ಯುದ್ಧಪೀಡಿತ ಉಕ್ರೇನ್‍ನಲ್ಲಿ ಸಿಲುಕಿದ್ದವರನ್ನು ರಕ್ಷಿಸಿದ 24ರ ಭಾರತೀಯ ಪೈಲಟ್

Public TV
2 Min Read

ಕೋಲ್ಕತ್ತಾ: ರಷ್ಯಾ-ಉಕ್ರೇನ್ ಯುದ್ಧದ ಮಧ್ಯೆ, ಉಕ್ರೇನ್‍ನ ಪೋಲಿಷ್ ಮತ್ತು ಹಂಗೇರಿಯ ಗಡಿಯಲ್ಲಿ ಸಿಲುಕಿಕೊಂಡಿದ್ದ 800ಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳನ್ನು ರಕ್ಷಿಸುವ ಮೂಲಕ 24 ವರ್ಷದ ಭಾರತೀಯ ಮಹಿಳಾ ಪೈಲಟ್ ಗಮನ ಸೆಳೆದಿದ್ದಾರೆ.

ಕೋಲ್ಕತ್ತಾದ ಮಹಾಶ್ವೇತಾ ಚಕ್ರವರ್ತಿ (Mahasweta Chakraborty) ಎನ್ನುವ ಪೈಲಟ್ ಯುದ್ಧ ಪೀಡಿತ ಉಕ್ರೇನ್‍ನಲ್ಲಿ ಸಿಲುಕಿರುವ 800ಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳನ್ನು ಸ್ಥಳಾಂತರಿಸುವಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಆಪರೇಷನ್ ಗಂಗಾದ ಸದಸ್ಯರಾಗಿರುವ ಚಕ್ರವರ್ತಿ, ರಷ್ಯಾ-ಉಕ್ರೇನ್ ಬಿಕ್ಕಟ್ಟಿನ ನಡುವೆ ಸಿಲುಕಿರುವ ವಿದ್ಯಾರ್ಥಿಗಳನ್ನು ರಕ್ಷಿಸಿದ್ದಾರೆ. ಫೆಬ್ರವರಿ 27 ಮತ್ತು ಮಾರ್ಚ್ 7ರ ನಡುವೆ ಪೋಲೆಂಡ್‍ನಿಂದ ನಾಲ್ಕು ಮತ್ತು ಹಂಗೇರಿಯಿಂದ ಎರಡು ಸ್ಥಳಾಂತರಿಸುವ ವಿಮಾನಗಳಲ್ಲಿ ವಿದ್ಯಾರ್ಥಿಗಳನ್ನು ಸ್ಥಾಳಾಂತರಿಸುವಲ್ಲಿ ಕಾರ್ಯ ನಿರ್ವಹಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇದನ್ನೂ ಓದಿ: ಜಮ್ಮು, ಕಾಶ್ಮೀರ ಬಜೆಟ್ ಮಂಡಿಸಲಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್

ಕೋಲ್ಕತ್ತಾದ 24 ವರ್ಷದ ಪೈಲಟ್ ಮಹಾಶ್ವೇತಾ ಚಕ್ರವರ್ತಿ ಅವರು ಉಕ್ರೇನ್, ಪೋಲೆಂಡ್ ಮತ್ತು ಹಂಗೇರಿಯ ಗಡಿಯಿಂದ 800ಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳನ್ನು ರಕ್ಷಿಸಿದ್ದಾರೆ. ಆಕೆಗೆ ಅಪಾರ ಗೌರವ ಎಂದು ಬಿಜೆಪಿ ಮಹಿಳಾ ಮೋಚಾ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಲಿರುವ ಭಗವಂತ್ ಮಾನ್

ಮಹಾಶ್ವೇತಾ, ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಪಶ್ಚಿಮ ಬಂಗಾಳ ಮಹಿಳಾ ಮೋರ್ಚಾ ಅಧ್ಯಕ್ಷೆ ತನುಜಾ ಚಕ್ರವರ್ತಿ ಅವರ ಮಗಳು. ಇಂದಿರಾ ಗಾಂಧಿ ರಾಷ್ಟ್ರೀಯ ಯುರಾನ್ ಅಕಾಡೆಮಿಯಿಂದ ಪದವೀಧರರಾಗಿದ್ದಾರೆ. ಅವರು ಕಳೆದ ನಾಲ್ಕು ವರ್ಷಗಳಿಂದ ಖಾಸಗಿ ಕ್ಯಾರಿಯರ್‌ನ್ನು (private carrier) ಹಾರಿಸುತ್ತಿದ್ದಾರೆ.

 

ಮಹಾಶ್ವೇತಾ ಚಕ್ರವರ್ತಿ ಖಾಸಗಿ ವಾಹಿನಿ ಜೊತೆಗೆ ಮಾತನಾಡಿ, ಇದು ಜೀವಮಾನದ ಅನುಭವವಾಗಿತ್ತು, ಅವರಲ್ಲಿ ಅನೇಕರು ಅನಾರೋಗ್ಯಕ್ಕೆ ಒಳಗಾಗಿದ್ದರು. ನಾನು ಅವರ ಹೋರಾಟದ ಮನೋಭಾವನೆಯನ್ನು ಮೆಚ್ಚುತ್ತೇನೆ. ಅವರ ಮನೆಗೆ ಹಿಂದಿರುಗಿದ ಪ್ರಯಾಣದಲ್ಲಿ ನನ್ನ ಪಾತ್ರವನ್ನು ವಹಿಸಿದ್ದಕ್ಕಾಗಿ ನಾನು ತುಂಬಾ ಹೆಮ್ಮೆಪಡುತ್ತೇನೆ. ಎಂದು ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *