ಮುಂಬೈ: ಮಹಾರಾಷ್ಟ್ರದಲ್ಲಿ (Maharashtra) ಸ್ವಯಂಘೋಷಿತ ಬಾಬಾವೊಬ್ಬ ತನ್ನ ಅನುಯಾಯಿಗಳಿಗೆ ಬೆತ್ತದಿಂದ ಹೊಡೆದು, ಮೂತ್ರ ಕುಡಿಸುವ ಆಕ್ಷೇಪಾರ್ಹ ಆಚರಣೆ ನಡೆಸುತ್ತಿರುವುದು ಬಹಿರಂಗಗೊಂಡಿದೆ.
ಸಂಭಾಜಿನಗರ ಜಿಲ್ಲೆಯ ಶಿಯೂರ್ ಗ್ರಾಮದ ದೇವಾಲಯದಲ್ಲಿ ಈ ಬಾಬಾ ಕಾರ್ಯನಿರ್ವಹಿಸುತ್ತಿದ್ದಾರೆ. ಯಾವುದೇ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವುದಾಗಿ ಜನರನ್ನು ನಂಬಿಸಿ, ನಿಂದನೀಯ ಆಚರಣೆಗೆ ಒಳಪಡಿಸುವ ಕೆಲಸ ಮಾಡುತ್ತಿದ್ದಾರೆ. ಇದನ್ನೂ ಓದಿ: ಕೋಲ್ಕತ್ತಾ | ಬಾಯ್ಸ್ ಹಾಸ್ಟೆಲ್‌ನಲ್ಲಿ ಯುವತಿಯ ರೇಪ್ ಕೇಸ್ – ಬಾಗಲಕೋಟೆ ಆರೋಪಿಗೆ ಜಾಮೀನು
ಸಂಜಯ್ ಪಗರೆ ಹೆಸರಿನ ಬಾಬಾ, ಗ್ರಾಮಸ್ಥರಿಗೆ ತಾನು ಆತ್ಮಗಳನ್ನು ಭೂತೋಚ್ಚಾಟನೆ ಮಾಡುತ್ತೇನೆ, ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿಬರುವಂತೆ ಮಾಡುತ್ತೇನೆ, ದಂಪತಿಗೆ ತನ್ನ ‘ಆಘೋರಿ’ ಆಚರಣೆಗಳ ಮೂಲಕ ಮಕ್ಕಳನ್ನು ಹೊಂದುವಂತೆ ಮಾಡುತ್ತೇನೆಂದು ನಂಬಿಸಿದ್ದಾರೆ.
ಅನುಯಾಯಿಗಳಿಗೆ ಬೆತ್ತದಿಂದ ಹೊಡೆಯುವುದು, ತನ್ನ ಬೂಟುಗಳನ್ನು ಅವರ ಬಾಯಿಯಲ್ಲಿ ಇಡುವುದು ಮಾಡಿದ್ದಾರೆ. ಹೀಗೆ ಹಲವಾರು ನಿಂದನೀಯ ಆಚರಣೆಗಳಿಗೆ ಒಳಪಡಿಸುತ್ತಿದ್ದಾರೆ. ಅಷ್ಟೇ ಅಲ್ಲ, ಆಧ್ಯಾತ್ಮಿಕ ಆಚರಣೆ ಭಾಗ ಎಂದು ಅನುಯಾಯಿಗಳಿಗೆ ತನ್ನ ಮೂತ್ರ ಕುಡಿಸಿರುವ ಘಟನೆಯೂ ನಡೆದಿದೆ ಎನ್ನಲಾಗಿದೆ. ಇದನ್ನೂ ಓದಿ: ಒಂದೇ ವಧುವನ್ನು ಮದುವೆಯಾದ ಸಹೋದರರು!
ಇಂತಹ ಆಚರಣೆಗಳನ್ನು ವಿರೋಧಿಸುವವರು ಸೀಕ್ರೆಟ್ ಕ್ಯಾಮೆರಾಗಳನ್ನು ಬಳಸಿಕೊಂಡು, ಬಾಬಾ ಆಚರಣೆಗಳನ್ನು ವೀಡಿಯೋ ಮಾಡಿದ್ದಾರೆ. ಬಾಬಾ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಭಾರತೀಯ ದಂಡ ಸಂಹಿತೆಯಡಿಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.