ಒಳ್ಳೆ ಬುದ್ಧಿ ಕಲಿಯಿರಿ ಎಂದಿದ್ದಕ್ಕೆ ಸಾಮಾಜಿಕ ಕಾರ್ಯಕರ್ತನ ಕೊಲೆಗೈದ ಬಾಲಕರು!

Public TV
1 Min Read

ಮುಂಬೈ: ಒಳ್ಳೆ ಬುದ್ಧಿ ಕಲಿತು ಭವಿಷ್ಯ ರೂಪಿಸಿಕೊಳ್ಳಿ ಬುದ್ಧಿಮಾತು ಹೇಳಿದ್ದಕ್ಕೆ ಸಾಮಾಜಿಕ ಕಾರ್ಯಕರ್ತನನ್ನೇ ಚಾಕುವಿನಿಂದ ಇರಿದು ಬಾಲಕರು ಕೊಲೆ ಮಾಡಿರುವ ಘಟನೆ ನಾಗ್ಪುರದಲ್ಲಿ ನಡೆದಿದೆ.

ಸಮತ ಸೈನಿಕ್ ದಳದ ಸುನಿಲ್ ಜಾವಡೆ (46) ಹತ್ಯೆಗೀಡಾದ ಸಾಮಾಜಿಕ ಕಾರ್ಯಕರ್ತ. ಸುನಿಲ್ ತರಕಾರಿ ಅಂಗಡಿ ಇಟ್ಟು ವ್ಯಾಪಾರ ಮಾಡುತ್ತಿದ್ದ. ಎಂದಿನಂತೆ ಮುಂಜಾನೆ ಅಂಗಡಿಗೆ ತೆರಳುತ್ತಿದ್ದಾಗ ಬಾಲಕರ ಗುಂಪು ಆತನ ಕಣ್ಣಿಗೆ ಖಾರದ ಪುಡಿ ಎರಚಿಸಿದ್ದಾರೆ. ನಂತರ ಆತನನ್ನು ಬೈಕ್‍ನಿಂದ ಕೆಳಕ್ಕೆ ಬೀಳಿಸಿ, ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ. ಹಲ್ಲೆಯಿಂದ ಗಂಭೀರ ಗಾಯಗೊಂಡಿದ್ದ ಸುನಿಲ್ ಮೃತಪಟ್ಟಿದ್ದಾರೆ. ಇದನ್ನೂ ಓದಿ: ಹೋಂ ವರ್ಕ್ ಮಾಡದ ಮಗನ ಕೈ,ಕಾಲು ಕಟ್ಟಿ ಫ್ಯಾನಿಗೆ ನೇತು ಹಾಕಿದ ತಂದೆ

ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಕರನ್ನು ಇಮಾಮ್‍ಬಾದ್ ಠಾಣೆಯ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಾಲಕರು 15 ಮತ್ತು 16 ವಯಸ್ಸಿನವರು ಎನ್ನಲಾಗಿದೆ. ಇದನ್ನೂ ಓದಿ: ರೈಲ್ವೆ ಪ್ಲಾಟ್‍ಫಾರ್ಮ್ ಟಿಕೆಟ್ ದರ ಇಳಿಕೆ – ಪ್ರಯಾಣದ ವೇಳೆ ಸಿಗುತ್ತೆ ಊಟ

ನಾಲ್ವರು ಬಾಲಕರಲ್ಲಿ ಒಬ್ಬ ಈ ಹಿಂದೆಯೂ ಹಲ್ಲೆ ಪ್ರಕರಣವೊಂದರಲ್ಲಿ ಭಾಗಯಾಗಿದ್ದ ಎಂದು ಪೊಲೀಸರಿಗೆ ವಿಚಾರಣೆ ವೇಳೆ ತಿಳಿದುಬಂದಿದೆ. ಬಾಲಕರು ಡ್ರಗ್ಸ್ ಸೇವನೆ ಚಟಕ್ಕೆ ಬಿದ್ದಿದ್ದರು. ಅದರಿಂದ ಹೊರ ಬಂದು ಒಳ್ಳೆಯ ರೀತಿ ಬದುಕಿ ಎಂದು ಸಲಹೆ ನೀಡಿದ್ದಕ್ಕೆ ಕೊಲೆ ಮಾಡಿದ್ದಾರೆ ಎನ್ನಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *