ಒಕ್ಕಲಿಗರು ನಂಬಿದ್ದ ಜೆಡಿಎಸ್ ಅನ್ನು ಮೋದಿ ಪಾದಕ್ಕೆ ಹೆಚ್‌ಡಿಕೆ ಅಡ ಇಟ್ಟಿದ್ದಾರೆ: ಹೆಚ್.ಸಿ ಬಾಲಕೃಷ್ಣ

Public TV
1 Min Read

ರಾಮನಗರ: ಜೆಡಿಎಸ್ ಪಕ್ಷಕ್ಕೆ ಬೆಂಬಲವಾಗಿ ನಿಂತಿದ್ದು ಒಕ್ಕಲಿಗ ಸಮುದಾಯ. ಒಕ್ಕಲಿಗರೆಲ್ಲಾ ಜೆಡಿಎಸ್ (JDS Party) ಪಕ್ಷವನ್ನ ನಂಬಿದ್ದರು. ಅಂತಹ ಪಕ್ಷವನ್ನು ತೆಗೆದುಕೊಂಡು ಹೋಗಿ ಮೋದಿ ಪಾದಕ್ಕೆ ಅಡ ಇಟ್ಟಿದ್ದೀರಿ. ಈಗ ಒಕ್ಕಲಿಗರ ಸ್ಥಿತಿ ಏನಾಗಬೇಕು ಎಂದು ಹೆಚ್ಡಿಕೆ ವಿರುದ್ಧ ಮಾಗಡಿ ಶಾಸಕ ಹೆಚ್.ಸಿ.ಬಾಲಕೃಷ್ಣ ತಿರುಗೇಟು ನೀಡಿದ್ದಾರೆ.

ಮೈತ್ರಿ ಸರ್ಕಾರದಲ್ಲಿ ಸಿಎಂ ಕ್ಯಾಂಡಿಡೇಟ್ ಅಂತ ಹೆಚ್‌ಡಿಕೆ ಅವರನ್ನು ಘೋಷಣೆ ಮಾಡಲು ಸಾಧ್ಯವೇ.? ಅವರು ಘೋಷಣೆ ಮಾಡಿಸಲಿ ನಾವೂ ಸಪೋರ್ಟ್ ಮಾಡ್ತೇವೆ. ಒಕ್ಕಲಿಗರ ಪಾರುಪತ್ಯ ಇದ್ದ ಜನತಾದಳದ ಕಥೆ ಮುಗಿಸಿದ್ದಾರೆ. ಈ ಪಕ್ಷವನ್ನ ಮೋದಿ ಪಾದಕ್ಕೆ ಅಡ ಇಟ್ಟಿದ್ದಾರೆ. ಮುಂದೆ ಕುಮಾರಸ್ವಾಮಿ ಅವರ ಸ್ಥಿತಿ ಏನು.? ಈಗ ಎರಡು ಸೀಟ್ ಪಡೆಯೋಕೆ ತಿಣುಕಾಡ್ತಿದ್ದಾರೆ. ಅವರು ಯಾವ ಪಕ್ಷದ ಜೊತೆ ಹೋದರೂ ಅಸಮಾಧಾನ ಹೊರಹಾಕ್ತಾರೆ. ಇನ್ನೂ ಒಂದು ತಿಂಗಳ ಬಳಿಕ ಮೋದಿ, ಅಮಿತ್ ಶಾ ಅವರನ್ನು ಹೇಗೆ ಬೈತಾರೆ ನೋಡಿ. ಅವರು ಎಲ್ಲೋದ್ರು ಕೂಡಾ ಎಲ್ಲರನ್ನೂ ಬೈದುಕೊಂಡೆ ಆಚೆ ಬರ್ತಾರೆ‌ ಎಂದು ಹೆಚ್‌ಡಿಕೆ ವಿರುದ್ಧ ಮಾಗಡಿ ಶಾಸಕ ಹೆಚ್. ಸಿ.ಬಾಲಕೃಷ್ಣ (HC Balakrishna) ವಾಗ್ದಾಳಿ ನಡೆಸಿದ್ದಾರೆ.

ಕುಮಾರಸ್ವಾಮಿ ಯಾವಾಗಲೂ ಗಿಮಿಕ್ ರಾಜಕಾರಣಿ. ಈ ರೀತಿ ವಿರೋಧಿಗಳ ಮೇಲೆ ಅಪಪ್ರಚಾರ ಮಾಡಿ ಅನುಕಂಪ ಗಿಟ್ಟಿಸಿಕೊಳ್ಳಲು ಮಾತನಾಡ್ತಾರೆ. ಚುನಾವಣೆ ಅಂದಮೇಲೆ ಎಲ್ಲವೂ ಇರುತ್ತೆ. ಚಾಣಕ್ಯನ ತಂತ್ರ ಕುಮಾರಸ್ವಾಮಿಗೆ ಹೆಚ್ಚು ಗೊತ್ತು. ಅದನ್ನ ಇಲ್ಲಿ ಉಪಯೋಗಿಸಿಕೊಳ್ತಿದ್ದಾರೆ. ಅನುಕಂಪದ ಅಲೆ ಗಿಟ್ಟಿಸಿಕೊಳ್ಳಲು ಮುಂದಾಗಿದ್ದಾರೆ. ಇದು ಇನ್ಮುಂದೆ ನಡೆಯಲ್ಲ ಎಂದು ಹೆಚ್‌ಡಿಕೆಗೆ ಬಾಲಕೃಷ್ಣ ತಿರುಗೇಟು ನೀಡಿದ್ದಾರೆ.

Share This Article