ಬಿಜೆಪಿ ಸಚಿವೆ ಪಂಕಜಾ ಮುಂಡೆ ಹೆಲಿಕಾಪ್ಟರ್‌ನಲ್ಲಿ ತಾಂತ್ರಿಕ ದೋಷ – ಚುನಾವಣಾ ಪ್ರಚಾರ ರದ್ದು

1 Min Read

ಮುಂಬೈ: ಬಿಜೆಪಿ ನಾಯಕಿ ಹಾಗೂ ರಾಜ್ಯ ಪರಿಸರ ಮತ್ತು ಪಶುಸಂಗೋಪನಾ ಸಚಿವೆ ಪಂಕಜಾ ಮುಂಡೆ (Pankaja Munde) ಅವರ ಹೆಲಿಕಾಪ್ಟರ್‌ನಲ್ಲಿ ಮಂಗಳವಾರ ತಾಂತ್ರಿಕ ದೋಷ ಕಂಡುಬಂದಿದೆ. ಹೀಗಾಗಿ ಲಾತೂರ್‌ (Latur) ಚುನಾವಣಾ ಪ್ರಚಾರ ಕಾರ್ಯಕ್ರಮವನ್ನ ದಿಢೀರ್‌ ರದ್ದುಗೊಳಿಸಲಾಗಿದೆ.

ಇಂದು ಜಿಲ್ಲಾ ಚುನಾವಣಾ ಪ್ರಚಾರಕ್ಕಾಗಿ ಪಂಕಜಾ ಮುಂಡೆ ಅವರು ಮಹಾರಾಷ್ಟ್ರದಲ್ಲಿ ಸಂಭಾಜಿನಗರ ರಿಂದ ಲಾತೂರ್‌ಗೆ ತೆರಳಬೇಕಿತ್ತು. ಈ ವೇಳೆ ಹೆಲಿಕಾಪ್ಟರ್‌ನಲ್ಲಿ ತಾಂತ್ರಿಕ ದೋಷ (Technical Issue) ಕಂಡುಬಂದಿತು. ಹಾರಾಟ ನಡೆಸುವ ಮೊದಲೇ ಪೈಲಟರ್‌ ಈ ವಿಷಯ ಗಮನಕ್ಕೆ ತಂದಿದ್ದರಿಂದ ಲಾತೂರ್‌ ಪ್ರಯಾಣವನ್ನ ರದ್ದುಗೊಳಿಸಲಾಯಿತು. ಇದನ್ನೂ ಓದಿ: ಫ್ಯೂಯಲ್ ಕಂಟ್ರೋಲ್‌ ಸ್ವಿಚ್‌ನಲ್ಲಿ ದೋಷ; ಬೆಂಗಳೂರಿಗೆ ಹೊರಟಿದ್ದ ಏರ್‌ ಇಂಡಿಯಾ ವಿಮಾನ ಹಾರಾಟ ಸ್ಥಗಿತ

ಸೋಮವಾರ (ಫೆ.2) ಪಂಕಜಾ ಮುಂಡೆ ಅವರು ಪಿಶೋರ್, ಘಟನಂದ್ರ, ಚೌಕಾ, ಅಡ್ಗಾಂವ್, ಬಜನಗರ ಮುಂತಾದ ಅವರ ಸ್ಥಳಗಳಲ್ಲಿ ಚುನಾವಣಾ ಪೂರ್ವ ಸಭೆಗಳನ್ನ ನಡೆಸಿದ್ದರು. ಪ್ರಚಾರ ಕಾರ್ಯ ಮುಗಿದ ಬಳಿಕ ಛತ್ರಪತಿ ಸಂಭಾಜಿನಗರದಲ್ಲಿ ವಾಸ್ತವ್ಯ ಹೂಡಿಸಿದ್ದರು. ಇಂದು (ಮಂಗಳವಾರ) ಬೆಳಗ್ಗೆ ಲಾತೂರ್, ಧಾರಶಿವ ಮತ್ತು ಸೋಲಾಪುರ ಸೇರಿ 3 ಜಿಲ್ಲೆಗಳಲ್ಲಿ ಯೋಜಿತ ಸಭೆಗಳಿಗೆ ಹಾಜರಾಗಬೇಕಿತ್ತು. ಎಲ್ಲಾ ತಯಾರಿ ಮಾಡಿಕೊಳ್ಳಲಾಗಿತ್ತು. ಕೊನೇ ಕ್ಷಣದಲ್ಲಿ ತಾಂತ್ರಿಕ ದೋಷದ ಬಗ್ಗೆ ಪೈಲಟ್‌ ಮಾಹಿತಿ ನೀಡಿದ ಹಿನ್ನೆಲೆ ಚುನಾವಣಾ ಪ್ರಚಾರ ಕಾರ್ಯಗಳನ್ನ ರದ್ದುಗೊಳಿಸಲಾಗಿದೆ. ಇದನ್ನೂ ಓದಿ: ನಿಯಮ ಪಾಲಿಸದಿದ್ರೆ ದೇಶ ಬಿಟ್ಟು ತೊಲಗಿ – ವಾಟ್ಸಪ್‌ಗೆ ಸುಪ್ರೀಂ ವಾರ್ನಿಂಗ್‌

Share This Article