ಮಹಾ ಶಿವರಾತ್ರಿ: ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಭಕ್ತರಿಗಾಗಿ ಹೊಸ ಆ್ಯಪ್ ಬಿಡುಗಡೆ

Public TV
2 Min Read

ಲಕ್ನೋ: ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರಿಗಾಗಿ ಶ್ರೀ ಕಾಶಿ ವಿಶ್ವನಾಥ ದೇವಸ್ಥಾನ ಟ್ರಸ್ಟ್ ನಿಂದ ಹೊಸ ಅಪ್ಲಿಕೇಶನ್ ಬಿಡುಗಡೆ ಮಾಡಲಾಗಿದೆ.

ಮಹಾ ಶಿವರಾತ್ರಿಯ ಸಂದರ್ಭದಲ್ಲಿ ಕಾಶಿ ವಿಶ್ವನಾಥನ ದರ್ಶನ ಪಡೆಯಲು ಹಲವು ಭಕ್ತಾದಿಗಳು ತುಂಬಾ ದಿನದಿಂದ ಕಾಯುತ್ತಿರುತ್ತಾರೆ. ಭಕ್ತರಿಗಾಗಿ ದೇವಸ್ಥಾನ ಟ್ರಸ್ಟ್ ಒಂದು ಹೊಸ ಅಪ್ಲಿಕೇಶನ್ ಬಿಟ್ಟಿದೆ. ಈ ಅಪ್ಲಿಕೇಶನ್ ನಲ್ಲಿ ಭಕ್ತರು ನೋಂದಾಯಿಸಿಕೊಳ್ಳುವ ಮೂಲಕ ದರ್ಶನವನ್ನು ಪಡೆಯಬಹುದು. ಈ ಆ್ಯಪ್ ಮೂಲಕ ಯಾವ ವೇಳೆ ಕಾಶಿ ದರ್ಶನ ಪಡೆಯಬೇಕು ಎಂಬುದನ್ನು ತಿಳಿದುಕೊಳ್ಳಬಹುದು. ಆ್ಯಪ್ ನಲ್ಲಿ ದರ್ಶನಕ್ಕೆ ಸರಿಯಾದ ಮಾರ್ಗ ಮತ್ತು ಸಮಯದ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತೆ. ಇದನ್ನೂ ಓದಿ: ಈ ಅಪರೂಪದ ಕೃತಿಯ ದರ್ಶನ ಪಡೆದರೆ ಮಾನವನ ಎಲ್ಲ ಸಂಕಷ್ಟ ದೂರ!

ಆ್ಯಪ್‍ನಲ್ಲಿ ಭಕ್ತರು ನೋಂದಾಯಿಸಿಕೊಂಡರೆ ದೇವಾಲಯದ ಆಡಳಿತವು ಅವರಿಗೆ ಒಂದು ನಿರ್ದಿಷ್ಟ ಸಮಯ ಕೊಟ್ಟು ದೇವರ ದರ್ಶನ ಪಡೆಯುವಂತೆ ಸೂಚಿಸುತ್ತೆ. ಈ ಮೂಲಕ ದೇವಾಲಯದ ಆಡಳಿತ ಮಂಡಳಿಯು ಜನಸಂದಣಿಯನ್ನು ಸರಿಯಾಗಿ ನಿರ್ವಹಿಸಲು ಸಹಾಯ ಮಾಡುತ್ತದೆ.

ಡೌನ್‍ಲೋಡ್ ಮಾಡುವುದು ಹೇಗೆ!
ಮಾಹಿತಿಗಳ ಪ್ರಕಾರ, ಆ್ಯಪ್ ಸದ್ಯಕ್ಕೆ ಪ್ರಾಯೋಗಿಕವಾಗಿ ಕಾರ್ಯನಿರ್ವಹಿಸಲಿದೆ. ಇದನ್ನು ಪ್ಲೇ ಸ್ಟೋರ್‌ನಿಂದ ಡೌನ್‍ಲೋಡ್ ಮಾಡಿಕೊಳ್ಳಬಹುದು. ಅಪ್ಲಿಕೇಶನ್‍ನ ವೈಶಿಷ್ಟ್ಯವೆಂದರೆ ಇದು ಹಿಂದಿ, ಇಂಗ್ಲಿಷ್ ಮತ್ತು ದಕ್ಷಿಣ ಭಾರತದ ಹಲವು ಭಾಷೆಗಳನ್ನು ಹೊಂದಿರುತ್ತದೆ ಎಂದು ತಿಳಿದುಬಂದಿದೆ.

ಯಾವ ರೀತಿ ಇರುತ್ತೆ?
ಶಿವರಾತ್ರಿ(ಮಾರ್ಚ್ 1) ದಿನ ಗಂಗಾನದಿಯ ಕಡೆಯಿಂದಲೂ ಹಲವು ಭಕ್ತರು ಬರತ್ತಾರೆ. ಅದಕ್ಕೆ ಭಕ್ತರಿಗಾಗಿ ಹೊಸ ಮಾರ್ಗವನ್ನು ತೆರೆಯಲಾಗುತ್ತಿದೆ ಎಂದು ವಿಭಾಗೀಯ ಆಯುಕ್ತ ದೀಪಕ್ ಅಗರವಾಲ್ ತಿಳಿಸಿದ್ದಾರೆ. ಅಲ್ಲದೆ ಎಲ್ಲ ಪ್ರವೇಶ ದ್ವಾರಗಳಿಂದ ಗರ್ಭಗುಡಿ ಪ್ರವೇಶಿಸಲು ವ್ಯವಸ್ಥೆ ಮಾಡಲಾಗಿದೆ.

ವಿವಿಧೆಡೆ LED ಅಳವಡಿಸುವ ಮೂಲಕ ಕಾಶಿ ವಿಶ್ವನಾಥ ದೇವಸ್ಥಾನದ ಗರ್ಭಗುಡಿಯ ನೇರ ದರ್ಶನವನ್ನು ಭಕ್ತರಿಗೆ ಮಾಡಿಲಾಗುತ್ತಿದೆ. ವಿವಿಐಪಿಗಳು ಜಲಮಾರ್ಗದ ಮೂಲಕ ಬರುವಂತೆ ಮನವಿ ಮಾಡಲಾಗಿದೆ. ಮೈದಾಗಿನ್ ಮತ್ತು ಗೋಡೋಲಿಯಾದಿಂದ ಯಾವುದೇ ದೊಡ್ಡ ವಾಹನಗಳನ್ನು ಅನುಮತಿಸಲಾಗುವುದಿಲ್ಲ. ವಿಕಲಚೇತನರು ಮತ್ತು ವೃದ್ಧರಿಗಾಗಿ ದೇವಾಲಯದ ಆಡಳಿತ ಮಂಡಳಿಯಿಂದ ಇ-ರಿಕ್ಷಾಗಳನ್ನು ನಡೆಸಲಾಗುವುದು.

ಬ್ಯಾರಿಕೇಡ್ ವ್ಯವಸ್ಥೆ ಮಾಡಲಾಗಿದ್ದು, ವಿವಿಧೆಡೆ ನೀರಿಗಾಗಿ ಹಾಗೂ ರಾತ್ರಿ ವೇಳೆ ನಡೆಯುವ ಕಾರ್ಯಕ್ರಮಗಳಿಗೆ ಸಮರ್ಪಕ ವ್ಯವಸ್ಥೆ ಮಾಡಲಾಗಿದೆ. ಸರತಿ ಸಾಲಿನಲ್ಲಿ ನಿಲ್ಲಲು ಆವರಣದಲ್ಲಿ ಸ್ಟೀಲ್ ರೇಲಿಂಗ್‍ಗಳನ್ನು ಅಳವಡಿಸಲಾಗುವುದು. ದೇವಾಲಯದಲ್ಲಿ ಟ್ಯಾಬ್ಲೋ ದರ್ಶನದ ವ್ಯವಸ್ಥೆಯು ಮುಂದುವರಿಯುತ್ತದೆ. ಈ ಮೂಲಕ ಭಕ್ತರಿಗೆ ದರ್ಶನ ಸುಲಭವಾಗಲಿದೆ. ಇದನ್ನೂ ಓದಿ: ಕೇವಲ 13 ಗಂಟೆಯಲ್ಲಿ 135 ಕಿ.ಮೀ ಬಂದ ಎತ್ತಿನ ಚಕ್ಕಡಿ – ಎತ್ತುಗಳಿಗೆ ಅದ್ಧೂರಿ ಸ್ವಾಗತ

ಶ್ರೀ ಕಾಶಿ ವಿಶ್ವನಾಥ ಧಾಮದ ನಿರ್ಮಾಣದ ನಂತರ, ಇದು ಮಹಾ ಶಿವರಾತ್ರಿಯ ಮೊದಲ ಆಚರಣೆಯಾಗಿದೆ. ವಿವಿಧ ಆಚರಣೆಗಳು ಮತ್ತು ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ನಗರದಲ್ಲಿ ಬಿಗಿ ಭದ್ರತೆ ಮಾಡುವಂತೆ ಪೊಲೀಸ್ ಸಿಬ್ಬಂದಿಗೆ ಎಚ್ಚರಿಕೆ ನೀಡಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *