ಸ್ಯಾಂಡಲ್‌ವುಡ್‌ಗೆ ‘ಮಹಾನಟಿ’ ವಿನ್ನರ್ ಎಂಟ್ರಿ- ‘ಕಾಟೇರ’ ಡೈರೆಕ್ಟರ್‌ ತರುಣ್‌ ಸಿನಿಮಾದಲ್ಲಿ ಪ್ರಿಯಾಂಕಾ

Public TV
1 Min Read

ಳುಮಲೆಯ ಮಡಿಲಲ್ಲಿ ಎದೆ ನಡುಗಿಸಿದ ಪ್ರೇಮಕಥೆಯ ನಾಯಕನಾಗಿ ಕ್ರೇಜಿ ಕ್ವೀನ್ ರಕ್ಷಿತಾ ಸಹೋದರ ರಾಣಾರನ್ನು (Raanna) ಪರಿಚಯಿಸಿದ್ದ ಸ್ಟಾರ್ ಡೈರೆಕ್ಟರ್ ತರುಣ್ ಸುಧೀರ್ (Tharun Sudhir) ಈಗ ನಾಯಕಿಯನ್ನು ಘೋಷಣೆ ಮಾಡಿದ್ದಾರೆ. ‘ಕಾಟೇರ’ (Kaatera) ಯಶಸ್ಸಿನ ಬಳಿಕ ತರುಣ್ ಅವರು ಅಟ್ಲಾಂಟಾ ನಾಗೇಂದ್ರ ಎಂಬುವವರ ಜೊತೆಗೂಡಿ ನಿರ್ಮಿಸುತ್ತಿರುವ ಹೊಸ ಕಥೆಗೆ ಹೊಸ ನಾಯಕಿಯನ್ನು ಕರೆ ತಂದಿದ್ದಾರೆ.

ತರುಣ್ ಸುಧೀರ್ ಬಳಗದಲ್ಲಿ ಕೆಲಸ ಮಾಡಿರುವ ಪುನೀತ್ ರಂಗಸ್ವಾಮಿ ಎಂಬುವವರ ಚೊಚ್ಚಲ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ನೈಜ ಘಟನೆಯ ಪ್ರೇಮಕಥೆಯಲ್ಲಿ ಮೈಸೂರಿನ ಪ್ರಿಟಿ ಪ್ರಿಯಾಂಕಾ ಆಚಾರ್ ನಾಯಕಿಯಾಗಿ ನಟಿಸುತ್ತಿದ್ದಾರೆ. ‘ಮಹಾನಟಿ’ ಶೋ ವಿನ್ನರ್ ಪಟ್ಟ ಪಡೆದಿದ್ದ ಪ್ರಿಯಾಂಕಾ ಆಚಾರ್‌ (Priyanka Achar) ಅವರು ತರುಣ್ ನಿರ್ಮಾಣದ ಚಿತ್ರದಲ್ಲಿ ನಾಯಕಿಯಾಗಿ ಚಿತ್ರರಂಗಕ್ಕೆ ಮೊದಲ ಹೆಜ್ಜೆ ಇಡುತ್ತಿದ್ದಾರೆ.

‘ಮಹಾನಟಿ’ ಶೋ ಜಡ್ಜ್ ಆಗಿದ್ದಾಗ್ಲೇ ಪ್ರಿಯಾಂಕಾ ಅಭಿನಯವನ್ನು ತರುಣ್ ಸುಧೀರ್ ಮೆಚ್ಚಿಕೊಂಡಿದ್ದರು. ಇದೀಗ ಅವರದ್ದೇ ನಿರ್ಮಾಣದ ಚಿತ್ರದಲ್ಲಿ ಹೀರೋಯಿನ್ ಆಗಿ ನಟಿಸುವ ಬೊಂಬಾಟ್ ಚಾನ್ಸ್ ಪ್ರಿಯಾಂಕಾಗೆ ಸಿಕ್ಕಿದೆ. ಮೂಲತಃ ಮೈಸೂರಿನವರಾದ ಪ್ರಿಯಾಂಕಾ ನಟಿಯಬೇಕು ಎಂಬ ಕನಸಿತ್ತು. ಆ ಕನಸಿಗೆ ತರುಣ್ ಸಾಥ್ ಕೊಡುತ್ತಿದ್ದಾರೆ. ಇದನ್ನೂ ಓದಿ:ಸ್ಯಾಂಡಲ್‌ವುಡ್‌ಗೆ ‘ಮಹಾನಟಿ’ ವಿನ್ನರ್ ಎಂಟ್ರಿ- ಕಾಟೇರ ಡೈರೆಕ್ಟರ್‌ ತರುಣ್‌ ಸಿನಿಮಾದಲ್ಲಿ ಪ್ರಿಯಾಂಕಾ


ತರುಣ್ ಸುಧೀರ್ ಹೊಸ ನಾಯಕಿರಯನ್ನು ಪರಿಚಯಿಸುವುದರಲ್ಲಿ ನಿಸ್ಸಿಮರು. ‘ರಾಬರ್ಟ್’ ಮೂಲಕ ಆಶಾ ಭಟ್, ಕಾಟೇರ ಮೂಲಕ ಮಾಲಾಶ್ರೀ ಪುತ್ರಿ ಆರಾಧನ ರಾಮ್ ರನ್ನು ಹೀರೋಯಿನ್ ಆಗಿ ಕನ್ನಡ ಸಿನಿಮಾ ಪ್ರೇಮಿಗಳ ಎದುರು ತಂದಿದ್ದ ತರುಣ್ ಈಗ ಪ್ರಿಯಾಂಕಾ ಆಚಾರ್ ನ್ನು ತಮ್ಮದೇ ನಿರ್ಮಾಣದ ಚಿತ್ರದಲ್ಲಿ ರಾಣಾಗೆ ಜೋಡಿಯಾಗಿ ನಿಲ್ಲಿಸುತ್ತಿದ್ದಾರೆ. ಅದ್ವೈತ್ ಗುರುಮೂರ್ತಿ ಈ ಚಿತ್ರಕ್ಕೆ ಕ್ಯಾಮರಾವರ್ಕ್ ಮಾಡುತ್ತಿದ್ದಾರೆ. ತರುಣ್ ಸುಧೀರ್ ಹಾಗೂ ಅಟ್ಲಾಂಟಾ ನಾಗರಾಜ್ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದು, ಸದ್ಯ ಈ ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ.

Share This Article