ರಾಯಚೂರು: ಮಹಾಶಿವರಾತ್ರಿ (Maha Shivratri) ಹಿನ್ನೆಲೆ ಗುರುರಾಯರ ಸನ್ನಿಧಿ ಮಂತ್ರಾಲಯ ಶ್ರೀರಾಘವೇಂದ್ರಸ್ವಾಮಿ ಮಠದಲ್ಲಿ (Raghavendraswamy Mutt) ಶಿವಲಿಂಗಕ್ಕೆ ವಿಶೇಷ ಮಹಾರುದ್ರಾಭಿಷೇಕ ನೆರವೇರಿಸಲಾಯಿತು. ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮಿ ರುದ್ರದೇವರಿಗೆ ಅಭಿಷೇಕ ನೆರವೇರಿಸಿದರು.
ಮಠದ ಸಂಸ್ಕೃತ ವಿದ್ಯಾಪೀಠದ ವಿದ್ಯಾರ್ಥಿಗಳು ಹಾಗೂ ಮಠದ ಪಂಡಿತರು ನಿರಂತರವಾಗಿ ಮಂತ್ರಗಳನ್ನ ಪಠಿಸಿದರು. ಮಠದ ಶ್ರೀಗಳು ಮಹಾರುದ್ರಾಭಿಷೇಕದ ಜೊತೆ ವಿವಿಧ ಪೂಜಾ ಕೈಂಕರ್ಯಗಳನ್ನ ನೆರವೇರಿಸಿದರು. ಇದನ್ನೂ ಓದಿ: ರಾಯಚೂರಿನಲ್ಲಿ ಮಹಾಶಿವರಾತ್ರಿ ಸಂಭ್ರಮ – ಮಧ್ಯರಾತ್ರಿಯಿಂದಲೇ ಶಿವಲಿಂಗ ದರ್ಶನ
ಇನ್ನೂ ರಾಯಚೂರು ನಗರದ ಎಲ್ಲಾ ಈಶ್ವರ ದೇವಾಲಯಗಳಲ್ಲೂ ಬೆಳಿಗ್ಗೆಯಿಂದಲೇ ವಿಶೇಷ ಪೂಜಾ ಕೈಂಕರ್ಯಗಳು ಆರಂಭವಾಗಿದ್ದು, ಭಕ್ತರ ದಂಡು ದೇವಾಲಯಗಳಿಗೆ ಹರಿದು ಬರುತ್ತಿದೆ. ನಗರದ ನಂದೀಶ್ವರ ದೇವಾಲಯ, ಚಂದ್ರಮೌಳೇಶ್ವರ ದೇವಾಲಯ, ಕೊದಂಡರಾಮ ದೇವಾಲದ, ಈಶ್ವರ ದೇವಾಲಯಗಳಲ್ಲಿ ಮಹಾಶಿವರಾತ್ರಿ ಜಾಗರಣೆ ಹಿನ್ನೆಲೆ ಸಂಜೆಯಿಂದ ವಿಶೇಷ ಸಂಗೀತ, ಭಜನೆ ಕಾರ್ಯಕ್ರಮಗಳು ಜರುಗಲಿವೆ. ಇದನ್ನೂ ಓದಿ: ಮಹಾ ಶಿವರಾತ್ರಿಯಂದು ಜಾಗರಣೆ ಮಾಡುವುದೇಕೆ?


