ಪಾಕಿಸ್ತಾನದಲ್ಲಿ 5.3 ತೀವ್ರತೆಯ ಭೂಕಂಪ – ಜಮ್ಮು-ಕಾಶ್ಮೀರದಲ್ಲೂ ಭೂಮಿ ಕಂಪಿಸಿದ ಅನುಭವ

Public TV
1 Min Read

ಇಸ್ಲಾಮಾಬಾದ್‌: ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‌ (Islamabad) ಬಳಿ ಇಂದು 5.3 ತೀವ್ರತೆಯ ಭೂಕಂಪ (Earthquake) ಸಂಭವಿಸಿದೆ ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (NCS) ವರದಿಮಾಡಿದೆ.

ಶನಿವಾರ (ಇಂದು) ಮಧ್ಯಾಹ್ನ 1 ಗಂಟೆ ಸುಮಾರಿಗೆ ಭೂಕಂಪ ಸಂಭವಿಸಿದೆ, ಇದರ ಪರಿಣಾಮ ಜಮ್ಮು ಮತ್ತು ಕಾಶ್ಮೀರದಲ್ಲೂ (Jammu and Kashmir) ಭೂಮಿ ಕಂಪಿಸಿದ ಅನುಭವವಾಗಿದೆ. ಎನ್‌ಸಿಎಸ್‌ ಪ್ರಕಾರ, ಭೂಕಂಪನದ ಕೇಂದ್ರಬಿಂದು ಭೂಮಿಯಿಂದ 10 ಕಿಮೀ ಆಳದಲ್ಲಿ ಪತ್ತೆಯಾಗಿದೆ. ಇದನ್ನೂ ಓದಿ: ಟ್ರಂಪ್‌ Vs ಕ್ಸಿ ಜಿನ್‌ಪಿಂಗ್‌ – ಈಗ ಅಮೆರಿಕದ ವಸ್ತುಗಳಿಗೆ 125% ತೆರಿಗೆ ಹಾಕಿದ ಚೀನಾ

ಸ್ಥಳೀಯ ಮಾಧ್ಯಮಗಳ ವರದಿ ಪ್ರಕಾರ, ಭೂಕಂಪ ಸಂಭವಿಸಿದ ಬಳಿಕ ಇಸ್ಲಾಮಾಬಾದ್‌ನಲ್ಲಿ ಯಾವುದೇ ಹಾನಿಯಾಗಲಿ, ಸಾವು-ನೋವುಗಳಾಗಲಿ ಸಂಭವಿಸಿಲ್ಲ. ಈ ಕುರಿತು ಹೆಚ್ಚಿನ ಪರಿಶೀಲನೆ ನಡೆಸಲಾಗುತ್ತಿದೆ. ಇದನ್ನೂ ಓದಿ: ಆಕಾಶದಲ್ಲೇ ತುಂಡಾದ ಹೆಲಿಕಾಪ್ಟರ್‌ನ ಫ್ಯಾನ್‌ – ಐವರು ದುರ್ಮರ

 

ಕೆಲ ದಿನಗಳ ಹಿಂದೆಯಷ್ಟೇ ಮ್ಯಾನ್ಮಾರ್‌ ಮತ್ತು ಥಾಯ್ಲೆಂಡ್‌ನಲ್ಲಿ ಸಂಭವಿಸಿದ್ದ ಭೂಕಂಪ ಸಾವಿರಾರು ಜನರನ್ನು ಬಲಿ ಪಡೆದಿತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದು. ಇದನ್ನೂ ಓದಿ: ಯಹೂದಿಗಳ ವಿರುದ್ಧ ಪೋಸ್ಟ್ ಹಾಕಿದ್ರೆ ವೀಸಾ, ಗ್ರೀನ್ ಕಾರ್ಡ್ ನೀಡಲ್ಲ – ವಲಸಿಗರಿಗೆ ಅಮೆರಿಕ ಎಚ್ಚರಿಕೆ

Share This Article