ಕುಟುಂಬ ರಾಜಕಾರಣ ಮಾಡೋರಿಗೆ ಮಹಾರಾಷ್ಟ್ರದಲ್ಲಿ ತಕ್ಕ ಪಾಠವಾಗಿದೆ: ಪ್ರತಾಪ್ ಸಿಂಹ

Public TV
2 Min Read

ಮೈಸೂರು: ಮಹಾರಾಷ್ಟ್ರದಲ್ಲಿ ಶಿವಸೇನೆಯ ಕುಟುಂಬ ರಾಜಕಾರಣದ ವಿರುದ್ಧ ಅಲ್ಲಿಯ ಶಾಸಕರು ಸಿಡಿದೆದ್ದಿದ್ದಾರೆ. ಅಧಿಕಾರ ಸಿಕ್ಕಾಗ ಎಲ್ಲಾ ನಮ್ಮ ಕುಟುಂಬಕ್ಕೆ ಬೇಕು ಎನ್ನುವವರಿಗೆ ಇದು ತಕ್ಕ ಪಾಠ ಎಂದು ಸಂಸದ ಪ್ರತಾಪ್ ಸಿಂಹ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.

ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕುಟುಂಬ ರಾಜಕಾರಣ ಮಾಡುವವರಿಗೆ ಇದು ಪಾಠ. ಉದ್ಧವ್ ಠಾಕ್ರೆ ನಾಯಕತ್ವದ ವಿರುದ್ಧ ನಡೆದಿರುವ ಹೋರಾಟ, ಇದರಲ್ಲಿ ಬಿಜೆಪಿ ಪಾತ್ರ ಏನು ಇಲ್ಲ. ಸುಖಾ ಸುಮ್ಮನೆ ಸಿದ್ದರಾಮಯ್ಯ ಆರೋಪ ಮಾಡುತ್ತಿದ್ದಾರೆ ಅಷ್ಟೇ ಎಂದಿದ್ದಾರೆ. ಇದನ್ನೂ ಓದಿ: ಅಗ್ನಿಪಥ್ ಯೋಜನೆಯನ್ನು ಕಾಂಗ್ರೆಸ್ ಸರ್ಕಾರ ರೂಪಿಸಿದೆ: ಅಚ್ಚರಿ ಹೇಳಿಕೆ ಕೊಟ್ಟ ಸವದಿ

ಮೈಸೂರು ಅಭಿವೃದ್ಧಿ ಬಗ್ಗೆ ಚರ್ಚೆ ವಿಚಾರವಾಗಿ ಮಾಜಿ ಸಚಿವ ಹೆಚ್‌.ಸಿ ಮಹದೇವಪ್ಪ ಹೇಳಿಕೆಗೆ ಪ್ರತಾಪ್ ಸಿಂಹ ತಿರುಗೇಟು ನೀಡಿದ್ದು, ಈ ರೀತಿ ಬೊಗಳೆ ಬಿಟ್ಟಿದ್ದಕ್ಕೆ ಜನ ಅವರನ್ನು ಮನೆಗೆ ಕಳುಹಿಸಿದ್ದಾರೆ. ನನ್ನನ್ನು ಎರಡನೇ ಬಾರಿ ಆಯ್ಕೆ ಮಾಡಿದ್ದಾರೆ. ಕೆಲಸ ಮಾಡಿದ್ದರೆ ಟಿ.ನರಸೀಪುರದ ಜನ ಮಹಾದೇವಪ್ಪನನ್ನು, ಚಾಮುಂಡೇಶ್ವರಿ ಜನ ಸಿದ್ದರಾಮಯ್ಯರನ್ನು ಏಕೆ ಸೋಲಿಸುತ್ತಿದ್ದರು? ಸಿದ್ದರಾಮಯ್ಯ ಊರು ಬಿಡುವ ಪರಿಸ್ಥಿತಿ ಯಾಕೆ ಬರುತ್ತಿತ್ತು? ಅಭಿವೃದ್ಧಿ ಚರ್ಚಗೆ ಪಂಥಾಹ್ವಾನ ಕೊಟ್ಟಿದ್ದೇನೆ. ದಂಡು ದಾಳಿ ಸಮೇತ ಚರ್ಚೆಗೆ ಬನ್ನಿ. ನಾನು ಒಬ್ಬನೇ ಸಾಕ್ಷಿ ಸಮೇತ ಬರುತ್ತೇನೆ. ಚರ್ಚೆಗೆ ಬರದೇ ಮಾಧ್ಯಮದ ಕ್ಯಾಮೆರಾ ಮುಂದೆ ಬೊಗಳೆ ಬಿಡಬೇಡಿ. ಮಾತಿಗಿಂತ ನಿಮ್ಮದು ಬೊಗಳೆ ಜಾಸ್ತಿಯಾಗಿದೆ. ಇದನ್ನು ಬಿಟ್ಟು ಚರ್ಚೆಗೆ ಬನ್ನಿ ಅಲ್ಲೇ ನಿಮ್ಮನ್ನು ಸೋಲಿಸುತ್ತೇನೆ ಎಂದು ಸವಾಲು ಎಸೆದಿದ್ದಾರೆ. ಇದನ್ನೂ ಓದಿ: ಸೇಡಿಗಾಗಿ ರೆಬೆಲ್ ಶಾಸಕರ ಕುಟುಂಬದ ಭದ್ರತೆಯನ್ನು ಸರ್ಕಾರ ಹಿಂಪಡೆದಿದೆ- ಶಿಂಧೆ ಆರೋಪ

ಜಲದರ್ಶಿನಿ ಬಳಿ 6 ಪಥದ ರಸ್ತೆಗೆ 12 ಕೋಟಿ ರೂ. ಬಿಡುಗಡೆಯಾಗಿದೆ. ಮಹದೇವಪ್ಪ ಅವಧಿಯಲ್ಲಿ ಬಿಡುಗಡೆಯಾಗಿದೆ. ಆದರೆ ಯಾವುದೇ ರಸ್ತೆ ಮಾಡಿಸಿಲ್ಲ. ಇಂತಹ ಮಹದೇವಪ್ಪರಿಂದ ಅಭಿವೃದ್ಧಿ ಪಾಠ ಬೇಡ ಎಂದು ವಾಗ್ದಾಳಿ ನಡೆಸಿದ್ದಾರೆ.

ರಾಷ್ಟ್ರಪತಿ ಅಭ್ಯರ್ಥಿಯಾಗಿ ದ್ರೌಪದಿ ಮುರ್ಮು ಆಯ್ಕೆ ವಿಚಾರವಾಗಿ ಸಿದ್ದರಾಮಯ್ಯ ಟೀಕೆ ಮಾಡಿದ್ದಾರೆ. ಸಿದ್ದರಾಮಯ್ಯರದ್ದು ಹುಳುಕು ಮನಸ್ಥಿತಿ. ಆದ್ದರಿಂದ ಎಲ್ಲದರಲ್ಲೂ ಹುಳುಕು ಹುಡುಕುತ್ತಾರೆ. ಬಿಜೆಪಿಗೆ ಮೂರು ಬಾರಿ ರಾಷ್ಟ್ರಪತಿ ಆಯ್ಕೆಗೆ ಅವಕಾಶ ಸಿಕ್ಕಿದೆ. ಒಮ್ಮೆ ಅಬ್ದುಲ್ ಕಲಾಂ ಮತ್ತೊಮ್ಮೆ ಎಸ್‍ಸಿ ಸಮುದಾಯದ ರಾಮನಾಥ್ ಕೋವಿಂದ್ ಈಗ ಬುಡಕಟ್ಟು ಜನಾಂಗದ ದ್ರೌಪದಿ ಮುರ್ಮುರನ್ನು ಆಯ್ಕೆ ಮಾಡಲಾಗಿದೆ. ಹಿಂದುಳಿದ ಎಲ್ಲಾ ಸಮುದಾಯಕ್ಕೆ ಅವಕಾಶ ಸಿಗಲಿ ಅನ್ನೋದು ಬಿಜೆಪಿ ಆಶಯ. ಅದರಂತೆ ಆಯ್ಕೆ ಮಾಡಲಾಗಿದೆ. ಸಿದ್ದರಾಮಯ್ಯ ಹುಳುಕು ಮನಸ್ಥಿತಿ ಬಗ್ಗೆ ನಾನು ಏನು ಹೇಳುವುದಿಲ್ಲ ಎಂದು ಕಿಡಿಕಾರಿದ್ದಾರೆ.

Live Tv

Share This Article
Leave a Comment

Leave a Reply

Your email address will not be published. Required fields are marked *