ

1 Min Read

ಬೆಳಗಾವಿ: ಮಹಾವೀರ ಜಯಂತಿಯ(Mahavir Jayanti) ಮೆರವಣಿಗೆಯಲ್ಲಿ ಧರ್ಮಸ್ಥಳದ ಬುರುಡೆ ಪ್ರಕರಣದ ಗ್ಯಾಂಗ್ (Dharmasthala Burude Gang) ಟ್ಯಾಬ್ಲೋ ಎಲ್ಲರ ಗಮನ ಸೆಳೆದಿದೆ.

ಸತ್ಯಕ್ಕೆ ಜಯ ಸುಳ್ಳಿಗೆ ಸೋಲು ಎನ್ನುವ ನ್ಯಾಯ ತಕ್ಕಡಿಯನ್ನು ಟ್ಯಾಬ್ಲೋ ಪ್ರದರ್ಶನ ಮಾಡಲಾಗಿದೆ. ತಕ್ಕಡಿಯಲ್ಲಿ ಒಂದು ಕಡೆ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಭಾವಚಿತ್ರವನ್ನು ಹಾಕಲಾಗಿದ್ದು, ಇನ್ನೊಂದು ಕಡೆ ಧರ್ಮಸ್ಥಳ ವಿರುದ್ಧ ಬುರುಡೆ ಕಥೆ ಕಟ್ಟಿದ್ದ ಆರೋಪಿ ಮುಸುಕುಧಾರಿ ಸೇರಿ ಮೂವರ ಭಾವಚಿತ್ರವನ್ನು ಪ್ರದರ್ಶಿಸಲಾಗಿತ್ತು. ಇದನ್ನೂ ಓದಿ:  ಕಳ್ಳೆತ್ತುಗೆ ವೋಟು ಹಾಕಬೇಡಿ, ಉಳುವ ಎತ್ತಿಗೆ ಮತ ಹಾಕಿ: ಬಾಗಲಕೋಟೆಯಲ್ಲಿ ಸಿದ್ದು ಅಬ್ಬರ

ಬೆಳಗಾವಿ ನಗರದ ಜೈನ ಸಮುದಾಯದಿಂದ ಆಯೋಜಿಸಿದ್ದ ಮಹಾವೀರ ಜಯಂತಿಯಲ್ಲಿ ಬಿಜೆಪಿ ಶಾಸಕ ಅಭಯ ಪಾಟೀಲ್, ಮಾಜಿ ಶಾಸಕ ಸಂಜಯ ಪಾಟೀಲ್, ಮೇಯರ್, ಉಪ ಮೇಯರ್ ಭಾಗಿಯಾಗಿದ್ದರು. ಮಂಜುನಾಥ ಆಶೀರ್ವಾದದಿಂದ ಧರ್ಮಸ್ಥಳಕ್ಕೆ ಅಂಟಿದ್ದ ಕಳಂಕ ನಿವಾರಣೆಯಾಗಿದೆ ಎಂಬ ಸಂದೇಶವನ್ನು ಸಾರಲಾಯಿತು.

Share This Article