3 ಲಕ್ಷ ರೂ. ನೀಡಿ 62 ಕೈದಿಗಳನ್ನು ಜೈಲಿಂದ ಬಿಡಿಸಿದ್ದರು ದುನಿಯಾ ವಿಜಯ್!

Public TV
2 Min Read

ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ದುನಿಯಾ ಸಿನಿಮಾ ಮೂಲಕ ಕನ್ನಡ ಅಭಿಮಾನಿಗಳ ಮನಗೆದ್ದ ನಟ ದುನಿಯಾ ವಿಜಯ್ ಹೆಚ್ಚು ಸಿನಿಮಾಗಳ ಮೂಲಕವೇ ಗುರುತಿಸಿಕೊಂಡವರು, ಆದರೆ ಅವರು ತೆರೆ ಹಿಂದೆ ಮಾಡಿದ ಸಾಮಾಜಿಕ ಕಳಕಳಿಯ ಕುರಿತು ಹಾಡುಗಾರ ಮಹದೇವಸ್ವಾಮಿ ಬಿಚ್ಚಿಟ್ಟಿದ್ದಾರೆ.

ಖಾಸಗಿ ವಾಹಿನಿವೊಂದರ ಕಾರ್ಯಕ್ರಮದಲ್ಲಿ ಮಾತನಾಡುವ ವೇಳೆ ಮಹದೇವಪ್ಪ, ದುನಿಯಾ ವಿಜಯ್ ಅವರು ಜೈಲಿನಿಂದ 62 ಕೈದಿಗಳನ್ನು ಬಿಡುಗಡೆ ಮಾಡಿಸಿದ್ದ ಕುರಿತು ರಿವೀಲ್ ಮಾಡಿದ್ದಾರೆ.

2013 ರಲ್ಲಿ ದುನಿಯಾ ವಿಜಯ್ ಅಭಿನಯದ `ದೇವ್ರು’ ಸಿನಿಮಾ ಚಿತ್ರೀಕರಣದ ಸಮಯದಲ್ಲಿ ಚಿತ್ರ ತಂಡ ಜೈಲಿಗೆ ಬಂದಿತ್ತು. ಅದನ್ನು ಗಮನಿಸದೆ ನಾನು ಅಮ್ಮನ ಕುರಿತು ಕವಿತೆ ಬರೆಯುತ್ತಿದ್ದೆ. ಬಳಿಕ ಪುಸ್ತಕ ಎತ್ತಿಟ್ಟು ಊಟ ಮಾಡಲು ತೆರಳಿದ ವೇಳೆ ಕೆಲ ಜನರು ಗುಂಪು ಕಟ್ಟಿಕೊಂಡು ಮಾತನಾಡುತ್ತಿದ್ದರು. ಆಗ ಸ್ವತಃ ದುನಿಯಾ ವಿಜಯ್ ಅವರೇ ನನ್ನ ತಟ್ಟೆಯಿಂದ ಅನ್ನ ತೆಗೆದುಕೊಂಡು ತಿಂದರು. ಇದನ್ನು ಕಂಡು ಅಚ್ಚರಿಗೊಂಡೆ. ಬಳಿಕ ನನ್ನ ಬಳಿ ಮಾತನಾಡಿ ನಾನು ಬರೆಯುತ್ತಿದ್ದ ಪುಸ್ತಕ ತೆಗೆದುಕೊಡುವಂತೆ ಹೇಳಿದರು. ನಾನು ಬರೆದಿದ್ದ ಅಮ್ಮನ ಕುರಿತ ಕವಿತೆ ಓದಿ ಪುಸ್ತಕದಲ್ಲಿ ಸಹಿ ಮಾಡಿದರು ಅಂದ್ರು.

ಊಟ ಬೇಡ, ದಂಡ ಕಟ್ಟಿ ಎಂದು ಮನವಿ:
ನನ್ನ ಜೊತೆ ಮಾತನಾಡುವ ವೇಳೆ ವಿಜಯ್ ಅವರು ಊಟ ಕೊಡಿಸುವುದಾಗಿ ಹೇಳಿದರು. ಆದರೆ ಈ ವೇಳೆ ಅಲ್ಲಿನ ಕೆಲ ಹಿರಿಯರೊಂದಿಗೆ ಮಾತನಾಡಿ ಊಟ ಬೇಡ ವಿವಿಧ ಕಾರಣಗಳಿಂದ ಹಣ ಕಟ್ಟಲಾಗದೆ ಜೈಲಿನಲ್ಲೇ ಉಳಿದ ಕೆಲ ಕೈದಿಗಳ ಬಿಡುಗಡೆಗೆ ಮನವಿ ಮಾಡಿದೆವು. ಇದನ್ನು ಒಪ್ಪಿದ ದುನಿಯಾ ವಿಜಯ್ ಅವರು ಪೊಲೀಸ್ ಅಧಿಕಾರಿಗಳೊಂದಿಗೆ ಮಾತನಾಡಿ 62 ಕೈದಿಗಳ ಬಿಡುಗಡೆಗೆ 3 ಲಕ್ಷ ರೂ. ಹಣವನ್ನು ನೀಡಿದರು ಅಂತ ಮಹದೇವಪ್ಪ ಭಾವುಕರಾದರು.

ದುನಿಯಾ ವಿಜಯ್ ಷರತ್ತು:
ತಮ್ಮನ್ನು ಬಿಡುಗಡೆ ಮಾಡುವ ಕುರಿತು ಯಾವುದೇ ಮಾಧ್ಯಮ ಹಾಗೂ ಪತ್ರಿಕೆಗಳಿಗೆ ಹೇಳಿಕೆ ನೀಡಬಾರದು ಎಂದು ದುನಿಯಾ ವಿಜಯ್ ಅವರು ಷರತ್ತು ವಿಧಿಸಿದ್ದರು. ಆದರೆ ಇಂದು ಅನಿವಾರ್ಯವಾಗಿ ಅವರ ಕುರಿತು ಹೇಳಬೇಕೆನಿಸಿತು. ಅದ್ದರಿಂದ ಇದನ್ನು ಹೇಳಿದ್ದಾಗಿ ಮಹದೇವಪ್ಪ ತಿಳಿಸಿದರು. ಅಂದಹಾಗೇ ರಿಯಾಲಿಟಿ ಶೋ ಸ್ಪರ್ಧಿಯಾಗಿರುವ ಮಹದೇವಸ್ವಾಮಿ ಅವರು ಸಂದರ್ಭವೊಂದರಲ್ಲಿ ಮಾಡಿದ ತಪ್ಪಿನಿಂದ 11 ವರ್ಷ ಜೈಲು ಶಿಕ್ಷೆ ಆನುಭವಿಸಿದ್ದರು. ಬಳಿಕ ಸನ್ನಡತೆಯ ಆಧಾರ ಮೇಲೆ ಅವರನ್ನು ಬಿಡುಗಡೆ ಮಾಡಿಲಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews

Share This Article
Leave a Comment

Leave a Reply

Your email address will not be published. Required fields are marked *