ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ವಿರುದ್ಧ ಕೇಸ್ ದಾಖಲು

Public TV
1 Min Read

ಮುಂಬೈ: ಕೊರೊನಾ ಪಾಸಿಟಿವ್ ವರದಿಯಾಗಿದ್ದರೂ ಕೊರೊನಾ ನಿಯಮ ಉಲ್ಲಂಘಿಸಿ ಬೆಂಬಲಿಗರನ್ನು ಭೇಟಿಯಾದ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ವಿರುದ್ಧ ಬಿಜೆಪಿ ಮುಖಂಡ ತಜೀಂದರ್ ಬಗ್ಗಾ ಪ್ರಕರಣ ದಾಖಲಿಸಿದ್ದಾರೆ.

ಮಹಾರಾಷ್ಟ್ರದಲ್ಲಿ ರಾಜಕೀಯ ಹೈಡ್ರಾಮಾ ನಡೆಯುತ್ತಿದ್ದಂತೆ ಉದ್ಧವ್ ಠಾಕ್ರೆಗೆ ನಿನ್ನೆ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಈ ಬಗ್ಗೆ ಸಿಎಂ ಉದ್ಧವ್ ಠಾಕ್ರೆ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದರು. ಬಳಿಕ ಸಿಎಂ ಅಧಿಕೃತ ನಿವಾಸ ‘ಹರ್ಷ’ ತೊರೆದು ಸ್ವಂತ ನಿವಾಸಕ್ಕೆ ತೆರಳಿದ್ದರು. ಈ ವೇಳೆ ಆಗಮಿಸಿದ್ದ ಬೆಂಬಲಿಗರನ್ನು ಉದ್ಧವ್ ಠಾಕ್ರೆ ಭೇಟಿಯಾಗಿದ್ದರು. ಇದನ್ನೂ ಓದಿ: ಯಾರು ಸ್ತ್ರೀಯರಿಗೆ ಅಪಮಾನ ಮಾಡುತ್ತಾರೋ ಅವರ ಪತನ ನಿಶ್ಚಿತ – ಕಂಗನಾ ಹಳೇ ವೀಡಿಯೋ ವೈರಲ್

ಕೊರೊನಾ ನಿಯಮದ ಪ್ರಕಾರ ಸೋಂಕು ದೃಢಪಟ್ಟವರು ಐಸೋಲೇಷನ್‍ನಲ್ಲಿ ಇದ್ದು ಯಾರನ್ನು ಸಂಪರ್ಕ ಮಾಡಬಾರದು. ಆದರೆ ಉದ್ಧವ್ ಠಾಕ್ರೆ ಕೊರೊನಾ ನಿಯಮವನ್ನು ಮುರಿದು ಬೆಂಬಲಿಗರನ್ನು ಭೇಟಿಯಾಗಿ ನಿಯಮ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ತಜೀಂದರ್ ಬಗ್ಗಾ ಮಲಬಾರ್ ಹಿಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಇದನ್ನೂ ಓದಿ: ಜಾರಕಿಹೊಳಿ ಸಿಡಿ ಕೇಸ್‌ – ಚುನಾವಣೆ ಸಮಯದಲ್ಲೇ ಡಿಕೆಶಿಗೆ ಸಂಕಷ್ಟ ಸಾಧ್ಯತೆ

ನಿನ್ನೆ ರಾಜಕೀಯ ಬಿಕ್ಕಟ್ಟಿನ ನಡುವೆ ಉದ್ಧವ್ ಠಾಕ್ರೆ ಫೇಸ್‍ಬುಕ್ ಲೈವ್ ಮೂಲಕ ತಮ್ಮ ನಿಲುವನ್ನು ಪ್ರಕಟಿಸಿದ್ದರು. ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧರಾಗಿರುವುದಾಗಿ ತಿಳಿಸಿದ್ದರು. ನಮ್ಮ ಜನರಿಗೆ ನಾನು ಮುಖ್ಯಮಂತ್ರಿ ಸ್ಥಾನದಲ್ಲಿ ಇರುವುದು ಬೇಕಿಲ್ಲದಿದ್ದರೆ, ಯಾವುದೇ ಶಾಸಕರು ನಾನು ಮುಖ್ಯಮಂತ್ರಿಯಾಗಿರುವುದು ಬೇಡ ಎಂದು ಹೇಳಿದರೆ, ತಕ್ಷಣವೇ ನಾನು ರಾಜೀನಾಮೆ ಸಲ್ಲಿಸುತ್ತೇನೆ. ನಾನು ವರ್ಷ ನಿವಾಸದಿಂದ ಮಾತೋಶ್ರೀಗೆ ಮರಳುತ್ತೇನೆ ಎಂದಿದ್ದರು. ಜೊತೆಗೆ ಎರಡು ಷರತ್ತುಗಳನ್ನು ಹಾಕಿದ್ದು ತಮ್ಮ ಮುಂದೆ ಬಂದು ಶಾಸಕರು ಅಭಿಪ್ರಾಯ ತಿಳಿಸಬೇಕು. ಜೊತೆಗೆ ಶಿವಸೇನೆಯ ಮೂಲದವರೇ ಮುಂದಿನ ಮುಖ್ಯಮಂತ್ರಿ ಆಗಬೇಕೆಂಬ ಷರತ್ತಿನೊಂದಿಗೆ ತಮ್ಮ ನಿಲುವನ್ನು ಪ್ರಕಟಿಸಿದ್ದಾರೆ.

Live Tv

Share This Article
Leave a Comment

Leave a Reply

Your email address will not be published. Required fields are marked *