ಬಿಜೆಪಿ ಶಾಸಕನ ಪುತ್ರ ಸೇರಿ 7 ವೈದ್ಯಕೀಯ ವಿದ್ಯಾರ್ಥಿಗಳ ದುರ್ಮರಣ!

Public TV
1 Min Read

ಮುಂಬೈ: ಬಿಜೆಪಿ ಶಾಸಕನ ಪುತ್ರ ಸೇರಿದಂತೆ 7 ವೈದ್ಯಕೀಯ ವಿದ್ಯಾರ್ಥಿಗಳು ಕಾರು ಅಪಘಾತದಲ್ಲಿ ದುರ್ಮರಣವನ್ನಪ್ಪಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

ನಿನ್ನೆ ರಾತ್ರಿ ಮಹಾರಾಷ್ಟ್ರದ ಸೆಲ್ಸೂರ ಬಳಿ ಬ್ರಿಡ್ಜ್ ನಿಂದ ಕಾರು ಕೆಳಗೆ ಬಿದ್ದ ಪರಿಣಾಮ ಬಿಜೆಪಿ ಶಾಸಕ ವಿಜಯ್ ರಹಾಂಗದಲೆ ಅವರ ಪುತ್ರ ಆವಿಷ್ಕಾರ್ ರಹಾಂಗದಲೆ ಸೇರಿದಂತೆ ಏಳು ವೈದ್ಯಕೀಯ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಹೋಂ ಐಸೋಲೇಷನ್‍ನಿಂದ ಕೆಲಸಕ್ಕೆ ಮರಳುವವರಿಗೆ ನೆಗೆಟಿವ್ ರಿಪೋರ್ಟ್ ಕಡ್ಡಾಯವಲ್ಲ: ತ್ರಿಲೋಕ್ ಚಂದ್ರ

ಘಟನೆಯ ವಿವರ: ಮಹೀಂದ್ರಾ  XUV 500 ಕಾರಿನಲ್ಲಿ ಆವಿಷ್ಕಾರ್ ಮತ್ತು ಆತನ ಸ್ನೇಹಿತರು ಡಿಯೋಲಿಯಿಂದ ವಾರ್ಧಾಗೆ ತೆರಳುತ್ತಿದ್ದರು. ಈ ವೇಳೆ ಇವರ ಕಾರಿಗೆ ಕಾಡು ಹಂದಿ ಡಿಕ್ಕಿ ಹೊಡೆದಿದ್ದು, ನಂತರ ಚಾಲಕ ನಿಯಂತ್ರಣ ತಪ್ಪಿದ್ದಾನೆ. ಪರಿಣಾಮ ಕಾರು ಬ್ರಿಡ್ಜ್ ನಿಂದ ಕೆಳಗೆ ಬಿದ್ದು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ.

ಪೊಲೀಸ್ ವರಿಷ್ಠಾಧಿಕಾರಿ ಪ್ರಶಾಂತ್ ಹೋಳ್ಕರ್ ಮಾತನಾಡಿ, ವಿದ್ಯಾರ್ಥಿಗಳು ಪರೀಕ್ಷೆ ಬರೆದು, ಪಾರ್ಟಿ ಮುಗಿಸಿ ಹಿಂತಿರುಗುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ. ನಿನ್ನೆ ರಾತ್ರಿ 11.30 ರ ಸುಮಾರಿಗೆ ಈ ಘಟನೆ ಸಂಭವಿಸಿದೆ ಎಂದು ಹೇಳಿದ್ದಾರೆ.

ಮೃತ ವಿದ್ಯಾರ್ಥಿಗಳಲ್ಲಿ ಒಬ್ಬ ಗೊಂಡಿಯಾ ಜಿಲ್ಲೆಯ ತಿರೋರಾ ಕ್ಷೇತ್ರದ ಶಾಸಕ ವಿಜಯ್ ರಹಾಂಗದಲೆ ಅವರ ಪುತ್ರ ಆವಿಷ್ಕಾರ್ ಎಂದು ಗುರುತಿಸಲಾಗಿದೆ. ನೀರಜ್ ಚೌಹಾಣ್ (ಪ್ರಥಮ ವರ್ಷದ ಎಂಬಿಬಿಎಸ್), ನಿತೇಶ್ ಸಿಂಗ್ (2015 ಇಂಟರ್ನ್ ಎಂಬಿಬಿಎಸ್), ವಿವೇಕ್ ನಂದನ್ (2018, ಎಂಬಿಬಿಎಸ್ ಫೈನಲ್), ಪ್ರತ್ಯುಷ್ ಸಿಂಗ್ (2017 ಎಂಬಿಬಿಎಸ್), ಶುಭಂ ಜೈಸ್ವಾಲ್ (2017 ಎಂಬಿಬಿಎಸ್) ಮತ್ತು ಪವನ್ ಶಕ್ತಿ (2020 ಎಂಬಿಬಿಎಸ್) ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಪಂಜಾಬ್‍ನಲ್ಲಿ AAP ಅಧಿಕಾರಕ್ಕೆ ಬಂದ್ರೆ ಜನರ ಸಲಹೆ ಮೇರೆಗೆ ಬಜೆಟ್: ಅರವಿಂದ್ ಕೇಜ್ರಿವಾಲ್

ಮೃತ ವಿದ್ಯಾರ್ಥಿಗಳು ಸಾವಂಗಿ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ಎಂದು ಗುರುತಿಸಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *