ಮಹಾಭಾರತ ಸೀರಿಯಲ್‍ನ ಭೀಮ್ ಪಾತ್ರಧಾರಿ ಪ್ರವೀಣ್ ಕುಮಾರ್ ಸೋಬ್ತಿ ಇನ್ನಿಲ್ಲ

Public TV
1 Min Read

ಮುಂಬೈ: ಮಹಾಭಾರತ ಟಿವಿ ಸೀರಿಯಲ್‍ನ ಭೀಮ್‍ನ ಪಾತ್ರದಲ್ಲಿ ನಟಿಸಿದ್ದ ಪ್ರವೀಣ್ ಕುಮಾರ್ ಸೋಬ್ತಿ ಅವರು ಸೋಮವಾರ ಫೆಬ್ರವರಿ 7ರ ತಡರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಅವರಿಗೆ ದೀರ್ಘಕಾಲದ ಎದೆಯ ಸೋಂಕಿನ ಸಮಸ್ಯೆ ಇತ್ತು. ಹೀಗಾಗಿ ನಿನ್ನೆ ರಾತ್ರಿ ಅವರ ಎದೆಯಲ್ಲಿ ಗಂಭೀರ ನೋವು ಕಾಣಿಸಿಕೊಂಡಿದ್ದು, ಈ ವೇಳೆ ನಾವು ವೈದ್ಯರನ್ನು ಮನೆಗೆ ಕರೆದಿದ್ದೇವೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ರಾತ್ರಿ 10.30 ರ ಸುಮಾರಿಗೆ ನಿಧನರಾಗಿದ್ದಾರೆ ಎಂದು ಪ್ರವೀಣ್ ಸಂಬಂಧಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಅವರ ಮುಖದಲ್ಲಿ ನಗು ಇತ್ತು – ರೋಗಿಗಳನ್ನು ಸಮಾನವಾಗಿ ನೋಡಿಕೊಳ್ಳಿ ಎಂದಿದ್ದ ಗಾನ ಕೋಗಿಲೆ

ಪ್ರವೀಣ್ ಹ್ಯಾಮರ್ ಮತ್ತು ಡಿಸ್ಕಸ್ ಥ್ರೋನಲ್ಲಿ ವಿವಿಧ ಅಥ್ಲೆಟಿಕ್ ಈವೆಂಟ್‍ಗಳಲ್ಲಿ ದೇಶವನ್ನು ಪ್ರತಿನಿಧಿಸಿದ್ದಾರೆ. 1966 ಮತ್ತು 1970ರಲ್ಲಿ 2 ಚಿನ್ನದ ಪದಕಗಳನ್ನು ಒಳಗೊಂಡಂತೆ ಏಷ್ಯನ್ ಗೇಮ್ಸ್‌ನಲ್ಲಿ 4 ಪದಕಗಳನ್ನು ಗೆದ್ದಿದ್ದಾರೆ. ಇದನ್ನೂ ಓದಿ: ಲತಾ ಮಂಗೇಶ್ಕರ್ ಅವರನ್ನು ಸಚಿನ್ ತೆಂಡೂಲ್ಕರ್ ಏನೆಂದು ಕರೆಯುತ್ತಿದ್ದರು ಗೊತ್ತಾ?

ಪ್ರವೀಣ್ ಕುಮಾರ್ ಸೋಬ್ತಿ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದಕ್ಕಾಗಿ ಪ್ರಸಿದ್ಧರಾಗಿದ್ದರು. ನಟನೆ ಅಲ್ಲದೇ ಕ್ರೀಡಾಕ್ಷೇತ್ರದಲ್ಲೂ ಸೈ ಎನಿಸಿಕೊಂಡಿದ್ದ ಅವರು, 1966ರ ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ ಹ್ಯಾಮರ್ ಥ್ರೋನಲ್ಲಿ ಬೆಳ್ಳಿ ಪದಕವನ್ನು ಗೆದ್ದಿದ್ದಾರೆ.

ಅಥ್ಲೀಟ್ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿದ ನಂತರ ಮತ್ತಷ್ಟು ಜನಪ್ರಿಯತೆಯನ್ನು ಗಳಿಸಿದ್ದರು. 1988 ರಲ್ಲಿ ಬಿಆರ್ ಚೋಪ್ರಾ ಅವರ ಟಿವಿ ಸಿರಿಯಲ್ ಮಹಾಭಾರತದಲ್ಲಿ ಭೀಮ್‍ನ ಪಾತ್ರದಲ್ಲಿ ನಟಿಸಿದ್ದರು. ಅವರು ಪತ್ನಿ, ಪುತ್ರಿ, ಇಬ್ಬರು ಕಿರಿಯ ಸಹೋದರರು ಹಾಗೂ ಓರ್ವ ಸಹೋದರಿಯನ್ನು ಅಗಲಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *