ಮಹಾರಾಷ್ಟ್ರದಲ್ಲಿ ಇಂಡಿಯಾ ಒಕ್ಕೂಟದ ನಡುವೆ ಸೀಟು ಹಂಚಿಕೆ ಫೈನಲ್

Public TV
1 Min Read

– ಉದ್ಧವ್‌ ಬಣಕ್ಕೆ 21, ಕಾಂಗ್ರೆಸ್‌ 17 ಸ್ಥಾನದಲ್ಲಿ ಸ್ಪರ್ಧೆ

ನವದೆಹಲಿ: ಲೋಕಸಭಾ ಚುನಾವಣೆಗೆ ಮಹಾರಾಷ್ಟ್ರದಲ್ಲಿ ಇಂಡಿಯಾ ಒಕ್ಕೂಟದ ನಡುವೆ ಸೀಟು ಹಂಚಿಕೆ ಒಪ್ಪಂದ ಅಂತಿಮಗೊಂಡಿದ್ದು, ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಶಿವಸೇನೆ (UBT) ಬಣ 21 ಸ್ಥಾನಗಳಲ್ಲಿ, ಕಾಂಗ್ರೆಸ್ (Congress) 17 ಸ್ಥಾನಗಳಲ್ಲಿ ಮತ್ತು ಶರದ್ ಪವಾರ್ (Sharad Pawar) ನೇತೃತ್ವದ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷವು 10 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ.

ವಿವಾದಿತ ಸ್ಥಾನ ಸಾಂಗ್ಲಿಯನ್ನು ಶಿವಸೇನೆ (ಯುಬಿಟಿ) ಉಳಿಸಿಕೊಂಡಿದೆ ಮತ್ತು ಭಿವಂಡಿಯನ್ನು ಕಾಂಗ್ರೆಸ್ ತೆಗೆದುಕೊಂಡಿದೆ. ಶಿವಸೇನೆ ಸ್ಪರ್ಧಿಸುತ್ತಿದ್ದ ಮುಂಬೈ ಉತ್ತರ ಕ್ಷೇತ್ರವನ್ನು ಕಾಂಗ್ರೆಸ್ ಪಡೆದುಕೊಂಡಿದೆ. ಮುಂಬೈನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಉದ್ಧವ್ ಠಾಕ್ರೆ, ಎನ್‌ಸಿಪಿ (ಎಸ್‌ಪಿ) ಮುಖ್ಯಸ್ಥ ಶರದ್ ಪವಾರ್ ಮತ್ತು ಮಹಾರಾಷ್ಟ್ರದ ಕಾಂಗ್ರೆಸ್ ಘಟಕದ ಅಧ್ಯಕ್ಷ ನಾನಾ ಪಟೋಲೆ ಜಂಟಿಯಾಗಿ ಸೀಟು ಹಂಚಿಕೆ ಒಪ್ಪಂದವನ್ನು ಘೋಷಿಸಿದರು.

ಸೀಟು ಹಂಚಿಕೆ ಒಪ್ಪಂದದ ಕುರಿತು ಮಾತನಾಡಿದ ಉದ್ಧವ್ ಠಾಕ್ರೆ, ಎಲ್ಲರೂ ಸೀಟುಗಳಿಗಾಗಿ ಹೋರಾಡಲು ಬಯಸುತ್ತಾರೆ. ಅದರಲ್ಲಿ ಯಾವುದೇ ತಪ್ಪಿಲ್ಲ ಅಂತಿಮವಾಗಿ ಗೆಲುವಿಗೆ ಆದ್ಯತೆ ನೀಡಬೇಕು ಎಂದು ಹೇಳಿದರು. ಮಹಾರಾಷ್ಟ್ರದಲ್ಲಿ ಲೋಕಸಭಾ ಚುನಾವಣೆಯು (Maharastra Loksabha Election 2024) ಏಪ್ರಿಲ್ 19, 26, ಮತ್ತು ಮೇ 7, 13 ಮತ್ತು 20 ರಂದು ಐದು ಹಂತಗಳಲ್ಲಿ ನಡೆಯಲಿದೆ, ರಾಜ್ಯದಲ್ಲಿ 48 ಲೋಕಸಭಾ ಕ್ಷೇತ್ರಗಳಿವೆ. ಇದನ್ನೂ ಓದಿ: ಕರ್ನೂರು ಚೆಕ್‍ಪೋಸ್ಟ್ ಬಳಿ ಬೈಕ್‍ನಲ್ಲಿ ಸಾಗಿಸುತ್ತಿದ್ದ 25 ಲಕ್ಷ ರೂ. ಸೀಜ್

Share This Article